

ಬೆಂಗಳೂರು: ಹಲವು ಕಾರಣದಿಂದ ಸುದ್ದಿಯಲ್ಲಿದ್ದ ನಟಿ ಪವಿತ್ರಾ ಲೊಕೇಶ್ ಮತ್ತು ನಟ ನರೇಶ್ ಅಭಿಯನದ 'ಮತ್ತೆ ಮದುವೆ' ಚಿತ್ರದ ಟ್ರೈಲರ್ ಬಿಡಗಡೆಯಾಗಿದೆ. ಈ ಹಿಂದೆ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ, ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿದೆ.
ಇವರಿಬ್ಬರ ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪವಿತ್ರಾ ಮತ್ತು ನರೇಶ್ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಇದಕ್ಕೆ ಅಡ್ಡಗಾಲಾಗಿದ್ದು ಯಾರು? ಇವರ ಜಗಳ ಬೀದಿಗೆ ಬಂದಿದ್ದು ಹೇಗೆ? ಇವರ ಪ್ರೀತಿ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಟ್ರೇಲರ್ನಲ್ಲಿ ಎತ್ತಿತೋರಿಸಲಾಗಿದೆ.