

ಮುಂಬೈ: ಸಾಮಾಜಿಕ ಜಾಲತಾಣ ಅಂದ್ರೆನೇ ಹಾಗೆ ರೀ. ಯಾವುದಾದರೂ ಒಂದು ಚಿಕ್ಕ ವಿಷಯ ದೊಡ್ಡ ಮಟ್ಟಕ್ಕೆ ಸದ್ದು ಮಾಡುವುದು ಇದೇ ಸೋಷಿಯಲ್ ಮೀಡಿಯಾದಲ್ಲಿ. ಕೆಲವೊಂದು ಘಟನೆಗಳ ವಿಡಿಯೋ ತುಣಕು ನೋಡುಗರ ಕಣ್ಣಲ್ಲಿ ನೀರು ತರಿಸುವಷ್ಟು ನಕ್ಕು ನಗಿಸುತ್ತದೆ. ಇನ್ನೂ ಕೆಲವು ಇದೆಂಥಾ ವಿಚಿತ್ರ ಎನ್ನುವಂತೆ ಮಾಡುತ್ತದೆ. ಇದೇ ಸಾಲಿಗೆ ಸೇರಿದ ಈ ವೈರಲ್ ವಿಡಿಯೋ ಕಂಡ ನೆಟ್ಟಿಗರು, ಒಂದು ಕ್ಷಣ ಬಿದ್ದು ಬಿದ್ದು ನಕ್ಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್ ಮಾಡುವಾಗ ಒಂದಲ್ಲ ಒಂದು ಹಾಸ್ಯ ತರುವಂತ ವಿಡಿಯೋ ಹರಿದಾಡುತ್ತಿರುತ್ತದೆ. ಅದೇ ರೀತಿಯಲ್ಲಿ ಇಲ್ಲೊಂದು ದೃಶ್ಯ ಹಾಸ್ಯಸ್ಪದವಾಗಿದ್ದು, ಬೈಕ್ನ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯ ಸೀರೆ ಗಾಡಿಯ ಚಕ್ರಕ್ಕೆ ಸಿಲುಕಬಹುದು ಎಂದು ಊಹಿಸಿದ ಕಾರಿನಲ್ಲಿ ಬರುತ್ತಿದ್ದ ಮತ್ತೊಬ್ಬರು ಮಹಿಳೆ, ಆಂಟಿ, ನಿಮ್ಮ ಸೀರೆ ಮೇಲಕ್ಕೆತ್ತಿಕೊಳ್ಳಿ ಹುಷಾರ್ ಎಂದು ಎಚ್ಚರಿಸಿದ್ದಾರೆ. ಆದ್ರೆ, ಇದಕ್ಕೆ ಆಕೆ ಕೊಟ್ಟ ಉತ್ತರ ಮಾತ್ರ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೇವಲ ಆರು ಸೆಕೆಂಡ್ಗಳ ವಿಡಿಯೋದಲ್ಲಿ ಬೈಕ್ನಲ್ಲಿ ಚಲಿಸುತ್ತಿದ್ದ ಮಹಿಳೆಗೆ ಅವರ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಮತ್ತೊಬ್ಬ ಮಹಿಳೆ, ಆಂಟಿ ನಿಮ್ಮ ಸೀರೆ ಬೈಕ್ನ ಚಕ್ರಕ್ಕೆ ಸಿಕ್ಕಿಕೊಳ್ಳಬಹುದು, ಹುಷಾರ್ ಎಂದು ಎಚ್ಚರಿಸಿದರು. ಇದಕ್ಕೆ ಮಹಿಳೆ, ತಾನು ಉಟ್ಟಿರುವ ಸೀರೆಯು ಸಾವಿರದ ಐನೂರು ರೂಪಾಯಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಹೀಗೆ ಹೇಳುತ್ತಿದ್ದಂತೆ ವಿಡಿಯೋ ಮಾಡಿಕೊಳ್ಳುತ್ತಿದ್ದ ಯುವತಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾಳೆ.
ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ಶೇರ್ ಆಗುತ್ತಿದ್ದು, ಮಹಿಳೆಯ ಉತ್ತರಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).