More

    ಸನಾತನ ಹೇಳಿಕೆ ವಿವಾದ; ವಾಸ್ತವ ಅರಿಯದೇ ಪ್ರಧಾನಿ ಮಾತನಾಡಿರುವುದು ಆಶ್ಚರ್ಯ ಮೂಡಿಸಿದೆ: ಎಂ.ಕೆ. ಸ್ಟಾಲಿನ್

    ಚೆನ್ನೈ: ಸನಾತನ ಧರ್ಮದಲ್ಲಿ ಅನುಸರಿಸಲಾಗುತ್ತಿದ್ದ ಕೆಲವು ಅಮಾನವೀಯ ಆಚರಣೆಗಳ ಬಗ್ಗೆ ಪುತ್ರ ಉದಯನಿಧಿ ತಮ್ಮ ನಿಲುವನ್ನು ತಿಳಿಸಿದ್ದಾರೆ. ಇದರಿಂದ ಹತಾಶೆಗೊಂಡಿರುವ ಬಿಜೆಪಿ ನಾಯಕರು ವಿಪಕ್ಷಗಳ ಮೈತ್ರಿಕೂಟ I.N.D.I.Aದಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ತಮ್ಮ ಮಗ ಉದಯನಿಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಸುದೀರ್ಘ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಪುತ್ರ ಉದಯನಿಧಿ ಸನಾತನ ಧರ್ಮದಲ್ಲಿ ಅನುಸರಿಸಲಾಗುತ್ತಿದ್ದ ದಮನಕಾರಿ ಸಿದ್ದಾಂತಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಸಹಿಸದ ಬಿಜೆಪಿ ನಾಯಕರು ಹಾಗೂ ಬಲಪಂಥೀಯ ಸಂಘಟನೆಗಳು ಉದಯನಿಧಿ ನರಮೇಧಕ್ಕೆ ಕರೆ ಕೊಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

    ಕೆಲವರು ಜಾತಿ ಆಧಾರಿತ ತಾರತಮ್ಯ ವ್ಯವಸ್ಥೆಯ ಬಗ್ಗೆ ಪ್ರಚಾರ ಮಾಡುತ್ತಾರೆ. ವೇದಿಕೆಗಳಲ್ಲಿ ಮಹಿಳೆಯರ ಬಗ್ಗೆ ಅವಹೇಳನ ಮಾಡುತ್ತಾ ಮಾತನಾಡುತ್ತಾರೆ. ನನ್ನ ಮಗ ಈ ರೀತಿಯ ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ನಿವಾರಿಸಬೇಕು ಎಂದು ಹೇಳಿದ್ದಾನೆ. ಆದರೆ, ಇದನ್ನು ಸಹಿಸದ ಬಿಜೆಪಿ ನಾಯಕರು ಅದಕ್ಕೆ ಬೇರೆ ಬಣ್ಣ ಬಳಿದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಸನಾತನ ಹೇಳಿಕೆ ವಿವಾದ; ಸಂವಿಧಾನವೇ ನನ್ನ ಧರ್ಮ ಎಂದ ಸಚಿವ ಪ್ರಿಯಾಂಕ್​ ಖರ್ಗೆ

    ಆಶ್ಚರ್ಯ ಮೂಡಿಸಿದೆ

    ಇದಲ್ಲದೆ ಇದೀಗ ಅಪಪ್ರಚಾರ ಮಾಡುವವರ ಜೊತೆ ಪ್ರಧಾನಿ ಮೋದಿ ಅವರು ಸೇರಿಕೊಂಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಹೇಳಿರುವುದಾಗಿ ತಿಳಿದು ಬಂದಿದೆ. ಈ ಬಗ್ಗ ವರದಿ ಪಡೆಯಲು ಪ್ರಧಾನಿ ಮೋದಿ ಅವರಿಗೆ ಅವಕಾಶ ಇದೆ. ಹಾಗಿದ್ದರು ಸಹ ವಾಸ್ತವ ಅರಿಯದೆ ಅವರು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆ ಈ ರೀತಿ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

    ಇದೆಲ್ಲವನ್ನೂ ಗಮನಿಸಿದರೆ ಭರವಸೆಗಳನ್ನು ಈಡೇರಿಸಲಾಗದೆ ಪ್ರಧಾನಿ ಮೋದಿ ಅವರು ವಿಫಲರಾಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಇಂತಹ ನಾಯಕರು ನಿಜವಾಗಿಯೂ ಹಿಂದುಳಿದವರು, ಪರಿಶಿಷ್ಟರು ಹಾಗೂ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಿಸುತ್ತಾರಾ. ನಮ್ಮ ಚಿಂತನೆ ಸ್ಪಷ್ಟ ಮತ್ತು ಪಾರದರ್ಶಕವಾಗಿದ್ದು, ಬಡವರ ಹಾಗೂ ಹಿಂದುಳಿದವರ ಸಂತೋಷವೇ ನಮ್ಮ ಗುರಿ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ತಮ್ಮ ಪ್ರಕಟಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts