ಪ್ರತಿದಿನ ಒಬ್ಬೊಬ್ಬರ ಜತೆ ಮಲಗಬೇಕು, ಅವರಿಗೆ ಬೇಕಿರುವುದು ತೃಪ್ತಿ ಅಷ್ಟೇ; ಪೋರ್ನ್​ ಸ್ಟಾರ್ ಬಿಚ್ಚಿಟ್ಟ​ ಕರಾಳ ಸತ್ಯ…

Lana Rhoades
Published on

ನವದೆಹಲಿ: ಟಾಪ್​ ಪೋರ್ನ್​ ಸ್ಟಾರ್​ ಪಟ್ಟಿಯಲ್ಲಿರುವ ಲಾನಾ ರೋಡ್ಸ್ 19 ವರ್ಷ ವಯಸ್ಸಿಗೆ ತಾನು ಈ ಕರಾಳ ಲೋಕಕ್ಕೆ ಹೇಗೆ ಎಂಟ್ರಿಯಾದೆ? ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾಳೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಮನೆಯಲ್ಲಿ ಕಷ್ಟವಿತ್ತು. ಹಣ ಸಂಪಾದನೆ ಮಾಡಬೇಕಿತ್ತು. ಏಜೆಂಟ್​ ಒಬ್ಬ ನನ್ನನ್ನು ಪೋರ್ನ್​ ಲೋಕಕ್ಕೆ ಕರೆದುಕೊಂಡ ಹೋದ. ಪ್ರತಿ ದಿನವೂ 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯ ಜತೆ ಮಲಗಬೇಕಿತ್ತು. ಹೇಳಿಕೊಳ್ಳಲಾಗದ ನೋವು ಅನುಭವಿಸಿದ್ದೇನೆ. ನನಗೆ ಏನಾಗುತ್ತಿದೆ ಎಂದೇ ತಿಳಿದಿರಲಿಲ್ಲ. ವಿಡಿಯೋ ಮಾಡುತ್ತಿದ್ದ ಅರಿವೂ ನನಗೆ ಇರಲಿಲ್ಲ ಎಂದಿದ್ದಾರೆ.

ಅದೊಂದು ದಿನ ಆ ವಿಡಿಯೋ ನೋಡಿದಾಗ ಅದರಲ್ಲಿ ಇದ್ದದ್ದು ನಾನೇ ಎಂದು ನೋಡಿದಾಗ ನಾನು ಏನು ಮಾಡುತ್ತಿದ್ದೇನೆ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋದರು ಎನ್ನುವ ಅರಿವಾಯ್ತು. ಅದಾಗಲೇ ನನ್ನ ವಿಡಿಯೋಗಳು ಟಾಪ್​ ಲೆವೆಲ್​ನಲ್ಲಿ ಓಡುತ್ತಿತ್ತು. ಈ ವೃತ್ತಿಗೆ ಹೋಗಿ ಎಂಟೇ ತಿಂಗಳಿನಲ್ಲಿ ನನಗೆ ನಾನು ಎಲ್ಲಿದ್ದೇನೆ ಎನ್ನುವ ಅರಿವಾಗಿ ಅದನ್ನು ಬಿಟ್ಟುಬಂದೆ. ಆದರೆ ಅದ್ಯಾವ ವಿಡಿಯೋ ಕೂಡಾ ಟಿಲೀಟ್​​ ಆಗಿಲ್ಲ ಎಂದಿದ್ದಾರೆ.

ಪೋರ್ನ್​ ಸ್ಟಾರ್​ನಿಂದ ಹೊರ ಬಂದ ಮೇಲೆ ಹಲವಾರು ಯುಟ್ಯೂಬರ್​, ಇನ್​ಸ್ಟಾಗ್ರಾಮರ್​ ಸೇರಿದಂತೆ ಪ್ರಭಾವಿಗಳನ್ನು ಭೇಟಿಯಾದೆ. ಪೋರ್ನ್​ ವಿಡಿಯೋ ಮಾಡಿ ಬರುವ ಹಣಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಹಣ ಅವರು ಕೇವಲ ಪೋಸ್ಟ್​ ಹಾಕುವ ಮೂಲಕ ಗಳಿಸುತ್ತಾರೆ ಎಂದು ತಿಳಿಯಿತು ಎಂದಿದ್ದಾರೆ.

ನನ್ನಂತೆಯೇ ಸರಿಯಾದ ಮಾರ್ಗದರ್ಶನವಿಲ್ಲದೇ ಅದೆಷ್ಟೋ ಹುಡುಗಿಯರು ಪೋರ್ನ್​ ಲೋಕಕ್ಕೆ ಹೋಗುತ್ತಿದ್ದಾರೆ. ಈ ವೃತ್ತಿಯಿಂದ ತುಂಬಾ ಹಿಂಸೆ ಅನುಭವಿಸಿದ್ದೇನೆ. ಜೀವನದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ದಿಢೀರ್​ ದುಡ್ಡು ಮಾಡುವ ಹಂಬದಲ್ಲಿ ತಾವೆಂಥ ಲೋಕಕ್ಕೆ ಹೋಗುತ್ತಿದ್ದೇವೆ ಎನ್ನುವ ಅರಿವಿಲ್ಲದ ಅದೆಷ್ಟೋ ಮಂದಿಯಲ್ಲಿ ನಾನೂ ಒಬ್ಬಳಾಗಿ ಹೋದೆ. ನನ್ನ ವಿಡಿಯೋಗಳು ಡಿಲೀಟ್​ ಆಗಿಲ್ಲ. ಅವುಗಳನ್ನು ನೋಡಿದಾಗಲೆಲ್ಲಾ ನನಗೆ ನೋವಾಗುತ್ತದೆ ಎಂದಿದ್ದಾರೆ.

ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಅರ್ಥವೇ ಆಗುವುದಿಲ್ಲ. ಆದರೆ ಒಮ್ಮೆ ಪೋರ್ನ್​ ಲೋಕಕ್ಕೆ ಹೋಗಿಬಿಟ್ಟರೆ ಈ ಮಾತನ್ನು ಹೇಳಿದರೂ ಯಾರೂ ನಂಬುವುದಿಲ್ಲ. ಪುರುಷರಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಅವರಿಗೆ ಬೇಕಿರುವುದು ತೃಪ್ತಿ ಅಷ್ಟೇ. ಆದರೆ ಕೊನೆಗೆ ಬಲಿಯಾಗುವುದು ಹುಡುಗಿಯರು ಮಾತ್ರ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net