ಪಶ್ಚಿಮ ಬಂಗಾಳ ಚುನಾವಣೆ: ತಳಮಟ್ಟದಲ್ಲಿ ಸಂಘಟನೆಯ ಕೆಲಸ ಚುರುಕುಗೊಳಿಸಿದ ಬಿಜೆಪಿ

bjp flags1
Published on

ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಗೆ ಪೂರಕವಾಗಿ ಬಿಜೆಪಿ ತನ್ನ ಸಂಘಟನಾ ಕೆಲಸವನ್ನು ತಳಮಟ್ಟದಲ್ಲಿ ಇನ್ನಷ್ಟು ಚುರುಕುಗೊಳಿಸಿದೆ. ರಾಜ್ಯದಲ್ಲಿ ಜಿಲ್ಲಾ ವೀಕ್ಷಕರು ಮತ್ತು ಸಹ ವೀಕ್ಷಕರನ್ನು ನೇಮಕ ಮಾಡಿದ್ದು, ಭಾನುವಾರದಿಂದ ಪಕ್ಷ ಕಾರ್ಯ ಇನ್ನಷ್ಟು ವೇಗ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್​ ಅವರು ವೀಕ್ಷಕ, ಸಹ ವೀಕ್ಷಕರ ನೇಮಕಾತಿ ವಿವರ ಪ್ರಕಟಿಸಿದ್ದು, ಕೋಲ್ಕತ ವಲಯದ ವೀಕ್ಷಕರಾಗಿ ಸೋವನ್​ ಚಟರ್ಜಿ ಅವರನ್ನು ನೇಮಿಸಲಾಗಿದೆ. ಇದೇ ರೀತಿ, ದೇವಜಿತ್ ಸರ್ಕಾರ್ ಅವರಿಗೆ ಕನ್ವೀನರ್ ಹೊಣೆಗಾರಿಕೆ ನೀಡಲಾಗಿದೆ. ಬೈಸಾಖಿ ಬ್ಯಾನರ್ಜಿ, ಸಂಕುದೇವ್ ಪಾಂಡಾ ಅವರಿಗೆ ಕೋಲ್ಕತ ವಲಯದ ಸಹ-ಸಂಚಾಲಕರ ಹೊಣೆಗಾರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ರೀತಿ ಜಿಲ್ಲಾವಾರು ವೀಕ್ಷಕರು, ಸಹ ವೀಕ್ಷಕರ ನೇಮಕ ಘೋಷಿಷುವ ಮೂಲಕ ಮುಂದಿನ ವರ್ಷ ಏಪ್ರಿಲ್​-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಂಘಟನಾತ್ಮಕವಾಗಿ ಸಿದ್ಧವಾಗತೊಡಗಿದೆ. ಇತ್ತೀಚೆಗಷ್ಟೇ 294 ವಿಧಾನಸಭಾ ಸ್ಥಾನಗಳ ಪೈಕಿ 200 ಸ್ಥಾನ ಗೆಲ್ಲಬೇಕೆಂಬ ಗುರಿಯನ್ನೂ ಬಿಜೆಪಿ ಘೋಷಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಟಿಎಂಸಿ ಗೆದ್ದುಕೊಂಡಿತ್ತು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net