Know NaMo Quizನಲ್ಲಿ ಭಾಗವಹಿಸಿ, ಪ್ರಧಾನಿ ಮೋದಿಯವರ ಹಸ್ತಾಕ್ಷರದ ಪುಸ್ತಕ ಗೆಲ್ಲಿ!

KNOW NAMO QUIZ
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 70ನೇ ಜನ್ಮದಿನದ ಸಂಭ್ರಮದ ನಿಮಿತ್ತ ಬಿಜೆಪಿ Know NaMo Quiz ಒಂದನ್ನು ಆಯೋಜಿಸಿದೆ. ನಮೋ ಆ್ಯಪ್ ನಲ್ಲಿ ಈ ಕ್ವಿಜ್ ಲಭ್ಯವಿದ್ದು, ವಿಜೇತರಿಗೆ ಬಹುಮಾನವಾಗಿ ಪ್ರಧಾನಿ ಮೋದಿಯವರ ಹಸ್ತಾಕ್ಷರ ಇರುವ ಪುಸ್ತಕ ಲಭ್ಯವಾಗಲಿದೆ.

ಕ್ವಿಜ್ ಸ್ಪರ್ಧೆಯ ವಿಚಾರವನ್ನು ಬಿಜೆಪಿ ಟ್ವೀಟ್ ಮಾಡಿದ್ದು ಅದರ ಒಕ್ಕಣೆ ಹೀಗಿದೆ-ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು?, Know NaMo Quiz ನಲ್ಲಿ ಭಾಗವಹಿಸಿ. ಇದು ನಮೋ ಆ್ಯಪ್​ ನಲ್ಲಿ ಲಭ್ಯವಿದೆ.ವಿಜೇತರಿಗೆ ಪ್ರಧಾನಿ ಮೋದಿಯವರೇ ಸಹಿ ಹಾಕಿದ ಪುಸ್ತಕ ಬಹುಮಾನವಾಗಿ ಸಿಗಲಿದೆ.

ಇದಲ್ಲದೇ, ಬೇರೆ ಬೇರೆ ರೀತಿಯಲ್ಲಿ ಪ್ರಧಾನಿ ಮೋದಿಯವರ ಜನ್ಮದಿನವನ್ನು ಬಿಜೆಪಿ ಆಚರಿಸುತ್ತಿದೆ.ಸೆಪ್ಟೆಂಬರ್ 14ರಿಂದ 20ರ ತನಕದ ಅವಧಿಯನ್ನು ಸೇವಾ ಚಟುವಟಿಕೆ ನಡೆಸುವುದಕ್ಕೂ ಕರೆ ಕೊಟ್ಟಿದ್ದು, ಸೇವಾ ಸಪ್ತಾಹ ಆಚರಣೆಯನ್ನೂ ಮಾಡುತ್ತಿದೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಮೋದಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net