ಮಿಲನಕ್ಕೆ ಇಲ್ಲ ಅಡ್ಡಿ, ಚುಂಬನಕ್ಕೆ ಇದೆ ಕೆಂಪುದೀಪ!

sex workers
Published on

ಆಮೆಸ್ಟರ್​ಡ್ಯಾಂ: ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ಅನ್ನು ಹಾಲೆಂಡ್​ ಸರ್ಕಾರ ಬುಧವಾರದಿಂದ ಹಿಂಪಡೆದುಕೊಂಡಿದೆ. ಅಲ್ಲದೆ, ಸೆಪ್ಟೆಂಬರ್​ 1ರವರೆಗೆ ನಿಷೇಧಿಸಲ್ಪಟ್ಟಿದ್ದ ಕೆಂಪುದೀಪದ ಚಟುವಕಟಿಕೆಗಳ ಪುನರಾರಂಭಕ್ಕೂ ಜುಲೈ 1ರಿಂದಲೇ ಅನುಮತಿ ನೀಡಿದೆ. ಇದು ಲೈಂಗಿಕ ಕಾರ್ಯಕರ್ತೆಯರ ಸಂತಸಕ್ಕೆ ಕಾರಣವಾಗಿದೆ.

ಆದರೆ, ಈ ಅನುಮತಿ ಕೆಲವೊಂದು ನಿರ್ಬಂಧಗಳಿಗೆ ಒಳಪಟ್ಟಿದೆ ಎಂಬುದು ಗಮನಾರ್ಹ. ಮಿಲನದ ನಿರೀಕ್ಷೆಯಲ್ಲಿ ಬರುವ ಗ್ರಾಹಕರು ಮಿಲನಮಹೋತ್ಸವದಲ್ಲಿ ಪಾಲ್ಗೊಳ್ಳಲು ಯಾವುದೇ ಅಡ್ಡಿಯಿಲ್ಲ. ಆದರೆ, ಬೆಲೆವಣ್ಣುಗಳನ್ನು ಚುಂಬಿಸುವುದನ್ನು ನಿಷೇಧಿಸಲಾಗಿದೆ.

ಅಂತೆಯೇ ಮಿಲನದ ಸಂದರ್ಭದಲ್ಲಿ ಬೆಲೆವಣ್ಣುಗಳು ಜೋರಾಗಿ ಉಸಿರಾಡುವಂತಿಲ್ಲ. ನಿರ್ದಿಷ್ಟವಾದ ಭಂಗಿಗಳಲ್ಲಿ ಮಾತ್ರವೇ ಮಿಲನಕ್ಕೆ ಅವಕಾಶ ಮಾಡಿಕೊಡಬೇಕು. ಪರಸ್ಪರ ಅಪ್ಪುಗೆಯಲ್ಲಿ ಮೈಮರೆತು ಬಿಸಿಯುಸಿರು ಪರಸ್ಪರ ತಾಗದಂತೆ ಎಚ್ಚರವಹಿಸಬೇಕು ಸೇರಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಆಮೆಸ್ಟರ್​ಡ್ಯಾಂ ರೆಡ್​ಲೈಟ್​ ಪ್ರದೇಶಕ್ಕೆ ದೇಶವಿದೇಶದ ಸಹಸ್ರಾರು ಜನರು ಪ್ರತಿದಿನವೂ ಭೇಟಿ ನೀಡುತ್ತಾರೆ. ಇಲ್ಲಿ ಉದ್ರೇಕಕಾರಿ ನರ್ತನ ನೋಡಲು, ಲೈಂಗಿಕ ಬೊಂಬೆಗಳು, ಗಿಫ್ಟ್​ಶಾಪ್​ಗಳಲ್ಲಿ ಖರೀದಿ ಮಾಡಲು, ಬೆಲೆವಣ್ಣುಗಳೊಂದಿಗೆ ಕೂಡಲು ಇಲ್ಲಿಗೆ ಬರುತ್ತಾರೆ. ಕೋವಿಡ್​ ಲಾಕ್​ಡೌನ್​ನಿಂದಾಗಿ ಈ ಪ್ರದೇಶ ಕೂಡ ಸ್ತಬ್ಧವಾಗಿತ್ತು. ಇದರಿಂದಾಗಿ ಉದ್ರೇಕಕಾರಿ ನರ್ತನ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರಿಗೆ ಆದಾಯವೇ ಇಲ್ಲವಾಗಿತ್ತು.

ಕೆಂಪುದೀಪದ ಪ್ರದೇಶಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕೋವಿಡ್​ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವೇಶ್ಯಾ ವೃತ್ತಿಯಲ್ಲಿ ತೊಡಗಿರುವವರು ಸಾಕಷ್ಟು ಮುನ್ನಚ್ಚೆರಿಕೆ ತೆಗೆದುಕೊಂಡಿದ್ದಾರೆ. ತೆಳುವಾದ, ಪಾರದರ್ಶಕವಾದ ಮುಖಮುಚ್ಚುವ ಪ್ಲಾಸ್ಟಿಕ್​ ಹಾಳೆಗಳು, ಮಾಸ್ಕ್​ಗಳು ಮತ್ತಿತರ ಲೈಂಗಿಕ ವೃತ್ತಿಗೆ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆಮಸ್ಟೆರ್​ಡ್ಯಾಂನ ಕೆಂಪುದೀಪ ಪ್ರದೇಶದ ರೆಡ್​ಲೈಟ್​ ಯುನೈಟೆಡ್​ ಎಂಬ ಸಂಘಟನೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net