More

    ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಅಂಕಣ…

    ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಅಂಕಣ...

    ಪ್ರೀತಿಯಿಂದ ನಾಲ್ಕು ಮಾತು…

    ಹಲವರು ತಮ್ಮ ಮಾತುಗಳಿಂದ, ಕೆಲಸಗಳಿಂದ, ನಡತೆಯಿಂದ ನನಗೆ ಸ್ಫೂರ್ತಿ ತುಂಬಿದ್ದಾರೆ. ಏನೋ ಸಾಧಿಸುವುದಕ್ಕೆ ಪ್ರೇರೇಪಿಸಿದ್ದಾರೆ. ಅದೆಲ್ಲ ಇನ್ನೊಬ್ಬರಿಗೂ ತಲುಪಲಿ ಎಂಬ ದೃಷ್ಟಿಯಿಂದ ನಾನು ಓದಿದ್ದು, ಕೇಳಿದ್ದು, ನೋಡಿದ್ದು, ಅರ್ಥ ಮಾಡಿಕೊಂಡಿದ್ದನ್ನು ಭಾಷಣ ಮತ್ತು ವಿಡಿಯೋಗಳ ಮೂಲಕ ಆಗಾಗ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇದು ಸಹ ಅಂಥದ್ದೇ ಒಂದು ಪ್ರಯತ್ನ. ನಿಮ್ಮ ಮಾತು ನಮಗೆ ಸ್ಫೂರ್ತಿ ತುಂಬುತ್ತದೆ, ಜೀವನದ ದೃಷ್ಟಿಕೋನ ಬದಲಾಯಿಸುತ್ತದೆ ಅಂತ ಎಷ್ಟೋ ಜನ ನನಗೆ ಹೇಳುತ್ತಿರುತ್ತಾರೆ. ಕಿರಿಯರಿಗೆ, ಅದರಲ್ಲೂ ಇಂದಿನ ತಲೆಮಾರಿನವರಿಗೆ ಈ ಬರಹಗಳು ಸ್ಫೂರ್ತಿ ತುಂಬಿದರೆ ನನ್ನ ಶ್ರಮ ಸಾರ್ಥಕ …

    ಬಹುಮುಖ ವ್ಯಕ್ತಿತ್ವ

    ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ… ಹೀಗೆ ಹಲವು ಆಯಾಮಗಳಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ರಮೇಶ್ ಅರವಿಂದ್. ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ನಡೆ-ನುಡಿಯಿಂದ ಜನರ ಮನಸ್ಸು ಗೆದ್ದಿರುವ ಅವರನ್ನು ಜನ ಪ್ರೀತಿಯಿಂದ ಕರೆಯುವುದು ‘ಅಭಿನಯ ಚತುರ’ ಎಂದು. ತಮ್ಮ ವ್ಯಕ್ತಿತ್ವವನ್ನು ಮತ್ತೊಂದು ಆಯಾಮಕ್ಕೂ ವಿಸ್ತರಿಸಿಕೊಂಡಿರುವ ಅವರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸ್ಫೂರ್ತಿದಾಯಕ ಮತ್ತು ಪ್ರೇರಣೆಯ ಮಾತುಗಳಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಲವಲವಿಕೆಯ, ಉತ್ಸಾಹಭರಿತ ಮಾತು, ಜೀವನಶೈಲಿಯ ರಮೇಶ್ ಇನ್ನು ಪ್ರತಿ ಭಾನುವಾರ ವಿಜಯವಾಣಿ ಓದುಗರಿಗೆ ಇನ್ನಷ್ಟು ಸ್ಫೂರ್ತಿ ತುಂಬಲಿದ್ದಾರೆ.

