ಲಕ್ಷ್ಮಣಾಗ್ರಜರಾಮ ಮನುಷ್ಯ ಸಂಘಜೀವಿ

Ram Lakshman
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ಜೊತೆಗಿದ್ದು ಬಾಳಿ ಬದುಕಬೇಕಾದವನು. ಮನಸ್ಸು ಪಕ್ವವಾಗಿ ಋಣ ತೀರಿದ ಬಳಿಕ ದೂರ ನಿಲ್ಲುವುದು ಸಾಧನೆಯ ಕೊನೆಯ ಹಂತ. ಮನೆ ಎಂದ ಮೇಲೆ ಎಲ್ಲ ಬಾಂಧವ್ಯಗಳನ್ನು ಅನುಸರಿಸಬೇಕು. ರಾಮ ತನ್ನ ಸೋದರ ಲಕ್ಷ ್ಮನಲ್ಲಿ ತೋರಿದ ಅನನ್ಯ ಪ್ರೀತಿಯನ್ನು ಇನ್ನೆಲ್ಲಿ ಹುಡುಕಿದರೂ ಸಿಗದು. ಲಕ್ಷ ್ಮ ಅಣ್ಣನಿಗಾಗಿ ಮಾಡಿದ ತ್ಯಾಗ ಮತ್ತೆಮತ್ತೆ ನೆನಪಿಸಿಕೊಳ್ಳುವಂಥದ್ದು. ಅವರ ನಡುವಿನ ಬಾಂಧವ್ಯ ಹೇಳಿ ಮುಗಿಸಲಾಗದ್ದು.

ಬಾಲ್ಯಾತ್ ಪ್ರಭೃತಿ ಸುಸ್ನಿಗ್ಧೋ ಲಕ್ಷ ್ಮೋ ಲಕ್ಷಿ ್ಮರ್ಧನಃ| ಸರ್ವಪ್ರಿಯಕರಸ್ತಸ್ಯ ರಾಮಸ್ಯಾಪಿ ಶರೀರತಃ|| ಲಕ್ಷ ್ಮೋ ಲಕ್ಷಿ ್ಮಂಪನ್ನೋ ಬಹಿಃ ಪ್ರಾಣ ಇವಾಪರಃ|
ಹುಟ್ಟಿದಾಗಿನಿಂದ ಲಕ್ಷಣವಂತನಾದ ಲಕ್ಷ ್ಮ ರಾಮನನ್ನು ಅಂಟಿಕೊಂಡೇ ಓಡಾಡುತ್ತಿದ್ದ. ರಾಮನಿಗೆ ಸರ್ವದಾ ಪ್ರಿಯವಾದ ಕಾರ್ಯದಲ್ಲಿ ತೊಡಗಿರುತ್ತಿದ್ದ. ಲಕ್ಷ ್ಮನೆಂದರೆ ಶರೀರದಿಂದ ಹೊರಗೆ ಓಡಾಡುವ ರಾಮನ ಪ್ರಾಣವೇ ಸರಿ. ರಾಮನು ಲಕ್ಷ್ಮಣನನ್ನು ಅಷ್ಟೇ ಮೆಚ್ಚಿಕೊಂಡಿದ್ದ.

ನ ಚ ತೇನ ವಿನಾ ನಿದ್ರಾಂ ಲಭತೇ ಪುರುಷೋತ್ತಮಃ| ಮೃಷ್ಟಮನ್ನಮುಪಾನೀತಂ ಅಶ್ನಾತಿ ನ ಹಿ ತಂ ವಿನಾ||
ಲಕ್ಷ್ಮಣ ಪಕ್ಕದಲ್ಲಿ ಬಂದು ಮಲಗಿಲ್ಲವಾದರೆ ರಾಮನಿಗೆ ನಿದ್ದೆ ಇರುತ್ತಿರಲಿಲ್ಲ. (ನಾರಾಯಣನಿಗೆ ಶೇಷನೇ ಹಾಸಿಗೆಯಲ್ಲವೇ?) ರುಚಿಯಾದ, ಶುಚಿಯಾದ ಏನೇ ತಿನ್ನುವ ಪದಾರ್ಥ ಸಿಕ್ಕಿದರೂ ಲಕ್ಷ್ಮಣನೊಂದಿಗೆ ಹಂಚಿಯೇ ತಿನ್ನುತ್ತಿದ್ದ.

