

* ನಿವೃತ್ತಿ ನೌಕರರೇ ಉದ್ಯಾನವನ ನಿರ್ವಹಣೆಗಾರರು
* ಧ್ಯಾನ, ಯೋಗಕ್ಕೂ ಯೋಗ್ಯ ಈ ಹಸಿರು ವನ
ವಿಭೂತಿಕೆರೆ ಶಿವಲಿಂಗಯ್ಯ, ರಾಮನಗರ
ಒಳಗೆ ಕಾಲಿಟ್ಟರೆ ತಂಪಾದ ತಂಗಾಳಿ, ಕಣ್ಮನ ಸೆಳೆಯುವ ಹಸಿರು, ಸುಂದರ ಪರಿಸರದಿಂದ ಕೈ ಬೀಸಿ ಕರೆಯುತ್ತಿದೆ ಐಜೂರು ಡಾರ್ಲಸ್ ಕಾಲನಿಯ ರಾಷ್ಟ್ರಕವಿ ಕುವೆಂಪು ಉದ್ಯಾನವನ.
ಹೌದು, ಈ ಉದ್ಯಾನವನ ಚಿಕ್ಕದಾದರೂ ಯಾವುದೇ ದೊಡ್ಡ ಉದ್ಯಾನವನಕ್ಕೇನೂ ಕಡಿಮೆ ಇಲ್ಲ. ನಡೆದಾಡಲು ಉತ್ತಮ ನೆಲಹಾಸು, ಪ್ರಕೃತಿ ಸಿರಿಯೇ ಮೈ ಹೊದ್ದಿದೆ. ಜತೆಗೆ ವ್ಯಾಯಾಮ ಸಲಕರಣೆಗಳಿದ್ದು, ಹಿರಿಯ ಕಿರಿಯ ವಾಯುವಿಹಾರಿಗಳಿಗೆ ವರದಾನವಾಗಿದೆ.
ನಗರಸಭೆ ಕಳೆದ ಎರಡು ವರ್ಷಗಳ ಹಿಂದೆ ಉದ್ಯಾನವನ ನಿರ್ಮಿಸಿ ನಾಗರಿಕರ ಸೇವೆಗೆ ನೀಡಿತ್ತು. ಅಲ್ಲಿನ ಸ್ಥಳಿಯ ನಿವಾಸಿಗಳು, ನಿವೃತ್ತ ನೌಕರರು ಸೇರಿ ಸುಮಾರು 20 ಜನರು ಕುವೆಂಪು ಹೆಸರಿನಲ್ಲಿ ಉದ್ಯಾನವನ ನಿರ್ವಹಣೆ ಸಂ ಮಾಡಿಕೊಂಡು ಉದ್ಯಾನವನದ ಸ್ವಚ್ಛತೆ, ನಿರ್ವಹಣೆ ನಡೆಸುತ್ತ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ.
ಇಂದು ಉದ್ಯಾನವನ ರಾಮನಗರದ ಬೇರೆ ಬೇರೆ ದೊಡ್ಡ ದೊಡ್ಡ ಉದ್ಯಾನವನಗಳಿಗೆ ಸೆಡ್ಡು ಹೊಡೆದಿದೆ. ಚಿಕ್ಕ ಸ್ಥಳವಾದರೂ ಒಂದು ಬಾರಿ ವಾಯುವಿಹಾರಕ್ಕೆ, ವ್ಯಾಯಾಮಕ್ಕೆ ಬಂದವರು ಮತ್ತೆ ಬೇರೆ ಉದ್ಯಾನವನಗಳತ್ತ ಮುಖ ಮಾಡುವುದಿಲ್ಲ.
ನಿರ್ವಹಣೆ
ಉದ್ಯಾನವನದಲ್ಲಿ ಸಂದ ಸದಸ್ಯರು ಸರತಿಯಂತೆ ಗಿಡಗಳಿಗೆ ನೀರು ಹಾಕುವುದು, ಕಸ ಗುಡಿಸುವುದು, ಕಸ ಕಡ್ಡಿ ತೆಗೆಯುವುದು, ಪ್ಲಾಸ್ಟಿಕ್ ವಸ್ತುಗಳು ಸುಳಿಯದಂತೆ ಎಚ್ಚರವಹಿಸುತ್ತಿದ್ದಾರೆ
ಧ್ಯಾನಸ್ಥಳ
ಉದ್ಯಾನವನದ ಮಧ್ಯೆ ವಾಯುವಿಹಾರ ನಡೆಸಿ, ಇಲ್ಲವೇ ವ್ಯಾಯಾಮ ಮಾಡಿ ದಣಿವಾದಾಗ ಕುಳಿತುಕೊಳ್ಳಲು ಪಿರಮಿಡ್ ಆಕಾರದಲ್ಲಿ ಆಸನಗಳನ್ನು ಅಳವಡಿಸಿ ಧ್ಯಾನಾಸಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ.
ನಗರಸಭೆಗೆ ಸ್ಥಳಿಯರ ಬೇಡಿಕೆ
ಉದ್ಯಾನವನದಲ್ಲಿ ನೀರಿನ ಕಾರಂಜಿ, ಮತ್ತಷ್ಟು ಕುಳಿತುಕೊಳ್ಳುವ 10 ಬೆಂಚುಗಳು, ಶೌಚಾಲಯ, ನಡೆದಾಡುವ ಸ್ಥಳಕ್ಕೆ ವಾಕ್ ಲೈಟ್, ಮಕ್ಕಳ ವ್ಯಾಯಾಮ ಆಟಿಕೆ ಪರಿಕರ ಬೇಕೆಂದು ನಗರಸಭೆ ಅಧ್ಯಕ್ಷರಿಗೆ ಸಂ ಬೇಡಿಕೆ ಇಟ್ಟಿದೆ.
ನಿರ್ವಹಣೆ ಕೊಠಡಿ : ನೀರು ಹಾಕುವ ಪೈಪು, ಗಿಡ ನೆಡಲು ಬಳಸುವ ಹಾರೆ, ಗುದ್ದಲಿ, ಕಸ ಕಡ್ಡಿ ಎತ್ತುವ ಬಾಣಲಿ, ಕಸ ಸಂಗ್ರಹಣೆ ಬುಟ್ಟಿ, ಒಂದೆಡೆ ಸಂಗ್ರಹ ಮಾಡಲು ಉದ್ಯಾನವನದ ಒಂದು ಜಾಗದಲ್ಲಿ ಪ್ರತ್ಯೇಕವಾಗಿ ಕುವೆಂಪು ಉದ್ಯಾನವನ ನಿರ್ವಹಣೆ ಸಂದ ಸದಸ್ಯರೇ ತಮ್ಮ ಸ್ವಂತ ಖರ್ಚಿನಿಂದ ಕೊಠಡಿ ನಿರ್ಮಾಣ ಮಾಡಿ ಬುಧವಾರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಅವರಿಂದ ಆ ಕೊಠಡಿ ಉದ್ಘಾಟಿಸಿಕೊಂಡರು. ಈ ಸಂಧರ್ಭದಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್ ಮತ್ತು ಪಾರ್ವತಮ್ಮ ಇದ್ದರು.
ಆಕರ್ಷಣೆ : ಉದ್ಯಾನವನದಲ್ಲಿ ಬಣ್ಣ ಬಣ್ಣದ ಗಿಡ ನೆಡಲಾಗಿದೆ. ಜೊತೆಗೆ ಹಚ್ಚ ಹಸಿರು ಮೇಳೈಸುತ್ತಿದೆ. ಯಾವುದೇ ಜಾಗದಲ್ಲೂ ಕಸ ಕಡ್ಡಿ ಕಾಣದಂತೆ ಎಚ್ಚರವಹಿಸಲಾಗಿದೆ. ಉತ್ತಮ ನೆಲಹಾಸು ವ್ಯಾಯಾಮ ಪರಿಕರ ಅಳವಡಿಸಲಾಗಿದೆ.
ಆರೋಗ್ಯ ಸ್ನೇಹಿ
ನಗರ ಪ್ರದೇಶದಲ್ಲಿ ಬಹಳಷ್ಟು ಉದ್ಯಾನವನಗಳು ಇದ್ದರೂ ನಗರಸಭೆ ಕಳೆದ ವರ್ಷದಿಂದ ಹೆಚ್ಚಿನ ರೀತಿಯಲ್ಲಿ ಕಾಯಕಲ್ಪ ನೀಡುತ್ತಿದ್ದರೂ ಉತ್ತಮ ನಿರ್ವಹಣೆ ಕಾಣುವುದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೋಲುತ್ತಿವೆ. ಈ ಕಾರಣದಿಂದ ನಗರಸಭೆ ಕಾಯಕಲ್ಪ ನೀಡಲು ಉದ್ಯಾನವನಗಳಿಗೆ ಅನುದಾನ ಮೀಸಲಿರಿಸಿ ಅಭಿವೃದ್ಧಿಗೆ ಮುಂದಾಗಿದೆ. ಆದರೆ, ಕುವೆಂಪು ಉದ್ಯಾನವನವನ್ನು ಮಾತ್ರ ಆರೋಗ್ಯ ಸ್ನೇಹಿಯಾಗಿ ನಿರ್ಮಾಣ ಮಾಡಲಾಗಿದೆ.
ಕುವೆಂಪು ಉದ್ಯಾನವನ ನಾವು ಅಂದುಕೊಂಡಿರುವುದಕ್ಕಿಂತಲೂ ಉತ್ತಮವಾಗಿದೆ. ಈ ಭಾಗದ ಹಿರಿಯರು ನಗರಸಭೆ ಜತೆ ಕೈ ಜೋಡಿಸಿ ಉತ್ತಮ ಉದ್ಯಾನವನವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಗರಸಭೆ ಅಮೃತ್ ಯೋಜನೆಯಲ್ಲಿ ಬೇರೆ ಉದ್ಯಾನವನಗಳಿಗೆ 75 ಲಕ್ಷ ರೂ.ವೆಚ್ಚದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಮುಂದಾಗಿದೆ. ಈ ಭಾಗದ ಸಂದ ಸದಸ್ಯರ ಸೇವಾ ಕಾರ್ಯಗಳು ಇತರರಿಗೆ ಮಾದರಿಯಾಗಿವೆ.
> ಕೆ.ಶೇಷಾದ್ರಿ ಅಧ್ಯಕ್ಷರು, ರಾಮನಗರ ನಗರಸಭೆ.
ಎರಡು ವರ್ಷಗಳ ಹಿಂದೆ 50 ಲಕ್ಷ ರೂ. ಅನುದಾನದಲ್ಲಿ ಉದ್ಯಾನವನ ನಿರ್ಮಾಣ ಆಗಿದೆ. ನಗರಸಭೆ ಗಿಡ ನೆಟ್ಟು ವ್ಯಾಯಾಮ ಸಲಕರಣೆ, ವಿದ್ಯುತ್ ದೀಪ ಅಳವಡಿಸಿದ್ದು, ಕಾಲಕಾಲಕ್ಕೆ ನಿರ್ವಹಣೆ ಮಾಡುತ್ತಿದೆ. ಕುವೆಂಪು ಉದ್ಯಾನವನ ನಿರ್ವಹಣೆ ಸಂ ಮತ್ತಷ್ಟು ಸೇವೆ ಒದಗಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ನಿರ್ವಹಣೆ ನಡೆಸುತ್ತಿರುವುದು ಶ್ಲಾನೀಯ.
> ಮಂಜುನಾಥ್, ನಗರಸಭಾ ಸದಸ್ಯರು, ರಾಮನಗರ.