    -ಸಂಪಾದಕ

    ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ

    ಈ ಯಾಣ ಅದೇನು ಅದ್ಭುತ ರ್ರೀ… ಅಲ್ಲಿನ ಪರಿಸರ ನೋಡಿದ್ರೆ ಈ ತರಹ ಅದ್ಭುತ ಹೇಗೆ ಬಂತು ಎಂಬ ಪ್ರಶ್ನೆ ಕಾಡೋದು ನಿಜ. ಏಕೆಂದ್ರೆ, ಅಲ್ಲಿ ಸುತ್ತಮುತ್ತ ಎಲ್ಲೂ ಆ ತರಹದ ಸ್ಟ್ರಕ್ಚರ್​ಗಳಿಲ್ಲ. ಆ ಪರಿಸರಕ್ಕೂ ಅದಕ್ಕೂ ಸಂಬಂಧವೇ ಇಲ್ಲದಿರುವ ಅದ್ಭುತ ಅದು. ಈ ಕೋವಿಡ್ ಸಮಯದಲ್ಲಿ ನನಗೆ ಯಾಣ ಒಂದು ಸಂಕೇತವಾಗಿ ಕಾಣ್ತಿದೆ.

    ಬೆಳಿಗ್ಗೆ ಎದ್ದು ಕಾಫಿ ಕುಡಿಯೋಕೆ ಮುಂಚೆ ಒಂದು ಗ್ಲಾಸ್ ನೀರು ಕುಡಿಯಬೇಕು ಅಂತ ಯಾರೋ ಹೇಳಿದ್ರು. ಸರಿ, ಕುಡಿದಾಯ್ತು. ಮಧ್ಯಾಹ್ನ, ಕರೊನಾ ಟೈಮ್ಲ್ಲಿ ಬಿಸಿನೀರಿನ ಹಬೆ ತಗೊಳ್ಳಿ ಅಂತ ಇನ್ನೊಬ್ರು ಹೇಳಿದ್ರು. ಅದನ್ನೂ ತಗೊಂಡಾಯ್ತು. ಸಂಜೆ ಫ್ರಿಜ್​ನ ಫ್ರೀಜರ್​ನಲ್ಲಿ ಐಸ್​ಟ್ರೇ ಕಚ್ಚಿಕೊಂಡಿತ್ತು. ಹೇಗೋ ಒದ್ದಾಡಿ ಅದನ್ನು ತೆಗೆದಿದ್ದಾಯ್ತು. ರಾತ್ರಿ ಮಲಗುವಾಗ ಅನಿಸ್ತು, ಈ ನೀರು, ಆವಿ, ಐಸ್ ಎಲ್ಲವೂ ನೀರಿನ ಬೇರೆಬೇರೆ ರೂಪಗಳಷ್ಟೇ. ಎಲ್ಲವೂ ನೀರೇ. ಆದರೆ, ಬೇರೆ ರೂಪಗಳಲ್ಲಿ ಸಿಗುತ್ತವೆ.

