ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಕ್ಕೆಸೆದ ಮಹಿಳೆ!

Crime
Published on

ಕೋಲ್ಕತ: ಕೋಲ್ಕತದ ಕಸ್ಬಾ ಪ್ರದೇಶದಲ್ಲಿ ಈ ಮಹಿಳೆ ತನ್ನ ಮನೆಯ ಶೌಚಾಲಯದಲ್ಲಿ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 22ರಂದು ಮಹಿಳೆ ಶೌಚಾಲಯಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಈ ಮಹಿಳೆ ಜನ್ಮ ನೀಡಿದ ನಂತರ, ಮಗುವಿನ ಅಳು ಕೇಳಿ ಗೊಂದಲಕ್ಕೊಳಗಾಗಿದ್ದು ನಂತರ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಿದ್ದೇನು?

ಆಕೆ "ಕಳೆದ ಕೆಲವು ತಿಂಗಳುಗಳಿಂದ ಋತುಚಕ್ರವು ನಿಯಮಿತವಾಗಿರುವುದರಿಂದ, ತಾನು ಗರ್ಭಿಣಿಯಾಗಿದ್ದೇನೆ ಎಂಬುದು ತನಗೆ ತಿಳಿದಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಶನಿವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಜನ್ಮ ನೀಡಿದ ಸಂದರ್ಭ ಮಗು ಅಳುವುದನ್ನು ಕೇಳಿ ದಿಗ್ಭ್ರಮೆಗೊಂಡಿದ್ದು ನಂತರ ಗಾಜಿನ ಫಲಕವನ್ನು ಒಡೆದು ಮಗುವನ್ನು ಕಿಟಕಿಯಿಂದ ಹೊರಗೆ ಎಸೆದರು ಎಂದು ಮಹಿಳೆ ಹೇಳಿದ್ದಾಳೆ.

ಮಹಿಳೆಯೇ ಆರೋಪಿ ಎಂದು ಗೊತ್ತಾಗಿದ್ದು ಹೇಗೆ?

ಕಿಟಕಿಯ ಗಾಜು ಒಡೆದ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದಾಗ ಕೆಳಗೆ ನವಜಾತ ಶಿಶುವನ್ನು ಕಂಡಿದ್ದು ತಕ್ಷಣ ಕಸ್ಬಾ ಠಾಣೆಗೆ ಮಾಹಿತಿ ನೀಡಿದ್ದಾರೆ. “ಮಹಿಳೆಯ ದೇಹದ ಕೆಳಗಿನ ಭಾಗದಿಂದ ರಕ್ತಸ್ರಾವ ಕಂಡುಬಂದಿದ್ದು ಆಕೆ ಮತ್ತು ಆಕೆಯ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮರುದಿನ ಬೆಳಗ್ಗೆ ಮಗು ಸಾವನ್ನಪ್ಪಿದೆ.

ಕೆಲವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆ ಕಳೆದ ವರ್ಷ ನವೆಂಬರ್‌ನಲ್ಲಿ ವಿವಾಹವಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ಆಕೆಯ ಪತಿ ಮದ್ಯವ್ಯಸನಿಯಾಗಿದ್ದು ಅವರು ಮತ್ತು ಇತರ ಕುಟುಂಬದ ಸದಸ್ಯರೂ ಕೂಡ ಮಹಿಳೆ ಗರ್ಭಿಣಿಯಾಗಿರುವುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ನಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

ಮಗು ಜೀವಂತವಾಗಿ ಜನಿಸುವುದನ್ನು ತಡೆಯುವ ಅಥವಾ ಹುಟ್ಟಿದ ನಂತರ ಸಾಯುವಂತೆ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯಕ್ಕಾಗಿ ಮಹಿಳೆಯ ಮೇಲೆ ಐಪಿಸಿಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net