More

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ನವದೆಹಲಿ: ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ನನ್ನನ್ನು ಬಂಧಿಸಿದ್ದಾರೆ ಎಂಬುದಾಗಿ ಯುವತಿಯೊಬ್ಬಳು ಪೊಲೀಸರ ವಿರುದ್ಧವೇ ಆರೋಪ ಹೊರಿಸಿದ್ದಾಳೆ. ಮತ್ತೊಂದೆಡೆ ಆಕೆ ಮಾಡಿರುವ ಕಿತಾಪತಿಯೇ ಬೇರೆ ಎಂಬುದು ಪೊಲೀಸರಿಂದ ತಿಳಿದು ಬಂದಿದೆ.

    ಯುಎಸ್​ನ ನೆವಡದಲ್ಲಿನ ಹೆಂಡ್ ಬುಸ್ತಾಮಿ ಎಂಬ 28 ವರ್ಷದ ಯುವತಿ ಈ ಆರೋಪ ಮಾಡಿದ್ದಾಳೆ. ಈಕೆಯನ್ನು ಲಾಸ್ ವೇಗಸ್​ನ ಹ್ಯಾರಿ ರೀಡ್ ಇಂಟರ್​ನ್ಯಾಷನಲ್ ಏರ್​ಪೋರ್ಟ್​​ನಲ್ಲಿ ಆ. 31ರಂದು ಬಂಧಿಸಲಾಗಿದೆ. ಇಲ್ಲಿನ ಚಿಲ್ಲಿಸ್ ರೆಸ್ಟೋರೆಂಟ್​​ನಲ್ಲಿ ಬಿಲ್​ ಕೊಡದೆ ಹೋಗಲೆತ್ನಿಸಿದ ಈಕೆ ಏರ್​ಪೋರ್ಟ್​ ನಿಯಮಗಳನ್ನು ಉಲ್ಲಂಘಿಸಿದ್ದಳು. ಈ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಳು.

    ಕೂಡಲೇ ಹುಡುಕಾಟ ಆರಂಭಿಸಿದಾಗ ಪೊಲೀಸರು ಸೂಚಿಸಿದ್ದ ಚಹರೆಯ ಯುವತಿ ಸೆಕ್ಯುರಿಟಿ ಚೆಕ್​ಪಾಯಿಂಟ್ ಬಳಿ ಅವಿತುಕೊಂಡಿದ್ದು ಗಮನಕ್ಕೆ ಬಂದಿತ್ತು. ನಂತರ ಆಕೆಯನ್ನು ಬ್ಯಾಗೇಜ್ ಕ್ಲೇಮ್ ಏರಿಯಾದಲ್ಲಿ ಪತ್ತೆ ಮಾಡಿ ಹಿಡಿಯಲಾಗಿತ್ತು. ಈ ಸಮಯದಲ್ಲಿ ಪ್ರತಿರೋಧ ತೋರಿದ್ದ ಯುವತಿ, ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರತ್ತ ಉಗಿದಿದ್ದಲ್ಲದೆ, ಅವರು ವಿಕೃತರು, ನನ್ನನ್ನು ಅತ್ಯಾಚಾರ ಮಾಡಲು ಬಂದರು, ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಹೀಗೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಅದಾಗ್ಯೂ ಪೊಲೀಸರು ಆಕೆಯನ್ನು ನ್ಯಾಯಾಲಯದ ವಾರಂಟ್​ ಪಡೆದು ಬಂಧಿಸಿದ್ದು, ದುರ್ವರ್ತನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಕೆ ಜಾಮೀನಿನ ಮೇಲೆ ಹೊರಗಿದ್ದು, ಅ. 27ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts