

ಶಿವಮೊಗ್ಗ: ಕೇಂದ್ರ ಸರ್ಕಾರ ದೇಶದ್ರೋಹಿ ಸಂಘಟನೆ ಪಿಎಫ್ಐಯನ್ನು ಬ್ಯಾನ್ ಮಾಡಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ದೇಶಭಕ್ತ ಮುಸ್ಲಿಂ ನಾಯಕರು ಬೆಂಬಲ ಕೊಡಬೇಕು. ಪಿಎಫ್ಐ ಕಾರ್ಯಕರ್ತರಿಗೆ ಹಿರಿಯರು ಬುದ್ಧಿ ಹೇಳಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಕಿಡಿಗೇಡಿಗಳು 'ಚಡ್ಡಿಗಳೇ ಎಚ್ಚರ, ಪಿಎಫ್ಐ ನಾವು ಮರಳಿ ಬರುತ್ತೇವೆ' ಎಂದು ರಸ್ತೆ ಮೇಲೆ ಬರೆದಿದ್ದರು. ಇದಕ್ಕೆ ಗರಂ ಆಗಿರುವ ಮಾಜಿ ಸಚಿವ ಈಶ್ವರಪ್ಪ, ರಸ್ತೆ ಮೇಲೆ, ಗೋಡೆ ಮೇಲೆ ಹೇಡಿಗಳಿಂದ ಮಾತ್ರ ಬರೆಯಲು ಸಾಧ್ಯ. ಆರ್ಎಸ್ಎಸ್ ಅನ್ನು ಯಾರಿಂದಲೂ, ಏನೂ ಮಾಡಲು ಸಾಧ್ಯವಿಲ್ಲ. ಅವರ ಅಪ್ಪನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲ ಎಂದರು.
ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಗಳು ಮತ್ತೆ ಹುಟ್ಟಿಕೊಂಡರೆ ಅವರ ಸೊಂಟ ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಮುಂದೆ ಈ ರೀತಿಯಾಗಿ ಮಾಡಿದರೆ ಸರ್ಕಾರ ಸರಿಯಾಗಿ ಬುದ್ಧಿ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.