ನವೆಂಬರ್​ 1, ಬೆಳಗ್ಗೆ 9 ಗಂಟೆಗೆ... ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡ ಮಹಿಳಾ ಅಘೋರಿ! Lady Aghori

Lady Aghori
Published on

Lady Aghori: ಕಳೆದ ಕೆಲ ದಿನಗಳಿಂದ ತೆಲಂಗಾಣದಲ್ಲಿ ಮಹಿಳಾ ಅಘೋರಿ ಸಂಚಲನ ಮೂಡಿಸಿರುವುದು ಗೊತ್ತೇ ಇದೆ. ಸಿಕಂದರಾಬಾದ್​ನ ಮುತ್ಯಾಲಮ್ಮ ದೇಗುಲದಲ್ಲಿ ವ್ಯಕ್ತಿಯೊಬ್ಬ ಅಮ್ಮನ ವಿಗ್ರಹವನ್ನು ಧ್ವಂಸ ಮಾಡಿದ ಕಾರಣ ಶುದ್ಧೀಕರಣದ ಹೆಸರಿನಲ್ಲಿ ಅಘೋರಿ ಅಲ್ಲಿಗೆ ಬಂದು ಬೆತ್ತಲೆಯಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಹಲವು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದರು. ಆ ಸಂದರ್ಶನಗಳು ಅನೇಕ ವಿವಾದಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಮಹಿಳಾ ಅಘೋರಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹಾಟ್ ಟಾಪಿಕ್ ಆಗಿದ್ದಾರೆ.

ಕುತ್ತಿಗೆಯಲ್ಲಿ ತಲೆಬುರುಡೆಯೊಂದಿಗೆ ಬೂದಿಯನ್ನು ಬಳಿದುಕೊಂಡಿದ್ದ ಮಹಿಳಾ ಅಘೋರಿ ದೇವಾಲಯದ ಭಕ್ತರನ್ನು ಬೆಚ್ಚಿಬೀಳಿಸಿದ್ದರು. ಅಲ್ಲದೆ, ವ್ಯಾಪಕ ಕುತೂಹಲವನ್ನು ಹುಟ್ಟುಹಾಕಿದರು. ಆಕೆಯ ವಿಶಿಷ್ಟ ನೋಟ ಸಾಮಾಜಿಕ ಜಾಲತಾಣ ವೈರಲ್​ ಆಗಿದೆ. ಆದರೆ, ಆಕೆ ನಿಜವಾದ ಅಘೋರಿ ಅಲ್ಲ, ಜನರ ಗಮನ ಸೆಳೆಯುಲು ಈ ರೀತಿ ಮಾಡುತ್ತಿದ್ದಾಳೆ ಎಂದು ಕೆಲವರು ವಾದಿಸಿದ್ದಾರೆ. ಆದರೆ, ತಾನು ಅಘೋರಿ ಎಂದು ಆಕೆ ಸಮರ್ಥಿಸಿಕೊಂಡಿದ್ದಾರೆ. ಸನಾತನ ಧರ್ಮವನ್ನು ರಕ್ಷಿಸುವುದೇ ತನ್ನ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಸರಣಿ ಸಂದರ್ಶನದ ನಂತರ ಆಕೆ ಕೇದಾರನಾಥಕ್ಕೆ ತೆರಳಿದ್ದರು. ಅಲ್ಲದೆ, ಅಲ್ಲಿಂದಲೂ ಹಲವು ವಿಡಿಯೋ, ಆಡಿಯೋಗಳನ್ನು ಬಿಡುಗಡೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದರು.

ಅಘೋರಿ ವಿಚಾರವಾಗಿ ತೆಲಂಗಾಣದಲ್ಲಿ ಎಷ್ಟು ಗಲಾಟೆ ನಡೆದಿತ್ತು ಎಂದರೆ ಮತ್ತೆ ಆಕೆ ತೆಲಂಗಾಣಕ್ಕೆ ಪ್ರವೇಶ ಮಾಡುವುದಿಲ್ಲ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಎಲ್ಲರನ್ನು ಬೆಚ್ಚಿ ಬೀಳಿಸುವಂತಹ ಅನಿರೀಕ್ಷಿತ ನಿರ್ಧಾರವನ್ನು ಆಕೆ ತೆಗೆದುಕೊಂಡಿದ್ದಾಳೆ. ಇತ್ತೀಚೆಗಷ್ಟೇ ಆಕೆ ಮತ್ತೊಮ್ಮೆ ತೆಲಂಗಾಣ ಪ್ರವೇಶಿಸಿದ್ದು, ಸಂವೇದನಾಶೀಲ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮುತ್ಯಾಲಮ್ಮ ದೇವಸ್ಥಾನದ ಮುಂದೆ ನವೆಂಬರ್ 1ರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಅಘೋರಿ ಬಹಿರಂಗಪಡಿಸಿದ್ದಾರೆ. ಮುತ್ಯಾಲಮ್ಮ ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ತನ್ನ ವಶಕ್ಕೆ ಒಪ್ಪಿಸಬೇಕು. ಆದರೆ, ಅದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಮುತ್ಯಾಲಮ್ಮ ದೇಗುಲದ ಮೇಲೆ ನಡೆದ ದಾಳಿಯ ಆರೋಪಿಗಳನ್ನು ಏಕೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಅವರನ್ನು ತನಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ನನ್ನ ವಿರುದ್ಧದ ಆರೋಪಗಳು ಸುಳ್ಳೆಂದು ಸಾಬೀತು ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ಅಲ್ಲದೆ, ಆತ್ಮಹತ್ಯೆಯಿಂದ ಬದುಕುಳಿದರೆ, ಸನಾತನ ಧರ್ಮವನ್ನು ಉತ್ತೇಜಿಸುವ ತನ್ನ ಧ್ಯೇಯವನ್ನು ಮುಂದುವರಿಸುವುದಾಗಿ ಹೇಳಿದರು. ಒಂದು ವೇಳೆ ಸತ್ತರೆ, ಶಿವನೊಂದಿಗೆ ಸೇರಿಕೊಳ್ಳುವುದಾಗಿ ತಿಳಿಸಿದರು. ಗುರುವಾರ ಕೊಮುರವಳ್ಳಿ ಮತ್ತು ಏಳುಪಾಯಲ ದೇವಸ್ಥಾನಕ್ಕೆ ಭೇಟಿ ನೀಡುವ ಯೋಜನೆಯನ್ನು ತಿಳಿಸಿದರು.

ಕೇವಲ ಹಿಂದು ಸಂಪ್ರದಾಯ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ. ತನ್ನ ಮೇಲೆ ಈ ರೀತಿಯ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಸರ್ಕಾರವನ್ನು ಟೀಕಿಸಿದರು. ಕಳೆದ ಕೆಲವು ದಿನಗಳಿಂದ ಅಘೋರಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಇದೀಗ ನಿರ್ದಿಷ್ಟ ದಿನದಂದು ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದ್ದು, ಈ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಹೇಳಿದಂತೆಯೇ ಮಾಡುತ್ತಾರಾ? ಈ ಎರಡು ದಿನಗಳಲ್ಲಿ ಏನೆಲ್ಲ ಆಗುತ್ತೆ? ಈ ಮಧ್ಯೆ ಅಘೋರಿ ತಮ್ಮ ನಿರ್ಧಾರವನ್ನು ಬದಲಿಸುತ್ತಾರಾ? ಅಥವಾ ಪ್ಲಾನ್ ಮಾಡಿದಂತೆ ನಡೆದುಕೊಳ್ಳುತ್ತಾರಾ?ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net