

ನವದೆಹಲಿ: ಇಂದಿನಿಂದ ಕೇದಾರನಾಥ ಯಾತ್ರೆ ಶುರುವಾಗಲಿದೆ ಎನ್ನಲಾಗಿದೆ. ಉತ್ತರಾಖಂಡದ ಈ ಭಾಗದಲ್ಲಿ ಹವಾಮಾನವು ತುಂಬಾ ಕೆಟ್ಟದಾಗಿದೆ. ಹಿಮಪಾತದಿಂದಾಗಿ ರಸ್ತೆಯ ಸ್ಥಿತಿ ಇನ್ನೂ ಕಳಪೆಯಾಗಿದೆ. ಆದರೆ ಪ್ರತಿಕೂಲ ಹವಾಮಾನದ ನಡುವೆಯೂ ಅಂತಿಮ ಸಿದ್ಧತೆಗಳು ನಡೆಯುತ್ತಿವೆ.
ಭಗವಾನ್ ಕೇದಾರನಾಥನು ಹಿಮದಲ್ಲಿ ಡೋಲಿಯಲ್ಲಿ ದೇವಾಲಯವನ್ನು ತಲುಪಿದ್ದು ಮಂಗಳವಾರ ಎಲ್ಲಾ ವಿಧಿವಿಧಾನಗಳೊಂದಿಗೆ ದೇವಾಲಯ ತೆರೆಯಲಾಗುತ್ತದೆ. ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದ್ದು 20 ಕ್ವಿಂಟಾಲ್ ಹೂವುಗಳನ್ನು ಬಳಸಲಾಗಿದೆ.