ಹಾಡಹಗಲಲ್ಲೇ ಸರ್ಕಾರಿ ಸಾರಿಗೆ ಬಸ್​ ಚಾಲಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ ಜನತೆ

Bus Driver
Published on

ಕಲಬುರಗಿ: ಹಾಡಹಗಲಲ್ಲೇ ಸರ್ಕಾರಿ ಸಾರಿಗೆ ಬಸ್​ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಕಲಬುರಗಿ ನಗರದ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾಗಯ್ಯಸ್ವಾಮಿ (45) ಕೊಲೆಯಾದ ಕೆಕೆಆರ್​ಟಿಸಿ ಬಸ್ ಚಾಲಕ. ಈತ ಅಫಜಲಪುರ ತಾಲ್ಲೂಕಿನ ಮದರಿ ಗ್ರಾಮದ ನಿವಾಸಿ. ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. KA-32, F-1652 ನಂಬರ್​ನ ಸಾರಿಗೆ ಬಸ್ ಅನ್ನು ನಾಗಯ್ಯಸ್ವಾಮಿ ಚಲಾಯಿಸುತ್ತಿದ್ದರು.

ದಾಳಿ ಮಾಡಿದಾಗ ಮೊದಲು ನಾಗಯ್ಯ ಸ್ವಾಮಿ ಕೈ ಹೆಬ್ಬೆರಳು ತುಂಡಾಗಿದೆ. ತಕ್ಷಣ ನಾಗಯ್ಯ ಅಲ್ಲಿಂದ ಓಡಿ ಹೋಗುತ್ತಿದ್ದಂತೆ ಬೆನ್ನಟ್ಟಿ ಹೋಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಿಂದಾಗಿ ಸಿಟಿ ಬಸ್ ನಿಲ್ದಾಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net