

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು 70ನೇ ಜನ್ಮದಿನ ಆಚರಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರಪೂರ ಶುಭಾಶಯ ಸಂದೇಶಗಳು ತುಂಬಿ ಹರಿಯುತ್ತಿವೆ. ಚಿತ್ರವಿಚಿತ್ರ ಶುಭಾಶಯಗಳಿಗೂ ಕಡಿಮೆ ಏನಿಲ್ಲ. ಇವುಗಳ ಕಾಂಗ್ರೆಸ್ ನಾಯಕಿ ರಮ್ಯಾ (ದಿವ್ಯಸ್ಪಂದನ) ಕೂಡ ಪ್ರಧಾನಿ ಮೋದಿಯವರ ಜನ್ಮದಿನ ನಿಮಿತ್ತ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಒಂದು ಸಾಲಿನ ಟ್ವೀಟ್ನಲ್ಲಿರುವುದು ಇಷ್ಟೆ- ಮೋದಿ ಜೀ,ಸೆಂಡಿಂಗ್ ವಾರ್ಮ್ ಗ್ರೀಟಿಂಗ್ಸ್ ಆನ್ ಯುವರ್ ಬರ್ತಡ್ ಡೇ. ಈ ಒಂದು ಸಾಲಿನ ಟ್ವೀಟ್ ಗೂಢಾರ್ಥ ಹೊಂದಿದ್ದು, ಈ ಟ್ವೀಟ್ಗೆ ವಿಚಿತ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ..