

ಕೊಪ್ಪ: ತಾಲೂಕಿನ ಲೋಕನಾಥಪುರ ಗ್ರಾಪಂ ವ್ಯಾಪ್ತಿಯ ಕೋಣಂಬಿ ಗ್ರಾಮದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಕೃಷಿಕ ಶ್ರೀಕರ ಅವರ ಅಡಕೆ, ಕಾಫಿ, ಬಾಳೆ ತೋಟ ಹಾನಿ ಮಾಡಿವೆ. ಈ ಗ್ರಾಮದಲ್ಲಿ ಪದೇ ಪದೆ ಕಾಡಾನೆಗಳಿಂದ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಒತ್ತುವರಿ ಜಮೀನುಗಳಿಗೆ ಪರಿಹಾರ ನೀಡಲ್ಲ ಎಂದು ಉಡಾೆಯ ಉತ್ತರ ನೀಡುತ್ತಾರೆ. ಅರಣ್ಯ ಇಲಾಖೆಯಿಂದ ಬೆಳೆ ನಾಶಕ್ಕೆ ಪರಿಹಾರ ನೀಡದಿದ್ದರೂ ತೊಂದರೇ ಇಲ್ಲ. ಕಾಡಾನೆಗಳನ್ನು ತಕ್ಷಣ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.