'ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣ, ಬಹಳಷ್ಟು ಬದಲಾವಣೆ ನಿರೀಕ್ಷಿಸಿ' : ಕೋಡಿ ಮಠ ಶ್ರೀ ಭವಿಷ್ಯ

kodimata vvani
Published on

ಹಾಸನ: ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದು. ಇದು ರಾಜ್ಯಕ್ಕಷ್ಟೇ ಸೀಮಿತವಲ್ಲ, ದೇಶ ಮತ್ತು ಜಾಗತಿಕ ಮಟ್ಟದಲ್ಲೂ ಇಂತಹ ಬದಲಾವಣೆಗಳಾಗಲಿವೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹಾಸನದಲ್ಲಿ ಭವಿಷ್ಯ ನುಡಿದಿದ್ದಾರೆ.

ಈಗ ಬಂದಿರುವ ಗ್ರಹಣಗಳೇ ಈ ಬದಲಾವಣೆಯ ಸಂಕೇತಗಳಾಗಿವೆ. ಸದ್ಯ ಗೋಚರಿಸುತ್ತಿರುವ ಭವಿಷ್ಯ ಪ್ರಕಾರ ನೀರು ಕಾಣಿಸುತ್ತಿದ್ದು, ಪುನಃ ಅಕಾಲಿಕ ಮಳೆ ಮತ್ತು ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳು ದಟ್ಟವಾಗಿದೆ. ಇನ್ನು ಕರೊನಾ ಸಂಕಷ್ಟ ಸದ್ಯಕ್ಕೆ ಮಾಸಿ ಹೋಗಲ್ಲ. ಇನ್ನೂ ಹತ್ತು ವರ್ಷ ಬೇಕು ಇದರಿಂದ ಮುಕ್ತಿ ಸಿಗುವುದಕ್ಕೆ. ಕರೊನಾ ವೈರಸ್ ರೂಪಾಂತರಗೊಳ್ಳುವ ಬಗ್ಗೆ ಎರಡು ತಿಂಗಳು ಹಿಂದೆಯೇ ಹೇಳಿದ್ದೆ. ಅದು ಈಗ ನಿಜವಾಗಿದೆ ನೋಡಿ ಎಂದು ಶ್ರೀಗಳು ಹೇಳಿದರು.

ಅರಸ ಪ್ರಜಾವಿರೋಏಧಿ ಕಾಯ್ದೆ ತರುತ್ತಾನೆ, ಪ್ರಜೆಗಳಿಂದ ವಿರೋಧ ಉಂಟಾಗಿ ಸಿಂಹಾಸನಕ್ಕೆ ತೊಂದರೆ ಆಗವುದೆಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದರೂ ಆಗುತ್ತಿಲ್ಲ ನೋಡಿ. ಭೂಮಿ ಸಾರ ಕಳೆದುಕೊಂಡಿದೆ. ಈಗಿನ ಔಷಧಗಳೇ ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿವೆ. ರಾಸಾಯನಿಕ ಮುಕ್ತ ಕೃಷಿ, ಗೋ ಕೇಂದ್ರಿತ ಬದುಕಿನಿಂದಷ್ಟೇ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ ಎಂದು ಶ್ರೀಗಳು ವಿವರಿಸಿದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net