

ಗಂಗೊಳ್ಳಿ: ಮೇಲ್‌ಗಂಗೊಳ್ಳಿಯ ಟೀಮ್ ಮಹಾಸತಿ ಹುಲಿವೇಷ ತಂಡದ 12ನೇ ವರ್ಷದ ಹುಲಿವೇಷ ಲೋಬಾನ ಸೇವೆ ಹಾಗೂ 25 ವರ್ಷಗಳಿಂದ ಹುಲಿವೇಷ ಧರಿಸಿ ಸೇವೆ ಸಲ್ಲಿಸಿದವರ ಸನ್ಮಾನ ಸಮಾರಂಭ ಶನಿವಾರ ನಡೆಯಿತು.
ಮೇಲ್‌ಗಂಗೊಳ್ಳಿ ಟೀಮ್ ಮಹಾಸತಿ ಹುಲಿವೇಷ ತಂಡದ ಸಲಹೆಗಾರ ಜಗದೀಶ ಮೇಲ್‌ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. 25 ವರ್ಷಗಳಿಂದ ಹುಲಿವೇಷ ಧರಿಸಿ ಸೇವೆ ಸಲ್ಲಿಸಿದ ನಾಗರಾಜ ನಾಯಕವಾಡಿ, ಚಂದ್ರ ಖಾರ್ವಿ, ಭಾಸ್ಕರ, ರವಿ ನಾಯಕವಾಡಿ, ಉಮಾನಾಥ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಉಮಾನಾಥ ದೇವಾಡಿಗ, ಚಂದ್ರ ಖಾರ್ವಿ, ಭಾಸ್ಕರ ಎಂ, ಸಚಿನ್, ಮೇಷರಾಜ್ ಮಂಕಿ, ಸುದರ್ಶನ, ಪ್ರದೀಪ್, ರಚನ್ ಅವಿನಾಶ್, ವಸಂತ, ಗಿರೀಶ ನಾಯಕವಾಡಿ ಮತ್ತಿತರರು ಉಪಸ್ಥಿತರಿದ್ದರು. ಸಚಿನ್ ಸ್ವಾಗತಿಸಿದರು. ಅವಿನಾಶ್ ವಂದಿಸಿದರು. ಸವಿನ್ ಕಾರ್ಯಕ್ರಮ ನಿರ್ವಹಿಸಿದರು.