ರಾಮ ಬೇಟೆಗೆ ಹೊರಟರೆ ತಾನು ಕಾವಲಾಗಿ ಜೊತೆಗೆ ಇರುತ್ತಿದ್ದ. ರಾಮನನ್ನು ಕ್ಷಣಮಾತ್ರವು ಬಿಟ್ಟು ಅಗಲುತ್ತಿರಲಿಲ್ಲ. ರಾಮ ತನಗೆ ರಾಜ್ಯ ಬೇಡವೆಂದು ಕಾಡಿಗೆ ಹೊರಟಾಗ ತಾನು ಸೇವಕನಾಗಿ ನಿಂತ. ಮುಂದೆ ಯೌವ್ವರಾಜ್ಯ ಪಡೆಯುವ ಅವಕಾಶ ಬಂದಾಗಲೂ ರಾಮನಿಗೆ ಸಹಾಯಕನಾಗಿ ನಿಂತ. ಸೋದರರೆಂದರೆ ರಾಮ-ಲಕ್ಷ ್ಮರಂತಿರಬೇಕು ಎನ್ನುವಷ್ಟು ಮಾದರಿ ಪ್ರೀತಿ ಅವರಿಬ್ಬರದ್ದಾಗಿತ್ತು. ಕಾಡಿನಲ್ಲಿ ಯಾವಾಗಲೂ ಸೀತೆಯನ್ನು ಕರೆದೊಯ್ಯುವಾಗ ಮುಂದೆ ರಾಮ ಹಿಂದೆ ಲಕ್ಷ ್ಮನಿರುತ್ತಿದ್ದ. ನಮ್ಮನಮ್ಮ ಮನೆಗಳಿಂದ ಹೊರಡುವಾಗಲೂ ಪಯಣ ಕ್ಷೇಮವಾಗಿರಲೆಂದು ಪ್ರಾರ್ಥಿಸುವ ಕ್ರಮ ಇದೆ. ಇದನ್ನು ಪ್ರಾರ್ಥಿಸಿದವನ ಬಾಳಪಯಣವೂ ಮಂಗಳಮಯವಾಗಿರುತ್ತದೆ.

ಅಗ್ರತಃ ಪೃಷ್ಠತಶ್ಒ್ಯೆವ ಪಾರ್ಶ್ವತಶ್ಚ ಧನುರ್ಧರೌ| ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮ ಲಕ್ಷ್ಮಣೌ||
ಹಿಂದೆ ಮುಂದೆ ಎಡಕ್ಕೆ ಬಲಕ್ಕೆ ಎಲ್ಲೆಡೆಯೂ ನಮ್ಮ ದಾರಿಯನ್ನು ಕಿರಿಯವರೆಗೆ ಹಗ್ಗವನ್ನು ಎಳೆದು ಹಿಡಿದ ಧನುಸ್ಸುಳ್ಳ ವೀರರಾದ ರಾಮ ಲಕ್ಷ್ಮಣರು ರಕ್ಷಿಸಲಿ.

ಅಗ್ರತೋ ನಾರಸಿಂಹಶ್ಚ ಪೃಷ್ಠತೋ ಗೋಪಿನಂದನಃ| ಉಭಯೋಃ ಪಾರ್ಶ್ವಯೋರಾಸ್ತಾಂ ಸಶರೌ ರಾಮಲಕ್ಷ್ಮಣೌ||
ನರಸಿಂಹ ಮುಂದಿರಲಿ. ಹಿಂದೆ ಗೋರಕ್ಷಕನಾದ ಕೃಷ್ಣನಿರಲಿ. ನನ್ನ ಎರಡು ಬದಿಗಳಲ್ಲಿ ಹೆದೆ ಏರಿಸಿದ ರಾಮ-ಲಕ್ಷ ್ಮರಿರಲಿ. ನನ್ನ ಪಯಣವನ್ನು ಸುಗಮಗೊಳಿಸಲಿ. ಹೀಗೆ ಲಕ್ಷ ್ಮನು ರಾಮನ ಸೇವೆಯನ್ನು ಮಾಡಿ ನಮ್ಮ ಪ್ರಾರ್ಥನೆಯ ಅವಿಭಾಜ್ಯ ಅಂಗವಾಗಿದ್ದಾನೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net