

| ಪಂಕಜ ಕೆ.ಎಂ. ಬೆಂಗಳೂರು
ಹವಾಮಾನ ವೈಪರಿತ್ಯದಿಂದ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ವೈದ್ಯರಿಗೆ ಮಾಹಿತಿ ಕೊರತೆ ಇದ್ದು, ಅದರಲ್ಲೂ ಮಕ್ಕಳ ತಜ್ಞರು ಈ ವಿಚಾರದಲ್ಲಿ ತೀರಾ ಹಿಂದೆ ಉಳಿದಿದ್ದಾರೆ. ರೋಗ ಪತ್ತೆ ಮತ್ತು ಚಿಕಿತ್ಸೆ ವಿಚಾರದಲ್ಲಿ ವೈದ್ಯರ ತಿಳುವಳಿಕೆ ಮಟ್ಟ ಅರಿಯಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಜಾರ್ಜ್ ಮೇಸನ್ ಯೂನಿವರ್ಸಿಟಿ ಸಹಯೋಗದಲ್ಲಿ ಭಾರತ ಸೇರಿ 5 ದೇಶಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಸಮೀಕ್ಷೆಗಾಗಿ ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಾಗತಿಕ ತಾಪಮಾನದಿಂದ ಹವಾಮಾನ ಬದಲಾವಣೆ ಆಗುತ್ತಿತ್ತು, ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತಾಗಿ ಬಹು ಆಯ್ಕೆಯ ಉತ್ತರ ಇರುವ (Objectives questions) 75 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು. ಅವುಗಳನ್ನು ಇ-ಮೇಲ್ ಮೂಲಕ ದೇಶದ 9 ಸಾವಿರ ವೈದ್ಯರಿಗೆ ಕಳುಹಿಸಲಾಗಿತ್ತು. ಆದರೆ ಅವುಗಳಿಗೆ ಉತ್ತರ ನೀಡಿದವರು ಕೇವಲ 380 (ಶೇ. 4.5) ವೈದ್ಯರು ಮಾತ್ರ. ಉಳಿದವರು ಐದು ಬಾರಿ ನೆನಪು ಮಾಡಿದರೂ ಪ್ರತಿಕ್ರಿಯೆ ನೀಡುವ ಪ್ರಯತ್ನ ಮಾಡಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಸಂಚಾಲಕರು ಹಾಗೂ ಐಐಎಸ್ಸಿ (ದಿವೇಚಾ ಸೆಂಟರ್ ಕ್ಲೈಮೆಟ್ ಚೇಂಜ್) ಪ್ರೊ. ಡಾ. ಎಚ್. ಪರಮೇಶ್ ತಿಳಿಸಿದ್ದಾರೆ.
ವೈದ್ಯರಲ್ಲಿ ಸಮಯವಿಲ್ಲ: ಜಾಗತಿಕ ತಾಪಮಾನ ಹವಾಮಾನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ? ಅದರಿಂದ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳೇನು? ಪರಿಸರ ಮಾಲಿನ್ಯದಿಂದ ಜನರ ಆರೋಗ್ಯ ಯಾವ ರೀತಿ ಕೆಡುತ್ತಿದೆ? ಈ ಪ್ರಮಾಣ ಎಷ್ಟು ಹೆಚ್ಚಿದೆ? ಇದನ್ನು ತಡೆಯುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ನಿಮ್ಮ ಕೊಡುಗೆ ಏನು? ಈ ಕುರಿತು ನಿಮ್ಮ ಬಳಿ ಬರುವ ಎಷ್ಟು ರೋಗಿಗಳಿಗೆ ತಿಳುವಳಿಕೆ ನೀಡಿದ್ದೀರಿ ಇತ್ಯಾದಿ 75 ಪ್ರಶ್ನೆಗಳನ್ನು ಕೇಳಲಾಗಿತ್ತು. ಜತೆಗೆ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ನೀತಿ ರೂಪಿಸುವವರಿಗೆ ನೀವು ಸಲಹೆ ನೀಡಲು ಮುಂದೆ ಬರುವಿರಾ ಎಂಬ ಪ್ರಶ್ನೆಗೆ ಉತ್ತರ ಕಳಿಸಿದ್ದವರಲ್ಲಿ ಶೇ. 85 ಮಂದಿ ಸಮಯ ಇಲ್ಲ ಎಂಬ ಕಾರಣ ನೀಡಿದ್ದರು. ಶೇ. 75 ಮಂದಿ ಈ ಬಗ್ಗೆ ನಮಗೆ ಪೂರ್ಣ ತಿಳುವಳಿಕೆ ಇಲ್ಲ ಎಂದು ಹೇಳಿದ್ದರು. ಶೇ. 52 ಮಂದಿ ಈ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸುವುದು ಕಷ್ಟ. ಇದರಿಂದ ನಮ್ಮ ಕೆಲಸಕ್ಕೂ ತೊಂದರೆ ಆಗಲಿದೆ ಎಂದಿದ್ದರು. ಕೆಲವರು ನೀತಿ ರೂಪಿಸಿ ಅದರ ಕರ ಪತ್ರ ನೀಡಿದರೆ ಅದನ್ನು ರೋಗಿಗಳಿಗೆ ವಿತರಿಸುತ್ತೇವೆ ಎಂದು ಹೇಳಿದ್ದರು.
ವಿಶ್ವದಲ್ಲಿ ಒಂದು ವರ್ಷಕ್ಕೆ ಒಬ್ಬ ವ್ಯಕ್ತಿ 4 ಟನ್ ಇಂಗಾಲದ ಡೈ ಆಕ್ಸೆ ೖಡ್ ಉತ್ಪತ್ತಿ ಮಾಡುತ್ತಾನೆ. ಅಮೆರಿಕದಲ್ಲಿ 16 ಟನ್ ಇದೆ. ಇದರಿಂದ ಎರಡು ದಶಕಗಳಲ್ಲಿ ಭೂಮಿಯ ಮೇಲಿನ ಉಷ್ಣಾಂಶ 0.85 ಡಿಗ್ರಿ ಸೆಂಟಿಗ್ರೇಟ್ಗೆ ಹೆಚ್ಚಿದೆ. ಇದನ್ನು ತಗ್ಗಿಸಲು ಒಂದು ವರ್ಷಕ್ಕೆ ಒಬ್ಬ ವ್ಯಕ್ತಿ ಉತ್ಪಾದಿಸುತ್ತಿರುವ ಇಂಗಾಲದ ಪ್ರಮಾಣವನ್ನು 2 ಟನ್ ಗೆ ಇಳಿಸಬೇಕಿದೆ. | ಡಾ. ಎಚ್. ಪರಮೇಶ್ ಡಬ್ಲ್ಯುಎಚ್ಒ ಭಾರತದ ಸಂಚಾಲಕರು, ಐಐಎಸ್ಸಿ ಪ್ರೊಫೆಸರ್
ವಿದ್ಯಾರ್ಥಿಗಳಲ್ಲಿ ಅರಿವು ಹೆಚ್ಚು: ಆದರೆ ಇದೇ ಪ್ರಶ್ನೆಗಳನ್ನು ಶಾಲಾ ವಿದ್ಯಾರ್ಥಿಗಳಲ್ಲಿ ಕೇಳಿದಾಗ ಸಮರ್ಥವಾಗಿ ಉತ್ತರ ನೀಡಿದ್ದರು. ಶಿಕ್ಷಕರಿಂದ, ಮಾಧ್ಯಮಗಳಿಂದ, ಪತ್ರಿಕೆಗಳಿಂದ, ಪುಸ್ತಕ ಓದುವುದರಿಂದ ಈ ವಿಚಾರ ತಿಳಿಯಿತು ಎಂದು ಹೇಳಿದರು.
ಇಂಗಾಲದ ಡೈ ಆಕ್ಸೆ ೖಡ್ ಪರಿಣಾಮ: ಹವಾಮಾನ್ಯ ವೈಪರಿತ್ಯಕ್ಕೆ ಪ್ರಮುಖ ಕಾರಣ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆ ೖಡ್ ಗಣ ನೀಯ ಏರಿಕೆ. ಭೂಮಿಯಲ್ಲಿ ಇಂಗಾಲದ ಡೈ ಆಕ್ಸೆ ೖಡ್ ಪಾರ್ಟ್ ಪರ್ ಮಿಲಿಯನ್ (ಪಿಪಿಎಂ) 450ಕ್ಕೆ ಹೆಚ್ಚಿದೆ. ಇದರಿಂದ ಭೂಮಿಯ ಮೇಲಿನ ಉಷ್ಣಾಂಶ 0.85 ಹೆಚ್ಚಿದೆ. ಈ ಪಿಪಿಎಂ ಪ್ರಮಾಣ 600 ದಾಟಿದರೆ ಭೂಮಿಯ ಮೇಲಿನ ಯಾವ ಜೀವಸಂಕುಲವೂ ಉಳಿಯುವುದಿಲ್ಲ. ಇದು ಈಗಾಗಲೆ ಹೆಚ್ಚಿರುವು ದರಿಂದ ಹವಾಮಾನ್ಯ ವೈಪರಿತ್ಯಗಳಾಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚಿದೆ. ಇಂಗಾಲದ ಡೈ ಆಕ್ಸೆ ೖಡ್ ಪ್ರಮಾಣ ತಗ್ಗಿಸುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ 10 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಾ.ಎಚ್. ಪರಮೇಶ್ ತಿಳಿಸಿದರು.