ಉತ್ತರ ಕನ್ನಡ ಲೋಕಸಭಾ ಚುನಾವಣೆ: ಬ್ಯಾಲೆಟ್‌ ಪೇಪರ್‌ನಲ್ಲಿ ಮಹತ್ವದ ಬದಲಾವಣೆ

DC-Gangubayi-
Published on

ಕಾರವಾರ:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬ್ಯಾಲೆಟ್‌ ಪೇಪರ್‌ ನಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ಬದಲಾವಣೆಯಾಗಲಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತಯಂತ್ರದಲ್ಲಿ ಅಭ್ಯಥಿಗಳ ಹೆಸರು ಕನ್ನಡ ಭಾಷೆಯ ಜೊತೆಗೆ ಮರಾಠಿ ಭಾಷೆಯಲ್ಲಿಯೂ ಮುದ್ರಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮತದಾರರು ಇದ್ದಾರೆ. ಕಾರಣ, ಮತದಾರರು ತಾವು ಮತ ಚಲಾಯಿಸಬೇಕಾದ ಅಭ್ಯರ್ಥಿಯ ಹೆಸರನ್ನು ಹುಡುಕುವಲ್ಲಿ ಗೊಂದಲಕ್ಕೆ ಒಳಗಾಗದೇ, ತಾವು ಬಳಸುವ ಭಾಷೆಯಲ್ಲಿಯೇ ಗುರುತಿಸಲು ಅನುಕೂಲವಾಗುವಂತೆ, ಚುನಾವಣೆಯ ಅಂತಿಮ ಕಣದಲ್ಲಿ ಉಳಿಯವ ಅಭ್ಯರ್ಥಿಗಳನ್ನು ಹೆಸರನ್ನು ಬ್ಯಾಲೆಟ್ ಯಂತ್ರದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮುದ್ರಿಸಲು ನಿರ್ದೇಶನ ನೀಡಿದೆ ಎಂದು ಜಿಲ್ಲಾ ಚುನಾವಣಾಽಕಾರಿಯೂ ಆಗಿರುವ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net