More

    ಈ ಮಹಿಳಾ ಅಭ್ಯರ್ಥಿ ಸೋತರೆ ಬೆಟರು ಅನ್ಸುತ್ತೆ!; ಗೆಲ್ಲಿಸುವುದೋ-ಸೋಲಿಸುವುದೋ ಎಂಬ ಗೊಂದಲದಲ್ಲಿ ಮತದಾರರು!

    ತುಮಕೂರು: ಎಲ್ಲೆಡೆ ಕೋವಿಡ್​-19 ಪಾಸಿಟಿವ್ ವ್ಯಾಪಿಸಿದ್ದರಿಂದ ಜನರು ಈಗ ಸುಮ್ಮನೆ ‘ಪಾಸಿಟಿವ್’ ಎಂದರೂ ಒಮ್ಮೆ ದಿಗಿಲುಗೊಳ್ಳುವ ವಾತಾವರಣ ಇರುವುದರಿಂದಲೋ ಏನೋ.. ಇಲ್ಲೊಬ್ಬರು ಗ್ರಾಮ ಪಂಚಾಯತ್ ಅಭ್ಯರ್ಥಿ ಮತದಾರರನ್ನು ಪಾಸಿಟಿವ್ ಆಗಿ ಅಪ್ರೋಚ್ ಆಗುವ ಬದಲು ನೆಗೆಟಿವ್ ಇಮೋಷನ್ ದಾಳವಾಗಿ ಬಳಸಿದ್ದಾರೆ.

    ಅರ್ಥಾತ್​, ಸೋತರೂ ಕೆಲಸ ಮಾಡುವುದಾಗಿ ಹೇಳಿರುವ ಈ ಮಹಿಳಾ ಅಭ್ಯರ್ಥಿ ಸೋತರೆ ಒಳ್ಳೆಯದು ಎಂದು ಒಂದಷ್ಟು ಜನರಿಗೆ ಎನಿಸಿದರೆ, ಮತ್ತೊಂದಷ್ಟು ಜನರಿಗೆ ಈಕೆ ಸೋಲದಿರುವುದೇ ಒಳ್ಳೆಯದು ಎಂದು ಬೇಡಿಕೊಳ್ಳುವಂತಾಗಿದೆ. ಒಟ್ಟಿನಲ್ಲಿ ಈ ಅಭ್ಯರ್ಥಿಯನ್ನು ಸೋಲಿಸುವುದೋ-ಗೆಲ್ಲಿಸುವುದೋ ಎಂದು ಒಂದಷ್ಟು ಮತದಾರರು ಗೊಂದಲಕ್ಕೆ ಒಳಗಾಗಿರುವುದಂತೂ ನಿಜ.

    ಇದನ್ನೂ ಓದಿ: ‘ಪೊಂಗಲ್​’ಗೆ 2,500 ರೂ. ಕೊಡ್ತಾರಂತೆ ಸಿಎಂ; ಪಡೆಯಲು ಪಡಿತರ ಚೀಟಿ ಇದ್ರಾಯ್ತು…

    ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್. ಗಂಗಮ್ಮ ಅವರೇ ಈ ರೀತಿ ವಿಚಿತ್ರವಾಗಿ ಚುನಾವಣಾ ಪ್ರಚಾರ ಕೈಗೊಂಡಿರುವ ಅಭ್ಯರ್ಥಿ. ಗೆದ್ದರೆ ಜಮೀನು ದೇವಸ್ಥಾನದ ಖಾತೆಗೆ ಮಾಡಿಸುವುದು ಸೇರಿ, ರಸ್ತೆ ಮಾಡಿಸುವುದು, ಚರಂಡಿ ಮಾಡಿಸುವುದು ಮುಂತಾದ ಸರ್ವೇಸಾಮಾನ್ಯ ಭರವಸೆಗಳನ್ನು ನೀಡಿರುವ ಈ ಅಭ್ಯರ್ಥಿ, ಸೋತರೆ ಏನೇನು ಮಾಡಿಸುತ್ತೇನೆ ಎಂದು ಹೇಳಿರುವುದೇ ಈಗ ಹೆಚ್ಚಿನ ಗಮನ ಸೆಳೆದಿದೆ.

    ಈ ಮಹಿಳಾ ಅಭ್ಯರ್ಥಿ ಸೋತರೆ ಬೆಟರು ಅನ್ಸುತ್ತೆ!; ಗೆಲ್ಲಿಸುವುದೋ-ಸೋಲಿಸುವುದೋ ಎಂಬ ಗೊಂದಲದಲ್ಲಿ ಮತದಾರರು!

    ಡಿ.22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹೆಚ್. ಗಂಗಮ್ಮ, ತಾವೇನಾದರೂ ಈ ಚುನಾವಣೆಯಲ್ಲಿ ಸೋತರೆ ಸರ್ಕಾರಕ್ಕೆ ಸುಳ್ಳು ಮಾಹಿತಿಕೊಟ್ಟು ಮೈತ್ರಿ, ಮನಸ್ವಿನಿ, ವಿಧವಾ ವೇತನಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ 40 ಕುಟುಂಬಗಳ ಹಣವನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಸೋತರೆ ಅನರ್ಹ ಪಡಿತರ ಚೀಟಿ ರದ್ದು ಪಡಿಸುವುದಾಗಿ ಈ ಮೂಲಕ ಪರೋಕ್ಷವಾಗಿ ಇವರು ಬೆದರಿಕೆಯೊಡ್ಡಿರುವಂತಿರುವ ಈ ಮತಯಾಚನೆ ಪತ್ರ ಎಲ್ಲೆಡೆ ವೈರಲ್ ಆಗಿದೆಯಲ್ಲದೆ ಚರ್ಚೆಗೂ ಗ್ರಾಸವಾಗಿದೆ. ಒಟ್ಟಿನಲ್ಲಿ ಈ ಅಭ್ಯರ್ಥಿ ಗೆದ್ದರೆ ಮಾಡಿಸುವ ಕೆಲಸಗಳಿಗಿಂತ ಸೋತರೆ ಮಾಡಿಸುವುದಾಗಿ ಹೇಳಿರುವ ಕೆಲಸಗಳೇ ಭ್ರಷ್ಟಾಚಾರ ನಿರ್ಮೂಲನೆ ದೃಷ್ಟಿಯಿಂದ ಉತ್ತಮವಾದದ್ದು ಅನಿಸುವಂತಿವೆ. ಆದರೆ ಸೋತ ಮೇಲೂ ಈ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂಬುದು ಈಗ ದೊಡ್ಡ ಪ್ರಶ್ನೆ. ಅದಕ್ಕೂ ಉತ್ತರವೆಂಬಂತೆ, ‘ಅಕ್ರಮವಾಗಿದ್ದ 6 ಮನೆಗಳ ಬಿಲ್​ಗಳನ್ನು ಈಗಾಗಲೇ ನಿಲ್ಲಿಸಿರುವುದೇ ಇದಕ್ಕೆ ಸಾಕ್ಷಿ’ ಎಂದೂ ಹೇಳಿದ್ದಾರೆ.

    ಇದನ್ನೂ ಓದಿ: 22 ವರ್ಷಗಳ ಹಿಂದೆ ವಂಚನೆ ಮಾಡಿದ್ದವ ಕೊನೆಗೂ ಸಿಕ್ಕಿಬಿದ್ದ!; ಲಕ್ಷಾಂತರ ರೂಪಾಯಿ ಧೋಖಾ…

    ಈಗೇನಾದರೂ ಶ್ರೀನಗರಕ್ಕೆ ಹೋದರೆ ಮರಗಟ್ಟಿ ಹೋಗುತ್ತೀರಿ!; ಈ ಸೀಸನ್​ನಲ್ಲೇ ಇದುವರೆಗಿನ ಅತಿ ಕಡಿಮೆ ಉಷ್ಣಾಂಶ ದಾಖಲು!

    ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!

    ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!

    ವಿದ್ಯಾರ್ಥಿಗಳೇ ಹೊಸ ವರ್ಷಕ್ಕೆ ಶಾಲೆಗೆ ಹೋಗಲು ರೆಡಿಯಾಗಿ, ಬೇಸಿಗೆ ರಜೆ ಆಸೆ ಬಿಟ್ಬಿಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts