ಗುರುಭವನ ನಿರ್ಮಾಣಕ್ಕೆ ಅನುದಾನ

5KDR1 teachers
ಕಡೂರು ತಾಲೂಕಿನ ಮಚ್ಚೇರಿ ಸಮೀಪದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ಸಿ.ಆರ್.ಪ್ರವೀಣ್, ಆರ್.ಸಿದ್ದರಾಜುನಾಯ್ಕ, ಮಂಜುಳಾ, ಶರತ್ ಕೃಷ್ಣಮೂರ್ತಿ, ಕೆ.ಎಂ.ಹರೀಶ್, ಎಂ.ಬಿ.ಮಂಜುನಾಥ್ ಇತರರಿದ್ದರು.
Published on

ಕಡೂರು:: ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಮಚ್ಚೇರಿ ಸಮೀಪದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಕಡೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಶೋಷಿತ ವರ್ಗಗಳಿಗೂ ಶಿಕ್ಷಣ ಸಿಗಬೇಕೆಂಬ ಮಹಾದಾಸೆಯಿಂದ ಶಿಕ್ಷಕರ ನೇಮಕ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದರು.
ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದುವರಿದ ಕಟ್ಟಡದ ನಿರ್ಮಾಣದ ಆರಂಭಿಕ ಕಾಮಗಾರಿಗೆ 50 ಲಕ್ಷ ರೂ. ನನ್ನ ವಿಶೇಷ ಅನುದಾನವನ್ನು ಶೀಘ್ರ ಒದಗಿಸಲಾಗುವುದು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಮಕ್ಕಳ ಸಮಾನತೆಯನ್ನು ಸೃಷ್ಟಿಸಲು ಶಿಕ್ಷಕರು ಶ್ರಮ ವಹಿಸುತ್ತಾರೆ. ತಾಲೂಕಿನಲ್ಲಿಯೂ ಮಕ್ಕಳ ಮೇಲಿನ ಕಾಳಜಿ ಹೆಚ್ಚಿನದಾಗಿದೆ. ಮತ್ತಷ್ಟು ಜವಾಬ್ದಾರಿಯುತ ಕಾರ್ಯಗಳೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವುದರ ಮೂಲಕ ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರು ಹೆಚ್ಚಿನ ಪರಿಶ್ರಮ ಹಾಕಬೇಕಿದೆ ಎಂದರು.
43 ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ವಪಲ್ಲಿ ರಾಧಕೃಷ್ಣನ್ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಿದರು. ತಾಪಂ ಇಒ ಸಿ.ಆರ್.ಪ್ರವೀಣ್, ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಬಿಇಒ ಆರ್.ಸಿದ್ದರಾಜುನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್. ಬಿಇಒ ರುದ್ರಪ್ಪ, ಕೆ.ನಾಗರಾಜಪ್ಪ, ಬಿ.ಟಿ.ಪ್ರೇಮ್‌ಕುಮಾರ್, ಎನ್.ಎಸ್.ದೇವರಾಜ್, ಮುರಳೀಧರ್, ಧನಪಾಲನಾಯ್ಕ, ಎಂ.ಬಿ.ಮಂಜುನಾಥ್, ಎಂ.ಲಿಂಗರಾಜು, ಬಿ.ಪ್ರಕಾಶ್, ಸೈಯದ್ ಸುಹೇಲ್, ಬಿ.ಆನಂದಪ್ಪ, ಆಂಜನೇಯ, ಲತಾಮಣಿ, ನಾಗರತ್ನಾ. ಕಂಸಾಗರ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net