ವಿಜಯವಾಣಿ ಸುದ್ದಿಜಾಲ ಕೋಟ
ಸಮುದ್ಯತಾ ಗ್ರೂಪ್ ಸಂಸ್ಥೆಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. ಕುಂದಾಪುರದ ಪುರಸಭಾ ವ್ಯಾಪ್ತಿಯಿಂದ 14 ಕಿ.ಮೀ. ವಿಸ್ತೀರ್ಣದಲ್ಲಿ ಆನ್‌ಲೈನ್ ಆಹಾರ ವಿತರಣೆ ಮಾಡುವ ಸಮುದ್ಯತಾ ಆ್ಯಪ್ ಅನ್ನು ಶನಿವಾರ ಲೋಕಾರ್ಪಣೆಗೊಳಿಸಿತು.
ಕೋಟದ ಜನತಾ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ತಂಡ, ಗುಣಮಟ್ಟದ ಆಹಾರ, ಸಮಯ ಪಾಲನೆಯಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.
ಸಂಸ್ಥೆಯ ನೂರಕ್ಕೂ ಮಿಕ್ಕಿ ಸಿಬ್ಬಂದಿಗೆ ಇಎಸ್‌ಐ, ಪಿ.ಎಫ್ ಸೌಲಭ್ಯ ವಿತರಿಸಿದ ಚಾರ್ಟೆಡ್ ಅಕೌಂಟೆಂಟ್ ಕೆ.ಪದ್ಮನಾಭ ಕಾಂಚನ್ ಮಾತನಾಡಿ, ಸಮುದ್ಯತಾ ಸಂಸ್ಥೆಯ ಸಿಬ್ಬಂದಿ, ಆಡಳಿತ ವರ್ಗ ಅತ್ಯುತ್ತಮ ಸೇವಾ ಮನೋಭಾವ ಹೊಂದಿದ್ದು, ಒಂದೇ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗ್ರಾಹಕರನ್ನು ತಲುಪಲು ಯಶಸ್ಸು ಸಾಧಿಸಿರುವುದು ಶ್ಲಾಘನೀಯ ಎಂದರು.
ಬೆಂಗಳೂರು ಉದ್ಯಮಿ ರಾಘವೇಂದ್ರ ಕಾಂಚನ್ ಪಡುಕರೆ ಮಾತನಾಡಿ, ಖಾಸಗಿ ಆ್ಯಪ್‌ಗಳಿಂದ ಹೋಟೆಲ್ ಉದ್ಯಮ ಬಸವಳಿದು ಹೋಗಿದ್ದು, ಗ್ರಾಹಕರಿಗೆ ಹೊರೆಯಲ್ಲದ ಸ್ವಂತ ಆ್ಯಪ್ ಬಳಸುವುದು ಉದ್ಯಮಶೀಲತೆಯ ಆದ್ಯತೆಯಾಗಬೇಕು ಎಂದರು.
ಆ್ಯಪ್ ಬಿಡುಗಡೆ ತಕ್ಷಣ ಉದ್ಯಮಿ ಪ್ರಶಾಂತ್ ಎ.ಕುಂದರ್ ಸ್ಥಳದಲ್ಲಿಯೇ ಆನ್‌ಲೈನ್ ಮೂಲಕ ಪಾನೀಯ ಆರ್ಡರ್ ಮಾಡಿ ಅತಿಥಿಗಳಿಗೆ ಕೊಟ್ಟು ಸರ್‌ಪ್ರೈಸ್ ನೀಡಿದರು. ಸಂಸ್ಥೆ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ ಉಪಸ್ಥಿತರಿದ್ದರು. ಸಂಸ್ಥೆ ಸಂದೀಪ್ ಆ್ಯಪ್ ಬಗ್ಗೆ ವಿವರಿಸಿದರು. ಸಂದೇಶ್ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರೂಪಿಸಿದರು.