ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಸಬ್​ ಇನ್ಸ್​ಪೆಕ್ಟರ್ ಲವ್​ ಕಹಾನಿ!

Lady SI
Published on

ವಿಜಯವಾಡ: ವಿವಾಹಿತ ಕಾನ್ಸ್​ಟೇಬಲ್​ ಹಾಗೂ ಮಹಿಳಾ ಪೊಲೀಸ್​​ ಸಬ್​ ಇನ್ಸ್​ಪೆಕ್ಟರ್ ಲವ್ವಿಡವ್ವಿ ಪ್ರಕರಣವು ಆಂಧ್ರ ಪ್ರದೇಶದ ನೆಲ್ಲೂರ್​ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಬ್ಬರ ನಡುವಿನ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿಯ ಗಮನಕ್ಕೆ ಬಂದು ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿದರೂ ಸಹ ಅವರಿಬ್ಬರ ಲವ್​ ಕಹಾನಿ ಹಾಗೇ ಮುಂದುವರಿದಿರುವುದು ವಿವಾಹಿತ ಕಾನ್ಸ್​ಟೇಬಲ್​ ಪತ್ನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಘಟನೆಯ ವಿವರಣೆಗೆ ಬರುವುದಾದರೆ ಮಹಿಳಾ ಎಸ್​ಐ ರೋಜಲತಾ ನೆಲ್ಲೂರ್​ ಜಿಲ್ಲೆಯ ಅತ್ಮಕುರು ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿರುವ ಸಾಯಿ ಜತೆ ಸಲುಗೆ ಬೆಳೆಸಿಕೊಂಡಿದ್ದಾರೆ. ಇದೇ ಸಲುಗೆಯು ಇಬ್ಬರ ನಡುವೆ ವಿವಾಹೇತರ ಸಂಬಂಧವನ್ನು ಹುಟ್ಟುಹಾಕಿದೆ. ಕಾನ್ಸ್​ಟೇಬಲ್​ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ, ಎಸ್​ಐ ಜತೆ ಸಂಬಂಧ ಹೊಂದಿರುವುದು ಜಿಲ್ಲಾ ಪೊಲೀಸ್​ ಸರ್ಕಲ್​ನಲ್ಲಿ ಬಹು ಚರ್ಚಿತ ವಿಷಯವಾಗಿದೆ.

ಇಬ್ಬರ ಕುರಿತು ಸಾಕಷ್ಟು ದೂರುಗಳ ಬಂದ ಬಳಿಕ ಮೇಲಾಧಿಕಾರಿಗಳನ್ನು ಇಬ್ಬರನ್ನು ಬೇರೆ ಬೇರೆ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಆದರೂ ತಮ್ಮ ಸಂಬಂಧವನ್ನು ನಿಲ್ಲಿಸಿಲ್ಲ. ಅಚ್ಚರಿಯೆಂದರೆ ಮಹಿಳಾ ಎಸ್​ಐ, ಕಾನ್ಸ್​ಟೇಬಲ್​ ಮನೆಯಲ್ಲೇ ವಾಸವಿದ್ದಾರೆ. ಇದರಿಂದ ಮುಜುಗರಕ್ಕೀಡಾಗಿರುವ ಕಾನ್ಸ್​ಟೇಬಲ್​ ಪತ್ನಿ ರೇಖಾ ಈ ವಿಚಾರವನ್ನು ಪೊಲೀಸ್​ ವರಿಷ್ಠಾಧಿಕಾರಿಯ ಗಮನಕ್ಕೆ ತಂದಿದ್ದಾರೆ.

ಏನೇ ಮಾಡಿದರೂ ಇಬ್ಬರು ಮಾತ್ರ ತಮ್ಮ ಸಂಬಂಧವನ್ನು ನಿಲ್ಲಿಸಿಲ್ಲ. ಆದರೂ ತನ್ನ ಪ್ರಯತ್ನ ನಿಲ್ಲಿಸದ ರೇಖಾ ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿ ಇಬ್ಬರಿಗೂ ಬುದ್ಧಿ ಹೇಳುವಂತೆ ಮನವಿ ಮಾಡಿಕೊಂಡಿದ್ದಾರೆ. ಪದೇಪದೆ ದೂರು ನೀಡಿದ್ದರಿಂದ ಅಸಮಾಧಾನಗೊಂಡ ರೋಜಲತಾ, ಕಾನ್ಸ್​ಟೇಬಲ್​ ಸಾಯಿ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಪತ್ನಿಯ ಮೇಲೆ ಕೋಪಗೊಂಡ ಸಾಯಿ ಆಕೆಯನ್ನು ಹಿಗ್ಗಾಮುಗ್ಗಾ ಬೈದು ಎಚ್ಚರಿಕೆ ನೀಡಿದ್ದಾರೆ.

ಇದೆಲ್ಲದರ ನಡುವೆ ನಡೆದ ಘಟನಾವಳಿಗಳೆಲ್ಲ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಇದೀಗ ಎಲ್ಲೆಡೆ ಪ್ರಚಾರವಾಗಿದೆ. ಇದೇ ವಿಚಾರ ಜಿಲ್ಲಾದ್ಯಂತ ಚರ್ಚೆಯಾಗುತ್ತಿದ್ದು, ಮಹಿಳಾ ಎಸ್​ಐ ಮತ್ತು ಕಾನ್ಸ್​ಟೇಬಲ್​ ಪತ್ನಿಯ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net