    ನಾವೂ ಅದೇ ತರಹ. ನಾನು, ನೀವು, ಅವಳು, ಅವನು… ಎಲ್ಲಾ ಒಂದೇ. ಬೇರೆಬೇರೆ ರೂಪಗಳಷ್ಟೇ. ನಮ್ಮೆಲ್ಲರ ಸ್ವಭಾವ, ಆಸೆ, ಆಕಾಂಕ್ಷೆಗಳು ಒಂದೇ. ಒದ್ದಾಟಗಳೂ ಒಂದೇ. ನಮಗೆಲ್ಲ ಬೇಕಾಗಿರುವುದು ಒಂದೇ. ಡೀಸೆಂಟ್ ಆದ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು, ನಮ್ಮನ್ನು ಪ್ರೀತಿಸೋ ಜನರಿರಬೇಕು, ಸಮಾಜದಲ್ಲಿ ಮರ್ಯಾದೆಯಿಂದ ಬದುಕಬೇಕು, ನಾವು ಇಷ್ಟಪಟ್ಟ ಕೆಲಸ ಮಾಡಬೇಕು ಮತ್ತು ಅದರಲ್ಲಿ ಸ್ವಲ್ಪ ಹೆಸರು ಮಾಡಬೇಕು. ನಮ್ಮ ಮೂಲ ಸ್ವಭಾವ ಇದೆಯಲ್ಲ, ಅವೆಲ್ಲಾ ಒಂದೇ. ಅದೇ ಕೋಪ, ಅಸೂಯೆ, ಅದೇ ಆಸೆಗಳು, ಅದೇ ಹೋರಾಟಗಳು … ನಾವು ಚಿಕ್ಕಂದಿನಿಂದ ಕಥೆ ಕೇಳ್ತಾ ಬಂದವರು. ಆ ಕಥೆಗಳೆಲ್ಲಾ ಹೇಗೆ ಮುಗಿಯುತ್ತಿದ್ದವು ಅಂತ ಒಮ್ಮೆ ನೆನಪಿಸಿಕೊಳ್ಳಿ. And then they lived happily ever after… ಅಂತ ಅಲ್ವಾ? ಅಂದರೆ, ಈ happily… ಅಂತ ಸಿಗೋದು ಕೊನೇಗೆ. ಜೀವನಪೂರ್ತಿ ಹೋರಾಟ ಮಾಡಿ, ಕ್ಲೈಮ್ಯಾಕ್ಸ್ ಮಾತ್ರ ಹ್ಯಾಪಿಯಾಗಿರಬೇಕು ಅಂತ ಹೋರಾಟ ಮಾಡ್ತಿದ್ದೀವಿ ಅನಿಸುತ್ತೆ. ಕೆಲವರು ಈ ಜೀವನ ಎಂಬ ಯುದ್ಧ ಅಥವಾ ಹೋರಾಟದಲ್ಲಿ ಯಶಸ್ಸನ್ನು ಕಾಣ್ತಾರಲ್ವಾ? ಅದಕ್ಕೆ ಕಾರಣ ಏನು ಅಂತ ಹುಡುಕಿಕೊಂಡು ಹೊರಟ್ರೆ, ಮುಖ್ಯವಾದುದು ಅವರು ಯೋಚನೆ ಮಾಡುವಂತಹ ರೀತಿ. You are finally, only your thoughts. ನಿಮ್ಮ ತಲೆಯಲ್ಲಿ ಓಡಾಡ್ತಿರುವ ಯೋಚನೆಗಳು, ಆಲೋಚನೆಗಳು ನೀವು ಪ್ರಪಂಚವನ್ನ, ಜೀವನವನ್ನ ಹೇಗೆ ನೋಡ್ತೀರಿ ಅನ್ನೋದನ್ನ ತೋರಿಸ್ತದೆ. ಅಷ್ಟೇ ಅಲ್ಲ, ನಿಮ್ಮ ಜೀವನವನ್ನ ನಿರ್ಣಯ ಮಾಡೋದೂ ಅದೇ.

    ನಾಳಿನ ಚಿಂತೆ ಬಿಟ್ಟು ಈ ಕ್ಷಣ ಅನುಭವಿಸೋಣ: ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಅಂಕಣ...
    ಯಾಣ

