ಕಾರ್ಕಳದ ಮತಗಟ್ಟೆಯಲ್ಲಿ ನಕಲಿ ಮತದಾನ! ಬಾಲಕ ವಶಕ್ಕೆ…

fake voting
Published on

ಉಡುಪಿ: ಕಾರ್ಕಳದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನದ ಪ್ರಕರಣ ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸದ್ಯ ನಕಲಿ ಮತದಾನ ಮಾಡಿರುವ ಬಾಲಕನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ. ಕಳಿಸುವ ಮುನ್ನ ಬಾಲಕನ ಕೈಯಲ್ಲಿ ಬಾಂಡ್ ಬರೆಸಲಾಗಿದ್ದು ಅಪ್ರಾಪ್ತ ಬಾಲಕ‌ನ ಪೋಷಕರಿಗೂ ಪೊಲೀಸರಿಂದ ನೋಟೀಸ್ ಹೋಗಿದೆ.

ನಿನ್ನೆ ಸಂಜೆ ಸುಹಾಸ್ ಶೆಟ್ಟಿ ಹೆಸರಲ್ಲಿ ಅಪ್ರಾಪ್ತ ಬಾಲಕ ನಕಲಿ ಮತದಾನ ಮಾಡಿದ್ದ. ಇದನ್ನು ಕಂಡ ಕಾಂಗ್ರೆಸ್ ಕಾರ್ಯಕರ್ತರು ಬಾಲಕನನ್ನ ಹಿಡಿದು ಮತಗಟ್ಟೆ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಅದಲ್ಲದೇ ಚುನಾವಣಾಧಿಕಾರಿಗಳ ಮೌನಕ್ಕೆ ಕಾಂಗ್ರೆಸ್ ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು.

ಪ್ರಕರಣ ಮುಚ್ಚಿ ಹಾಕುವ ಅನುಮಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದರು. ಪೊಲೀಸರಿಗೆ ದೂರು ಕೊಟ್ಟು ತನಿಖೆಗೆ ಆಗ್ರಹಿಸಿದ ನಂತರ ಅವರು ಪ್ರತಿಭಟನೆಯನ್ನು ಹಿಂಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net