ಕೃತಿ ಶೆಟ್ಟಿ ಭರ್ಜರಿ ಕಮ್​ಬ್ಯಾಕ್​! ಅಭಿನಯದ 3 ಬಹುನಿರೀಕ್ಷಿತ ಸಿನಿಮಾ ಒಂದೇ ತಿಂಗಳಲ್ಲಿ ರಿಲೀಸ್? | Krithi Shetty

ವಿಜಯವಾಣಿ (6)
Published on

Krithi Shetty: 2021ರಲ್ಲಿ ತೆರೆಕಂಡ ತೆಲುಗು ಬ್ಲಾಕ್​ಬಸ್ಟರ್​ 'ಉಪ್ಪೇನಾ' ಸಿನಿಮಾ ಮೂಲಕ ಸಿನಿಪ್ರಿಯರ ಮನಗೆದ್ದ ಕರಾವಳಿ ಬೆಡಗಿ ಕೃತಿ ಶೆಟ್ಟಿ, ಒಂದು ಲ್ಯಾಂಗ್​ ಗ್ಯಾಪ್​ ಬಳಿಕ ಇದೀಗ ಮತ್ತೆ ಅಭಿಮಾನಿಗಳನ್ನು ಮನರಂಜಿಸಲು ಬರುತ್ತಿದ್ದಾರೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಚಿತ್ರಗಳ ಮೂಲಕ.

2019ರಲ್ಲಿ ಸೂಪರ್​ 30 ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಕೃತಿ, ಇದೀಗ ಮೂರು ಬಹುನಿರೀಕ್ಷಿತ ತಮಿಳು ಚಿತ್ರಗಳ ಮೂಲಕ ಭರ್ಜರಿ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ. 'LIK' (ಲವ್ ಇನ್ಶೂರೆನ್ಸ್ ಕಂಪನಿ), 'ವಾ ವಾಥಿಯಾರ್' ಮತ್ತು 'ಜಿನೀ' ಎಂಬ ಮೂರು ಸಿನಿಮಾಗಳು ಈ ವರ್ಷದ ಕೊನೆಯಲ್ಲಿ ರಿಲೀಸ್​ ಆಗಲು ಎದುರುನೋಡುತ್ತಿವೆ. ಅದರಲ್ಲಿ ಎರಡು ಚಿತ್ರಗಳು ರೆಡಿಯಾಗಿದ್ದು, ಒಂದು ಸಿನಿಮಾದ ರಿಲೀಸ್ ಮಾತ್ರ ಅಧಿಕೃತವಾಗಬೇಕಿದೆ.

ಇತ್ತೀಚೆಗಷ್ಟೇ, 'ಡ್ಯ್ರಾಗನ್' ಖ್ಯಾತಿಯ ಪ್ರದೀಪ್ ರಂಗನಾಥನ್ ಅಭಿನಯದ LIK ಇದೇ ಡಿಸೆಂಬರ್ 18ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತು. ಇದರ ಬೆನ್ನಲ್ಲೇ ಕಾರ್ತಿ ಅವರ 'ವಾ ವಾಥಿಯಾರ್' ಡಿಸೆಂಬರ್ 5ರಂದು ತೆರೆಕಾಣಲಿದೆ ಎಂದು ತಿಳಿಸಲಾಯಿತು. ಇನ್ನು ರವಿ ಮೋಹನ್ ನಟನೆಯ 'ಜಿನೀ' ಚಿತ್ರದ ಮೊದಲ ಸಿಂಗಲ್ 'ಅಬ್ದಿ ಅಬ್ದಿ' ಇತ್ತೀಚಿಗೆ ಬಿಡುಗಡೆಯಾಗಿದೆ.

ಅಂತೆಯೇ, ಡಿಸೆಂಬರ್‌ನಲ್ಲಿ ಈ ಚಿತ್ರವು ರಿಲೀಸ್ ಆಗಲಿದೆ ಎಂಬ ಸುದ್ದಿಗಳಿವೆ. ಆದರೆ, ಅಧಿಕೃತ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಇದೇನಾದರೂ ನಿಜವಾದರೆ, ಕೇವಲ ಡಿಸೆಂಬರ್ ತಿಂಗಳಲ್ಲೇ ಕೃತಿ ಅಭಿನಯದ ಈ ಮೂರು ಚಿತ್ರಗಳು ಪ್ರೇಕ್ಷಕರ ಎದುರು ಹಾಜರಾಗಲಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net