ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿಗೆ ವಿಜಯವಾಣಿಯ ವೀರಣ್ಣ, ಜಯತೀರ್ಥ ಆಯ್ಕೆ

Veeranna, Jayatheertha from Vijayavani
Published on

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ ದತ್ತಿ ಪ್ರಶಸ್ತಿಗೆ ವಿಜಯವಾಣಿಯ ಸಹಾಯಕ ಸಂಪಾದಕ ಜಿ. ವೀರಣ್ಣ, ಜಯತೀರ್ಥ ಪಾಟೀಲ್ ಕಲಬುರಗಿ ಆಯ್ಕೆ ಆಗಿದ್ದಾರೆ.

ಕೆಯುಡಬ್ಲ್ಯುಜೆ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದ್ದು, ಮಾ.18ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವಾದರಗಳನ್ನು ಒಳಗೊಂಡಿದೆ ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ವಾರ್ಷಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಆದವರ ವಿವರ

ಡಿವಿಜಿ ಪ್ರಶಸ್ತಿ: ಬಿ.ವಿ.ಮಲ್ಲಿಕಾರ್ಜುನಯ್ಯ, ಸಂಪಾದಕ, ಸಮನ್ವಯ ಮತ್ತು ವಿಶೇಷ ಯೋಜನೆ, ಕನ್ನಡ ಪ್ರಭ

ಪಾಟೀಲ ಪುಟ್ಟಪ್ಪ ಪ್ರಶಸ್ತಿ: ಜಿ.ವೀರಣ್ಣ, ಸಹಾಯಕ ಸಂಪಾದಕ, ವಿಜಯವಾಣಿ

ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ವಸಂತ ನಾಡಿಗೇರ, ಸಂಪಾದಕ, ಸಂಯುಕ್ತ ಕರ್ನಾಟಕ.

ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಅರುಣಕುಮಾರ್ ಹಬ್ಬು, ಹಿರಿಯ ಪತ್ರಕರ್ತ, ಹುಬ್ಬಳ್ಳಿ

ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ: ಕೆ.ಎನ್.ರವಿ, ಹಿರಿಯ ಪತ್ರಕರ್ತ, ಮಂಡ್ಯ

ಕಿಡಿ ಶೇಷಪ್ಪ ಪ್ರಶಸ್ತಿ: ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ, ಸಂಪಾದಕ, ಶ್ರಾವಣ ಪತ್ರಿಕೆ, ಬಾಗಲಕೋಟೆ.

ಪಿ.ಆರ್.ರಾಮಯ್ಯ ಪ್ರಶಸ್ತಿ: ಮುಂಜಾನೆ ಸತ್ಯ, ಹಿರಿಯ ಪತ್ರಕರ್ತ

ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: ಮೊಹಮ್ಮದ್ ಭಾಷ್ಯಂ ಗೂಳ್ಯಂ, ದಿ ಡೈಲಿ ನ್ಯೂಸ್.

ಪಿ.ರಾಮಯ್ಯ ಪ್ರಶಸ್ತಿ: ಎಂ.ಜಿ.ಪ್ರಭಾಕರ, ಸಂಪಾದಕ, ಹೊನ್ನುಡಿ ಪತ್ರಿಕೆ, ಕೋಲಾರ.

ಮ.ರಾಮಮೂರ್ತಿ ಪ್ರಶಸ್ತಿ: ಶ್ರೀಶೈಲ ಗು. ಮಠದ, ಹಿರಿಯ ಪತ್ರಕರ್ತ, ಕನ್ನಡ ಪ್ರಭ, ಬೆಳಗಾವಿ

ಗರುಡನಗಿರಿ ನಾಗರಾಜ್ ಪ್ರಶಸ್ತಿ: ಎನ್.ಬಸವರಾಜ್, ಹಿರಿಯ ಪತ್ರಕರ್ತ

ಮಹದೇವ ಪ್ರಕಾಶ್ ಪ್ರಶಸ್ತಿ: ಜಿ.ಆರ್.ಸತ್ಯಲಿಂಗರಾಜು, ಹಿರಿಯ ಪತ್ರಕರ್ತ

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ನಾಗರಾಜ ಶೆಣೈ, ಫೋಟೋ ಜರ್ನಲಿಸ್ಟ್, ಶಿವಮೊಗ್ಗ.

ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ: ಆರ್.ಎನ್.ಸಿದ್ಧಲಿಂಗ ಸ್ವಾಮಿ, ಹಿರಿಯ ಪತ್ರಕರ್ತ, ಚಾಮರಾಜನಗರ

ಎಂ.ನಾಗೇಂದ್ರರಾವ್ ಪ್ರಶಸ್ತಿ: ಡಾ.ಉಳ್ಳಿಯಡ ಎಂ. ಪೂವಯ್ಯ, ಸಂಪಾದಕ, ಬ್ರಹ್ಮಗಿರಿ ಕೊಡವ ಪತ್ರಿಕೆ, ಮಡಿಕೇರಿ.

ಅಭಿಮಾನಿ ಪ್ರಕಾಶನ ಪ್ರಶಸ್ತಿ: ಸಿರಾಜ್‌ ಬಿಸರಳ್ಳಿ, ಹಿರಿಯ ಪತ್ರಕರ್ತ, ಕೊಪ್ಪಳ.

ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಜಯತೀರ್ಥ ಪಾಟೀಲ್, ಹಿರಿಯ ಪತ್ರಕರ್ತ, ಕಲಬುರಗಿ

ರಾಜಶೇಖರ ಕೋಟಿ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಪ್ರದಾನ ಸಂಪಾದಕರು, ಪ್ರತಿನಿಧಿ, ಮೈಸೂರು.

ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ಎಸ್.ಜಿ.ತುಂಗರೇಣುಕ, ಸಹ ಸಂಪಾದಕಿ, ಚಿತ್ರ ಸಿನಿಮಾ ಪತ್ರಿಕೆ

ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಡಿ.ಎನ್. ಶಾಂಭವಿ, ಹಿರಿಯ ಪತ್ರಕರ್ತೆ, ಹರಿಹರ, ದಾವಣಗೆರೆ.

ಟಿ.ಕೆ.ಮಲಗೊಂಡ ಪ್ರಶಸ್ತಿ: ನಾರಾಯಣ ಹೆಗಡೆ, ಹಿರಿಯ ಪತ್ರಕರ್ತ, ಹಾವೇರಿ

ಆರ್.ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ): ವಿಜಯ ಕರ್ನಾಟಕ, ಬೆಂಗಳೂರು.

ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿಗೆ ಆಯ್ಕೆ ಆದವರು

  • ಜಯಲಕ್ಷ್ಮಿ ಸಂಪತ್ ಕುಮಾರ್, ಸಂಪಾದಕಿ, ಸುಧರ್ಮ ಪತ್ರಿಕೆ.
  • ಎಚ್.ಎನ್.ಆರತಿ, ದೂರದರ್ಶನ
  • ಎಸ್.ಎಂ.ಜಂಬುಕೇಶ್ವರ, ಹಿರಿಯ ಪೋಟೋ ಜರ್ನಲಿಸ್ಟ್
  • ಕೆ.ದೀಪಕ್, ಹಿರಿಯ ಪತ್ರಕರ್ತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net