    ಇತ್ತೀಚೆಗೆ ನಾನು ಯಾಣಕ್ಕೆ ಹೋಗಿದ್ದೆ. ನಿಮಗೆಲ್ಲ ಗೊತ್ತಿರೋ ಹಾಗೆ 20 ವರ್ಷಗಳ ಹಿಂದೆ, ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಶೂಟಿಂಗ್ ಅಲ್ಲೇ ನಡೆದಿತ್ತು. ನಾನು, ಶಿವಣ್ಣ, ಪ್ರೇಮಾ ಅಭಿನಯಿಸಿದ ಪ್ರಮುಖ ದೃಶ್ಯಗಳನ್ನ ಅಲ್ಲಿ ಶೂಟ್ ಮಾಡಲಾಗಿತ್ತು. ಅಲ್ಲಿಗೆ ಹೋದಾಗ, ನಾವು ಶೂಟಿಂಗ್ ಮಾಡಿದ್ದೆಲ್ಲ ನೆನಪಾಯ್ತು. ಈ ಯಾಣ ಅದೇನು ಅದ್ಭುತ ರ್ರೀ… ಅಲ್ಲಿನ ಪರಿಸರ ನೋಡಿದ್ರೆ ಈ ತರಹ ಅದ್ಭುತ ಹೇಗೆ ಬಂತು ಎಂಬ ಪ್ರಶ್ನೆ ಕಾಡೋದು ನಿಜ. ಏಕೆಂದ್ರೆ, ಅಲ್ಲಿ ಸುತ್ತಮುತ್ತ ಎಲ್ಲೂ ಆ ತರಹದ ಸ್ಟ್ರಕ್ಚರ್​ಗಳಿಲ್ಲ. ಅಲ್ಲಿಗೆ ಹೋದರೆ ನಿಮಗೆ ಒಂದು ಆಶ್ಚರ್ಯ ಅಂತೂ ಆಗುತ್ತೆ. ಆ ಪರಿಸರಕ್ಕೂ ಅದಕ್ಕೂ ಸಂಬಂಧವೇ ಇಲ್ಲದಿರುವ ಅದ್ಭುತ ಅದು. ಈ ಕೋವಿಡ್ ಸಮಯದಲ್ಲಿ ನನಗೆ ಯಾಣ ಒಂದು ಸಂಕೇತವಾಗಿ ಕಾಣ್ತಿದೆ. ಅಂದರೆ, ಅಕ್ಕಪಕ್ಕ ಏನೇ ಆಗ್ತಿರಬಹುದು, ಸುತ್ತಮುತ್ತ ಹೇಗೆ ಬೇಕಾದರೂ ಇರಬಹುದು, ಇದೆಲ್ಲದರ ಮಧ್ಯೆ ನಿಮ್ಮ ವ್ಯಕ್ತಿತ್ವದಿಂದ, ಯೋಚನೆ ಮಾಡುವ ರೀತಿಯಿಂದ ನೀವು ಒಂದು ಅದ್ಭುತವಾಗಿ, ಅಚ್ಚರಿಯಾಗಿ ಉಳಿಯಬಹುದು, ಬೆಳೆಯಬಹುದು ಅಂತ ನನಗೆ ಅನಿಸುತ್ತದೆ.

    ನಾನು ಕಾಲೇಜಿನಲ್ಲಿದ್ದಾಗ ಒಂದು ಅನೆಕ್ಡೋಟ್ ಇತ್ತು. ಒಂದು ಚರ್ಚ್ ಮುಂದೆ, God is now here ಎಂದು ಬರೆಯಲಾಗಿತ್ತು. ಅದೇ ರಸ್ತೆಯಲ್ಲಿ ಒಬ್ಬ ಹೋಗುತ್ತಿದ್ದ. ಅವನಿಗೆ ದೇವರ ಮೇಲೆ ನಂಬಿಕೆ ಇಲ್ಲ. ಅವನು God is no where ಎಂದು ಅರ್ಥಮಾಡಿಕೊಂಡ. ಬೋರ್ಡ್ ಒಂದೇ. ಆದರೆ, ನೋಡುವವರ ದೃಷ್ಟಿ ಮಾತ್ರ ಬೇರೆ. Now here ಎಂಬ ಎರಡು ಪದಗಳಲ್ಲಿ ಒಂದು ಅಕ್ಷರ ಆಚೀಚೆ ಆದರೆ ಆಗ ಅದರ ಅರ್ಥವೇ ಬೇರೆಯಾಗುತ್ತದೆ. ಮೊದಲಿಗೆ ‘ದೇವರು ಇಲ್ಲಿದ್ದಾನೆ’ ಎಂದೆನಿಸಿದರೆ, ಬದಲಾದ ಅರ್ಥದಲ್ಲಿ ‘ದೇವರೇ ಇಲ್ಲ’ ಎಂಬ ಧ್ವನಿ ಹೊರಹೊಮ್ಮುತ್ತದೆ. ಅದಕ್ಕೆ ಹೇಳಿದ್ದು, ನಾವು ನೋಡುವ ದೃಷ್ಟಿ ಸರಿ ಇದ್ದರೆ, ಅದು ಪಾಸಿಟಿವ್ ಆಗಿದ್ದರೆ, ಅದನ್ನ ಖಂಡಿತಾ ನಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು ಅಂತ ನನ್ನ ದೃಢವಾದ ನಂಬಿಕೆ ಮತ್ತು ಇದು ಇತಿಹಾಸದಲ್ಲಿ ಪದೇ ಪದೇ ಪ್ರೂವ್ ಆಗಿದೆ.

    ಈಗ ಕರೊನಾ ಮತ್ತು ಅದರ ನಂತರದ ಕಾಲಘಟ್ಟಕ್ಕೆ ಬಂದರೆ, ಬಹಳಷ್ಟು ಮಂದಿಗೆ ಒಂದು ಟೆನ್ಶನ್ ಇದೆ. ನಾಳೆ ನನ್ನ ಕೆಲಸ ಹೋಗಿಬಿಟ್ಟರೆ ಅಥವಾ ಪ್ರಮೋಷನ್ ಸಿಗದಿದ್ದರೆ ಅಥವಾ ಇನ್ಸೆಂಟಿವ್ ಮಿಸ್ ಆಗಿಬಿಟ್ಟರೆ ಅಂತ ಎಲ್ಲರೂ ಭಯಬಿದ್ದಿದ್ದಾರೆ. ಮುಂದೆ ಏನಾಗುತ್ತದೋ, ನಾಳೆ ಏನಾಗುತ್ತದೋ, ಆರು ತಿಂಗಳ ನಂತರ ಏನಾಗುತ್ತದೋ ಅಂತ ಯೋಚನೆ ಮಾಡಿಮಾಡಿ ಹಲವರು ಹೈರಾಣಾಗಿದ್ದಾರೆ. ಅಂಥ ಯೋಚನೆ ಬರೋದು ತಪು್ಪ ಅಂತ ಹೇಳುತ್ತಿಲ್ಲ. ಆದರೆ, ತುಂಬ ಯೋಚನೆ ಮಾಡಿ, ನಾಳೆ ಹಾಗಾಗುತ್ತೆ, ಹೀಗಾಗುತ್ತೆ ಅಂತ ಕಲ್ಪನೆಯಲ್ಲಿ ಜನ ತಮ್ಮನ್ನ ಹಿಂಸಿಸಿಕೊಳ್ತಿದ್ದಾರೆ ಅನಿಸುತ್ತದೆ. ಮನಃಶಾಸ್ತ್ರದಲ್ಲಿ ಕೆಟೋಸ್ಟ್ರೋಫಿಕ್ ಫ್ಯಾಂಟಸಿ ಎಂಬ ಥಿಯರಿ ಇದೆ. ಅಂದರೆ, ಮಹಾದುರಂತದ ಕಲ್ಪನೆ ಎಂದರ್ಥ. ಅದು ಕಲ್ಪನೆ ಅಷ್ಟೇ. ನಿಜ ಆಗಬೇಕು ಅಂತೇನೂ ಇಲ್ಲ.

