

ವಿಜಯಪುರ: ನಾನು ಸನಾತನ ಧರ್ಮಕ್ಕಲ್ಲ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎಂಬ ನಟ ಪ್ರಕಾಶ್ ರಾಜ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸುವ ಮೂಲಕ ಹೊಸ ಮೂಲಕ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ತಾಯಿಯ ಬಗ್ಗೆ ನನಗೆ ಗೌರವ ಇದೆ. ಆದರೆ, ಪ್ರಕಾಶ್ ರಾಜ್ ಯಾರಿಗೆ ಹುಟ್ಟಿದ್ದಾರೆ ಎಂಬ ವಿಚಾರವನ್ನ ಅವರ ತಾಯಿ ಹೇಳಬೇಕಷ್ಟೇ ಎಂದಿದ್ದಾರೆ.
ಸಾವಿರಾರು ವರ್ಷ ಇತಿಹಾಸವಿರುವ ಸನಾತನ ಧರ್ಮದ ಕುರಿತು ಮಾತನಾಡಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಒಬ್ಬ ಅಯೋಗ್ಯ, ಹುಚ್ಚ ಇದರ ಬಗ್ಗೆ ಮಾತನಾಡಲು ಅವನ್ಯಾರು ಎಂದು ಕಿಡಿಕಾರಿದ್ದಾರೆ.
ಇಂಡಿಯಾ ಹೆಸರನ್ನು ಭಾರತ ಎಂದು ಬದಲಾವಣೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ ಮತ್ತು ಇಂಡಿಯಾ ಎಂದು ಕರೆಯಲು ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ. ಭಾರತ್ ಮಾತಾ ಕಿ ಜೈ ಎಂದು ಕೂಗಿದಾಗ ರೋಮಾಂಚನವಾಗುತ್ತದೆ. ಇಂಡಿಯಾ ಮಾತಾ ಕಿ ಜೈ ಎನ್ನಲಾಗದು. ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಭಾರತ ಪದ ಪ್ರಯೋಗಕ್ಕೆ ದೇಶದ ಜನಸಾಮಾನ್ಯರ ಕಿಂಚಿತ್ತೂ ಆಕ್ಷೇಪವಿಲ್ಲ.
ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿ ಅವರ ಅಣ್ಣ ಮುಖ್ಯಮಂತ್ರಿಯಾದಾಗ, ಇವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದಾಗ ಈ ಪ್ರಶ್ನೆ ಏಕೆ ಉದ್ಭವಿಸಲಿಲ್ಲ. ಅವರ ಅಣ್ಣನ ರೀತಿಯಲ್ಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟು, ಪ್ರದೀಪ್ ಶೆಟ್ಟರ್ ಬಿಜೆಪಿ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.