ದೇಶಿ ಉಡುಪು ಮೈ-ಮನಸ್ಸಿಗೆ ಹಿತ, ಬಿಜೆಪಿ ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಆಶಾ ಶಿವಪ್ರಸಾದ ಕ್ಯಾತ್ನಟ್ಟಿ ಹೇಳಿಕೆ

PROTEST
ಮಸ್ಕಿಯಲ್ಲಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಅಂಗವಾಗಿ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಕೈ ಮಗ್ಗದ ಬಟ್ಟೆಗಳ ಕುರಿತು ಜಾಗೃತಿ ಜಾಥ ನಡೆಯಿತು. ಪ್ರಮುಖರಾದ ಆಶಾ ಶಿವಪ್ರಸಾದ ಕ್ಯಾತ್ನಟ್ಟಿ, ಅಮೃತಾ ಜೋಗಿನ್, ಪುಷ್ಪಾ ಬಿಜ್ಜಳ, ವಿಜಯಲಕ್ಷ್ಮೀ ಹಳ್ಳಿ, ರಾಜೇಶ್ವರಿ ಪಾಟೀಲ, ಸುರ್ವಣಾ ಬ್ಯಾಳಿ, ಚಂದ್ರಕಲಾ ದೇಶಮುಖ, ಸೌಮ್ಯಾ ಸಾನಬಾಳ, ಪವಿತ್ರಾ ಸಾನಬಾಳ, ಶಾಂತಮ್ಮ ಧನಶಟ್ಟಿ ಇತರರಿದ್ದರು.
Published on

ಮಸ್ಕಿ: ಸ್ವದೇಶಿ ಉತ್ಪನ್ನಗಳಾದ ಖಾದಿ ಬಟ್ಟೆ ತೊಡುವುದರಿಂದ ಮೈ-ಮನಸ್ಸಿಗೆ ಹಿತಾನುಭಾವದ ಜತೆಗೆ ಸ್ಥಳೀಯ ನೇಕಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಆಶಾ ಶಿವಪ್ರಸಾದ ಕ್ಯಾತ್ನಟ್ಟಿ ಹೇಳಿದರು.

ಪಟ್ಟಣದ ಸೋಮನಾಥ ನಗರದಲ್ಲಿ ಗುರುವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸ್ವದೇಶಿ ವಸ್ತುಗಳ ಬಳಕೆ ಮತ್ತು ಕೈ ಮಗ್ಗದ ಬಟ್ಟೆಗಳ ಕುರಿತು ಮಾಹಿತಿ ನೀಡಿದರು.

ಸ್ವಾತಂತ್ರೃ ಪೂರ್ವದಲ್ಲಿ ಮಹಾತ್ಮ ಗಾಂಧಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ ಯೋಜನೆ ಮೂಲಕ ಸ್ವದೇಶಿ ಉತ್ಪನ್ನಗಳ ತಯಾರಿಕೆ, ಮಾರಾಟ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದು ಇಲ್ಲಿ ಉತ್ಪಾದಿಸುವ ವಸ್ತುಗಳಿಗೆ ವ್ಯವಸ್ಥಿತ ಮಾರಾಟ ಜಾಲ ರೂಪಿಸಿ ನೇಕಾರರು ಆರ್ಥಿಕವಾಗಿ ಸದೃಢವಾಗುವಂತೆ ಮಾಡುವುದು ಕೇಂದ್ರದ ಗುರಿ ಎಂದರು.

ಪ್ರಧಾನಿಯವರು ಪ್ರತಿ ತಾಲೂಕಿಗೆ 2 ಕೋಟಿ ರೂ. ಮುದ್ರಾ ಯೋಜನೆ ಮೂಲಕ ಕುಶಲ ಕರ್ಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

ಮೆರವಣಿಗೆ: ನಮ್ಮ ನಡೆ ಕೈ ಮಗ್ಗದ ಕಡೆ ಘೋಷ ವಾಖ್ಯದಂತೆ ಮಸ್ಕಿ ಪಟ್ಟಣದಲ್ಲಿ ನೂರಕ್ಕೂ ಅಧಿಕ ಮಹಿಳೆಯರು ಕೈ ಮಗ್ಗದ ಉಡುಪಗಳನ್ನು ಹಾಗೂ ಇಳಕಲ್ ಸಿರೆಗಳನ್ನು ಧರಿಸಿ ಜಾಗೃತಿ ಜಾಥಾ ನಡೆಸಿದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಸೋಮನಾಥ ದೇವಸ್ಥಾನದವರೆಗೆ ನಡೆಯಿತು.

ಅಮೃತಾ ಜೋಗಿನ್, ಪುಷ್ಪಾ ಬಿಜ್ಜಳ, ವಿಜಯಲಕ್ಷ್ಮೀ ಹಳ್ಳಿ, ರಾಜೇಶ್ವರಿ ಪಾಟೀಲ, ಸುರ್ವಣಾ ಬ್ಯಾಳಿ, ಚಂದ್ರಕಲಾ ದೇಶಮುಖ, ಸೌಮ್ಯಾ ಸಾನಬಾಳ, ಪವಿತ್ರಾ ಸಾನಬಾಳ, ಶಾಂತಮ್ಮ ಧನಶಟ್ಟಿ, ದುರ್ಗಮ್ಮ ಕಾಂಬಳೆ, ಅಕ್ಕಮ್ಮ ಅಡವಿಬಾವಿ ತಾಂಡ, ಪಾರ್ವತಿ ಹಸಮಕಲ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net