    ನಮ್ಮ ಮನಸ್ಸು ಯಾವಾಗಲೂ ಬಹಳ ಕೆಟ್ಟದ್ದನ್ನು ಮೊದಲು ಯೋಚನೆ ಮಾಡುತ್ತದೆ. ಒಬ್ಬ ಗೃಹಿಣಿ ತನ್ನ ಮಗಳನ್ನು ಶಾಲೆಗೆ ಕಳುಹಿಸಿರುತ್ತಾಳೆ. ಮಗಳು ಬರೋದನ್ನ ಕಾಯ್ತಾ ಇರ್ತಾಳೆ. ಸ್ವಲ್ಪ ತಡವಾಗಿಬಿಟ್ಟರೆ, ಮನಸ್ಸಿನಲ್ಲಿ ಏನೇನೋ ಯೋಚನೆಗಳು. ಆಕೆ ಕಿಡ್ನಾಪ್ ಆಗಿಬಿಟ್ರೆ, ಅಪಘಾತ ಆಗ್ಬಿಟ್ರೆ… ಹೀಗೆ ಬೇಡದಿರುವ ಕಲ್ಪನೆಗಳು. ಮಗು ಆರಾಮವಾಗಿ ಶಾಲೆಯಿಂದ ಬಂದುಬಿಡುತ್ತದೆ. ಆದರೆ, ಕೆಲವು ಹೊತ್ತಿನ ತಾಯಿಯ ಮನಸ್ಥಿತಿ ಇದೆಯಲ್ಲ, ಬೇಡವಾದದ್ದನ್ನು, ಅದರಲ್ಲೂ ನೆಗೆಟಿವ್ ವಿಷಯಗಳನ್ನು ಯೋಚಿಸುವುದು… ಸಮಸ್ಯೆ ಇರುವುದೇ ಅಲ್ಲಿ. ಹಾಗಾಗಿ ತುಂಬಾ ಯೋಚಿಸುವುದಕ್ಕೆ ಹೋಗಬೇಡಿ. ಅದರಲ್ಲೂ ಕೆಟ್ಟದ್ದನ್ನು ಕಲ್ಪಿಸಿಕೊಳ್ಳಬೇಡಿ. ಅದು ನಾಳೆ ಆಗಬಹುದು, ಆಗದೆಯೂ ಇರಬಹುದು. ಈ ನೆಗೆಟಿವ್ ಅಂಶಗಳು ನಮ್ಮ ಮೆಂಟಲ್ ಎನರ್ಜಿಯನ್ನು ಹೀರಿಬಿಡುತ್ತವೆೆ. ಹಾಗಾಗಿ ನಮ್ಮ ಎನರ್ಜಿಯನ್ನು ಪೋಲು ಮಾಡದೆ, ಪಾಸಿಟಿವ್ ಆಗಿರುವುದು ಬಹಳ ಮುಖ್ಯ. ಒಂದು ಪಕ್ಷ ನಾಳೆ ಕೆಟ್ಟ ಪರಿಸ್ಥಿತಿ ನಿಜಕ್ಕೂ ಬಂದುಬಿಡಬಹುದು, ಆಗ ಫೇಸ್ ಮಾಡೋಣ, ಘನತೆಯಿಂದ ಸ್ವೀಕರಿಸೋಣ. ಸಾಧ್ಯವಾದಷ್ಟು ‘ಈ ಕ್ಷಣ’ದಲ್ಲಿ ಇರೋಣ…

    ಹೇಗಿರಲಿದೆ ಗೊತ್ತಾ ಅಯೋಧ್ಯೆಯ ಮಸೀದಿ?! ಮಸೀದಿ ವಿನ್ಯಾಸದ ಬ್ಲೂ ಪ್ರಿಂಟ್​ ಬಿಡುಗಡೆ ಮಾಡಿದ ಟ್ರಸ್ಟ್​

    ಭಾರತ ತಂಡ ಸೋತಿದ್ದಕ್ಕೆ ಮತ್ತೆ ಟ್ರೋಲ್ ಆದ ನಟಿ ಅನುಷ್ಕಾ ಶರ್ಮ…!

    ಈ ಮಹಿಳಾ ಅಭ್ಯರ್ಥಿ ಸೋತರೆ ಬೆಟರು ಅನ್ಸುತ್ತೆ!; ಗೆಲ್ಲಿಸುವುದೋ-ಸೋಲಿಸುವುದೋ ಎಂಬ ಗೊಂದಲದಲ್ಲಿ ಮತದಾರರು!

    ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts