ಮಕ್ಕಳಿಗೆ ವಿಜ್ಞಾನದ ಒಲವು ಮೂಡಿಸಿ

kumadavthi school
ಕುಮದ್ವತಿ ಪ್ರೌಢಶಾಲೆಯಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕ ಎಂ.ಪರಮೇಶ್ವರಪ್ಪ ಉದ್ಘಾಟಿಸಿದರು, ವಿಶ್ವನಾಥ್, ಪ್ರಶಾಂತ್ ಕುಬುಸದ, ವಿದ್ಯಾ ಇತರರಿದ್ದರು.
Published on

ಶಿಕಾರಿಪುರ: ಜ್ಞಾನದ ಆವಿಷ್ಕಾರವಾಗಿ ವಾಸ್ತವದ ಸಂಶೋಧನೆಗಳು ಅನಾವರಣವಾದಾಗ ಅದು ವಿಜ್ಞಾನ ಆಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಪರಮೇಶ್ವರಪ್ಪ ಹೇಳಿದರು.
ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಲ್.ಕೆ.ಜಿ ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಉಪಯೋಗಿಸುವ ಪ್ರತಿಯೊಂದು ವಸ್ತುಗಳು ವಿಜ್ಞಾನದ ಕೊಡುಗೆ ಆಗಿವೆ. ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಅಪಾರ. ಮಕ್ಕಳಿಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ ಒಲವು ಬೆಳೆಸಬೇಕು ಎಂದರು.
ವಿಜ್ಞಾನವಿಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಡುಗೆ ತಯಾರು ಮಾಡುವಾಗ ಪಾತ್ರೆ ಮತ್ತು ಉಗೆಯ ಕಲ್ಪನೆಯಿಂದ ಮುಂದೆ ಉಗಿಬಂಡಿಯನ್ನು ಕಂಡು ಹಿಡಿಯಲಾಯಿತು ಎಂದು ಹೇಳಿದರು.
ಶಿಕ್ಷಕ ಪ್ರಶಾಂತ ಕುಬಸದ ಮಾತನಾಡಿ, ಕಲಿತ ವಿಷಯವನ್ನು ಪರೀಕ್ಷಿಸಲು ಹಲವು ಮಾರ್ಗಗಳಿವೆ. ಅದರಲ್ಲಿ ರಸಪ್ರಶ್ನೆ ಒಂದು. ವಿದ್ಯಾರ್ಥಿಗಳ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಕಡೆ ಹೆಚ್ಚು ಗಮನಹರಿಸಿದಾಗ ಅವರು ತಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.
ಪ್ರಾಚಾರ್ಯ ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ ಹೆಚ್ಚಿಸಲು ಇಂತಹ ಕಾರ್ಯ ಚಟುವಟಿಕೆಗಳು ಪೂರಕ. ಪಾಲಕರ ಸಹಕಾರದಿಂದ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂದು ಹೇಳಿದರು
ರಸಪ್ರಶ್ನೆ ಸಂಪನ್ಮೂಲ ವ್ಯಕ್ತಿ ಕೆ.ವಿದ್ಯಾ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net