ಕೆರೆ ನೀರು ಹೋರಾಟ 9ನೇ ದಿನಕ್ಕೆ

Published on

ಗೌರಿಬಿದನೂರು: ನಗರಕ್ಕೆ ವಾಟದಹೊಸಹಳ್ಳಿ ಕೆರೆ ನೀರು ಪೂರೈಸುವ ಯೋಜನೆ ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ಆ.15ರ ಸ್ವಾತಂತ್ರ$್ಯ ದಿನಾಚರಣೆ ಬಳಿಕ ತೀವ್ರ ಸ್ವರೂಪದಲ್ಲಿ ನಡೆಸಲು ನಿರ್ಧರಿಸಲಾಗಿದೆ. ನಗರದ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿಗೆ 8ನೇ ದಿನ ವಿವಿಧ ಸಂಟನೆಗಳು ಬೆಂಬಲ ಸೂಚಿಸಿದವು. ಮಂಗಳವಾರ ಸಂಜೆ ಹೋರಾಟಗಾರರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಮನವಿ ಸಲ್ಲಿಸಿದರು. ಸರ್ಕಾರದ ಮೇಲೆ ಒತ್ತಡ ಹೇರಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು. 8 ದಿನಗಳಿಂದ ಧರಣಿ ನಡೆಸುತ್ತಿದ್ದರೂ ತಾಲೂಕು ಮತ್ತು ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.ಯೋಜನೆ ಕೈಬಿಟ್ಟು ನಗರಕ್ಕೆ ಇತರ ಮೂಲಗಳಿಂದ ನೀರು ಪೂರೈಸಲು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಆ.15ರ ನಂತರ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು. 8ನೇ ದಿನ ಗುಂಡ್ಲಕೊತ್ತೂರು ಗ್ರಾಪಂನಿಂದ ಹೋರಾಟಕ್ಕೆ ಬೆಂಬಲ ವ್ಯಕ್ತವಾಯಿತು. ನಕ್ಕಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಸಿ.ಜಿ.ಗಂಗಪ್ಪ,ಪಿ.ನರಸಿಂಹ ಮೂರ್ತಿ, ಎಸ್​.ಎನ್​.ಆದಿನಾರಾಯಣಪ್ಪ, ನಾರಾಯಣ ಸ್ವಾಮಿ, ಅಶ್ವತ್ಥಪ್ಪ, ಗಂಗಾಧರಪ್ಪ, ನಂಜುಂಡಪ್ಪ, ಓಬಳೇಶಪ್ಪ, ಗೋಪಾಲ, ವೆಂಕಟೇಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net