

ಕೋಲಾರ: ಇಷ್ಟು ದಿನ ಸೇಫ್ ಆಗಿದ್ದ ಕೋಲಾರದಲ್ಲಿ ಕರೊನಾ ಮಹಾಮಾರಿ ಆತಂಕ ಶುರುವಾಗಿದೆ. ಇಂದು ಒಂದೇ ಐದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ತೀವ್ರ ಭಯ ಹುಟ್ಟಿಸಿದೆ.
ಒಡಿಶಾಕ್ಕೆ ಹೋಗಿ ಬಂದಿದ್ದ ಇಬ್ಬರು ಲಾರಿ ಚಾಲಕ(40), ಕ್ಲಿನರ್ (38)ನಲ್ಲಿ ಕರೊನಾ ಕಾಣಿಸಿಕೊಂಡಿದೆ. ಇವರಿಬ್ಬರೂ ತಾಯಲೂರು ಹೋಬಳಿಯ ಬೆಳಗಾನಹಳ್ಳಿ ಗ್ರಾಮದವರು. ಹಾಗೇ ಚೆನ್ನೈನ ಟಿ.ನಗರದ ಮಾರುಕಟ್ಟೆಗೆ ಹೋಗಿ ಬಂದಿದ್ದ ಬೈರಸಂದ್ರ ಗ್ರಾಮದ ಓರ್ವ ವ್ಯಕ್ತಿ (40), ಬೆಂಗಳೂರಿನ ಜೆಪಿ ನಗರದಿಂದ ಹೋಗಿದ್ದ ಮಹಿಳೆ (70) ಹಾಗೂ ಬೀದರ್ನ ಹುಮ್ನಾಬಾದ್ದಿಂದ ತೆರಳಿದ್ದ ವಿ.ಹೊಸಹಳ್ಳಿ ಗ್ರಾಮದ ವಿದ್ಯಾರ್ಥಿನಿ (23)ಯರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಇಷ್ಟುದಿನ ಹಸಿರು ವಲಯದಲ್ಲಿದ್ದ ಕೋಲಾರದ ನಿಧಾನಕ್ಕೆ ರೆಡ್ ಝೋನ್ಗೆ ಬದಲಾಗುತ್ತಿದ್ದು, ಸ್ಥಳೀಯ ಜನತೆಯಲ್ಲಿ ಆತಂತ ತೀವ್ರವಾಗಿದೆ. (ದಿಗ್ವಿಜಯ ನ್ಯೂಸ್)