

ಮುಂಬೈ: ಶ್ರದ್ಧಾ ದಾಸ್ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿ ಹೀರೋಯಿನ್ ಆಗಿ 15 ವರ್ಷಗಳಾಗಿವೆ. ನಟ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ದಾಸ್ ಸ್ಯಾಂಡಲ್ವುಡ್ನಲ್ಲಿ ಹವಾ ಕ್ರೀಯೆಟ್ ಮಾಡಿದ್ದರು. ಕನ್ನಡ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಶ್ರದ್ಧಾ ದಾಸ್ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಡನ್ನುವ ಸುದ್ದಿ ಸೋಶಿಯಲ್ ಮೀಡಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶ್ರದ್ಧಾ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಡಸ್ಟ್ರಿಗಳ ಅನೇಕ ಸೆಲೆಬ್ರಿಟಿಗಳು ಮದುವೆಯಾಗಿದ್ದಾರೆ. ಆ ಹಾದಿಯಲ್ಲಿ ಶ್ರದ್ಧಾ ದಾಸ್ ಕೂಡ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಶ್ರದ್ಧಾ ದಾಸ್ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದು, ಅವರನ್ನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು.ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ನನ್ನ ಬಗ್ಗೆ ಹಬ್ಬಿದ ಎಲ್ಲಾ ವದಂತಿ ಸುಳ್ಳು ಎಂದು ಶ್ರದ್ಧಾ ಹೇಳಿದ್ದಾರೆ.
ಡಾರ್ಲಿಂಗ್ ಮತ್ತು ಆರ್ಯ 2 ಚಿತ್ರಗಳಲ್ಲಿ ಶ್ರದ್ಧಾ ಸಿಂಗರ್ ಕ್ಯಾರೆಕ್ಟರ್ ಆರ್ಟಿಸ್ಟ್ ಕೂಡ ಆಗಿದ್ದಾರೆ. ಶ್ರದ್ಧಾ ದಾಸ್ ಅವರು ಚಲನಚಿತ್ರಗಳು ಮತ್ತು ರಿಯಾಲಿಟಿ ಶೋಗಳು ಮತ್ತು ಈವೆಂಟ್‌ಗಳಲ್ಲಿ ಭಾಗವಹಿಸುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಶ್ರದ್ಧಾ ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು. ಶ್ರದ್ಧಾ ದಾಸ್ ಕೂಡ ಟಿವಿ ಶೋಗಳಲ್ಲಿ ತೀರ್ಪುಗಾರರಾಗಿ ಬ್ಯುಸಿಯಾಗಿದ್ದಾರೆ.