More

    22 ವರ್ಷಗಳ ಹಿಂದೆ ವಂಚನೆ ಮಾಡಿದ್ದವ ಕೊನೆಗೂ ಸಿಕ್ಕಿಬಿದ್ದ!; ಲಕ್ಷಾಂತರ ರೂಪಾಯಿ ಧೋಖಾ…

    ಮುಂಬೈ: ಈತ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ವರ್ಷಗಳಲ್ಲ ದಶಕಗಳೇ ಕಳೆದಿದ್ದವು. ಹೀಗಾಗಿ ಇಷ್ಟು ವರ್ಷಗಳಾದ ಮೇಲೆ ಇನ್ನು ಯಾರು ನನ್ನನ್ನು ಪತ್ತೆ ಮಾಡಿ ಬಂಧಿಸುತ್ತಾರೆ ಎಂದುಕೊಂಡು ಆರಾಮಾಗಿಯೇ ಓಡಾಡುತ್ತಿದ್ದ. ಆದರೆ ವಂಚನೆ ಪ್ರಕರಣ ನಡೆದು 22 ವರ್ಷಗಳ ಬಳಿಕ ಈತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

    ಈತನ ಹೆಸರು ಸಂದೀಪ್​ ಸುಧಾಕರ್ ಧಾಯ್​ಗುಡೆ, ವರ್ಷ ಈಗ 53. 22 ವರ್ಷಗಳ ಹಿಂದೆ ನಡೆಸಿದ್ದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈಗ ಈತ ಪೊಲೀಸರ ಅತಿಥಿ. ಲಕ್ಷಾಂತರ ರೂಪಾಯಿ ವಂಚಿಸಿಯೂ ಏನೂ ಆಗಿಲ್ಲ ಎಂಬಂತೆ ಬಾಡಿಗೆ ಮನೆಯೊಂದರಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದ ಈತನನ್ನು ಪುಣೆ ಕ್ರೈಂ ಬ್ರ್ಯಾಂಚ್​ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪುಣೆಯ ಸದಾಶಿವಪೇಟೆಯ ನಿವಾಸಿಯಾಗಿದ್ದ ಈತ ಕೊತ್ರೂಡ್​ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ.

    ಇದನ್ನೂ ಓದಿ: 17 ಕೋಟಿ ರೂಪಾಯಿಗಾಗಿ ಮಂಗಳೂರಲ್ಲಿ ಕಿಡ್ನ್ಯಾಪ್​ ಆಗಿದ್ದ ಬಾಲಕ ಕೋಲಾರದಲ್ಲಿ ಸಿಕ್ಕ!

    1998ರಲ್ಲಿ ಸೇನಾಪತಿ ಬಾಪಟ್ ರಸ್ತೆಯ ವಿದ್ಯಾ ಕೋ-ಆಪರೇಟಿವ್​ ಬ್ಯಾಂಕ್​ಗೆ ಫೋರ್ಜರಿ ದಾಖಲೆ ಸಲ್ಲಿಸಿ 13,55,936 ರೂಪಾಯಿ ವಂಚಿಸಿದ್ದ. ಈ ಬಗ್ಗೆ ಈತನ ವಿರುದ್ಧ ಚತುಶ್ರುಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನೊಂದಿಗೆ ಆನಂದ್​ ಪ್ರಭಾಕರ್ ಗೋರೆ, ಸುಬ್ರತೊ ದಾಸ್​ ಎಂಬಿಬ್ಬರ ವಿರುದ್ಧವೂ ಕೇಸ್ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡೇ ಸುತ್ತಾಡುತ್ತಿದ್ದ ಈತ ಕೊನೆಗೂ ಪೊಲೀಸರ ಕೈಗೆ ಶುಕ್ರವಾರ ಸಿಕ್ಕಿಬಿದ್ದಿದ್ದು, 1998ರಲ್ಲಿ ತಾನು ವಂಚನೆ ಎಸಗಿದ್ದು ಹೌದು ಎಂದು ಒಪ್ಪಿಕೊಂಡಿದ್ದಾನೆ. ಈತನನ್ನು ಚತುಶ್ರುಂಗಿ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಈ ಊರಿನಂಚಿನಲ್ಲೇ ಬೀಡುಬಿಟ್ಟಿವೆ 30ಕ್ಕೂ ಹೆಚ್ಚು ಕಾಡಾನೆಗಳು! ಹೊರ ಬರದಂತೆ ಗ್ರಾಮಸ್ಥರಿಗೆ ನಿರ್ಬಂಧ

    PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

    ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!

    ಶಾಲೆಯ ಟಾಯ್ಲೆಟ್​ನಲ್ಲೇ ಪಾರ್ಟಿ ಆಯೋಜಿಸಿದ ಬಾಲಕ! ವಿಚಾರ ತಿಳಿದ ಅಮ್ಮ ನಕ್ಕಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts