ಐಪಿಎಲ್​ಗೆ ಮರಳಲು ರಿಷಭ್​ ಪಂತ್ ಫಿಟ್​; ಕೊನೆಗೂ ಹಸಿರು ನಿಶಾನೆ ತೋರಿಸಿದ ಎನ್​ಸಿಎ!

pant web
Published on

ನವದೆಹಲಿ: ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಮುಂಬರುವ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯಲು ಸಂಪೂರ್ಣ ಫಿಟ್​ ಆಗಿದ್ದಾರೆ. ಪಂತ್​ ಫಿಟ್ನೆಸ್​ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಭಾನುವಾರ ಹಸಿರು ನಿಶಾನೆ ತೋರಿದೆ ಎಂದು ವರದಿಯಾಗಿದೆ.

2022ರ ಡಿಸೆಂಬರ್​ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಂತ್​ ಗಂಭೀರ ಗಾಯಗೊಂಡಿದ್ದರು. ಅದರಲ್ಲೂ ಅವರ ಬಲಮೊಣಕಾಲಿನ ಗಾಯದಿಂದಾಗಿ 3 ತಿಂಗಳ ಕಾಲ ನಡೆಯಲು ಕೂಡ ಸಾಧ್ಯವಾಗಿರಲಿಲ್ಲ.

2025ರ ಐಪಿಎಲ್​ಗೆ ಮುನ್ನ ಮೆಗಾ ಹರಾಜು

ಮುಂದಿನ ವರ್ಷದ ಐಪಿಎಲ್​ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಟೂರ್ನಿಯ ಆಡಳಿತ ಮಂಡಳಿಯ ಮುಖ್ಯಸ್ಥ ಅರುಣ್​ ಧುಮಾಲ್​ ಭಾನುವಾರ ಖಚಿತಪಡಿಸಿದ್ದಾರೆ. ಐಪಿಎಲ್​ನಲ್ಲಿ 3 ವರ್ಷಗಳ ನಂತರದಲ್ಲಿ ಮೆಗಾ ಹರಾಜು ನಿಗದಿಯಾಗಿದ್ದು, ಪ್ರತಿ ತಂಡಕ್ಕೆ ಮುಂಬರುವ 17ನೇ ಆವೃತ್ತಿಯ ನಂತರದಲ್ಲಿ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಅವಕಾಶ ಲಭಿಸುವ ನಿರೀೆ ಇದೆ. ಹೀಗಾಗಿ ಮುಂದಿನ ಆವೃತ್ತಿಗೆ ಹಲವು ಆಟಗಾರರ ತಂಡಗಳು ಬದಲಾಗುವ ಸಾಧ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net