ಖ್ಯಾತ ನಟನ ಪುತ್ರಿಗೆ ಮದ್ವೆಗೂ ಮುನ್ನವೇ ತಾಯಿಯಾಗುವ ಬಯಕೆ; ಮಗು ಹೆಸರನ್ನೂ ನಿರ್ಧರಿಸಿದ್ದಾಳೆ ಈಕೆ

bollywood actor sanjay dutt daughter trishala (1)
Published on

ಮುಂಬೈ: ಸ್ಟಾರ್​ ನಟರೊಬ್ಬರ ಮಗಳು ಸೋಶಿಯಲ್​​ ಮೀಡಿಯಾದಲ್ಲಿ ಆಸ್ಕ್ ಮಿ ಸೆಷನ್‌ನಲ್ಲಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮದುವೆ ಆಗದೆ ಇರುವ ಈಕೆ ತಾಯಿಯಾಗುವ ಆಸೆ ವ್ಯಕ್ತಪಡಿಸಿದ ಉತ್ತರ ನೆಟ್ಟಿಗರ ಗಮನ ಸೆಳೆದಿದೆ.

ಬಾಲಿವುಡ್ ನಟ ಸಂಜಯ್ ದತ್ ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಸಂಜಯ್ ದತ್ ಮೂರು ಬಾರಿ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಸಂಜಯ್ ದತ್ ಅವರ ಹಿರಿಯ ಮಗಳು ತ್ರಿಶಾಲಾ ದತ್ ಬಾಲಿವುಡ್‌ನ ಪ್ರಸಿದ್ಧ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ತ್ರಿಶಾಲಾ ದತ್ ಬಾಲಿವುಡ್ ಚಿತ್ರಗಳಿಂದ ದೂರವಿರಬಹುದು, ಆದರೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೀಗ ಮದುವೆ ಹಾಗೂ ಮಕ್ಕಳ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಇನ್​ಸ್ಟಾಗ್ರಾಮ್​​ನಲ್ಲಿ ಆಸ್ಕ್ ಮಿ ಸೆಷನ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡುತ್ತಾರೆ. ಈ ಬಾರಿಯೂ ತ್ರಿಶಾಲಾ ಅದೇ ರೀತಿ ಮಾಡಿದ್ದಾರೆ. ತ್ರಿಶಾಲಾ ತನ್ನ ಅಭಿಮಾನಿಗಳಿಗೆ ತಾಯಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆಸ್ಕ್ ಮಿ ಸೆಷನ್‌ನಲ್ಲಿ, ಅಭಿಮಾನಿಯೊಬ್ಬರು ಸಂಜಯ್ ದತ್ ಅವರ ಪುತ್ರಿ ತ್ರಿಶಾಲಾ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದರು, 'ನೀವು ಯಾವಾಗಲಾದರೂ ಮಕ್ಕಳನ್ನು ಹೊಂದಲು ಬಯಸುತ್ತೀರಾ, ಈ ಬಗ್ಗೆ ನಿಮ್ಮ ಯೋಜನೆ ಏನು, ನಿಮ್ಮ ಮನಸ್ಸಿನಲ್ಲಿ ಮುಂದೆ ಹುಟ್ಟುವ ಮಗುವಿಗೆ ಯಾವುದಾದರೂ ಹೆಸರನ್ನು ಯೋಚಿಸಿದ್ದೀರಾ?' ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ತ್ರಿಶಾಲಾ, 'ನನಗೆ ಮಗು ಬೇಕು ಅದಕ್ಕೂ ಪ್ಲಾನ್ ಇದೆ. ನಾನು ಮಕ್ಕಳಿಗೆ ಹೆಸರುಗಳನ್ನು ಸಹ ಯೋಚಿಸಿದ್ದೇನೆ. ದೇವರು ನನಗಾಗಿ ಇದನ್ನೆಲ್ಲಾ ಪ್ಲಾನ್ ಮಾಡಿದ್ರೆ ಮುಂದೊಂದು ದಿನ ನಾನು ತಾಯಿಯಾಗುವುದು ಖಂಡಿತ' ಎಂದು ಉತ್ತರಿಸಿದ್ದಾರೆ.

ಸಂಜಯ್​​ ದತ್​ ಅವರ ಪುತ್ರಿ, ತ್ರಿಶಾಲಾಗೆ ಈಗ 35 ವರ್ಷ. ಇನ್ನೂ ಕನ್ಯೆ. ಸದ್ಯ ಆಕೆಗೆ ಮದುವೆ ಆಗುವ ಯೋಚನೆ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಖಂಡಿತಾ ತಾಯಿಯಾಗುವ ಪ್ಲಾನ್ ಮಾಡುತ್ತಿದ್ದಾಳೆ ಎಂದು ನೆಟ್ಟಿಗರು ಗುಸುಗುಸು ಮಾತನಾಡುತ್ತಿದ್ದಾರೆ.

ತ್ರಿಶಾಲಾ ಸಂಜಯ್ ದತ್ ಅವರ ಮೊದಲ ಪತ್ನಿ ರಿಚಾ ಶರ್ಮಾ ಅವರ ಮಗಳು ತ್ರಿಶಾಲಾ. ಸಂಜಯ್ ದತ್ ಮತ್ತು ರಿಚಾ ಶರ್ಮಾ 1987 ರಲ್ಲಿ ವಿವಾಹವಾದರು. ಆದರೆ 1996 ರಲ್ಲಿ, ರಿಚಾ ಶರ್ಮಾ ಬ್ರೈನ್ ಟ್ಯೂಮರ್‌ನಿಂದ ನಿಧನರಾದರು. ಅಂದಿನಿಂದ ತ್ರಿಶಾಲಾ ಯುಎಸ್‌ನಲ್ಲಿ ತನ್ನ ತಾಯಿಯ ಅಜ್ಜಿಯರೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ಅಲ್ಲಿಯೇ ಬೆಳೆಸಲಾಯಿತು. ತ್ರಿಶಾಲಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿದ್ದರೂ. ಆಕೆ ತನ್ನ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ್ಗೆ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net