More

    ಡಿಕೆಶಿ ಪದಗ್ರಹಣಕ್ಕೆ ಕ್ಷಣಗಣನೆ, ಮಿಸ್ಡ್​ಕಾಲ್​ ಕೊಟ್ಟು ಕಾರ್ಯಕ್ರಮ ಕಣ್ತುಂಬಿಕೊಳ್ಳಿ

    ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್​ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್​, ಈಶ್ವರ ಖಂಡ್ರೆ, ಸತೀಶ್​ ಜಾರಕಿಹೊಳಿ ಗುರುವಾರ (ಜು.2) ಬೆಳಗ್ಗೆ 11ಕ್ಕೆ ಪದಗ್ರಹಣ ಮಾಡಲಿದ್ದಾರೆ.

    ಈ ಸಮಾರಂಭದ ನೇರ ಪ್ರಸಾರ 10 ಸಾವಿರ ಸ್ಥಳಗಳಲ್ಲಿ ಆಗಲಿದ್ದು, 1 ಕೋಟಿ ಜನರ ವೀಕ್ಷಣೆಗೆ ಲಿಂಕ್​ ವ್ಯವಸ್ಥೆ ಮಾಡಲಾಗಿದೆ. ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ& ಪರಿಕಲ್ಪನೆಯಲ್ಲಿ ಪದಗ್ರಹಣ ನಡೆಯಲಿದ್ದು, ಕಾರ್ಯಕರ್ತರೂ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಇದನ್ನೂ ಓದಿರಿ ಸಗಣಿ-ಗಂಜಲ ಬಳಸಿದ್ರೆ ಕೋವಿಡ್​ ಬರಲ್ಲ!

    ಕೆಪಿಸಿಸಿ ನೂತನ ಕಚೇರಿಯಲ್ಲಿ ಪ್ರಮುಖ ನಾಯಕರ ಸಮ್ಮುಖ ನಿಕಟಪೂರ್ವ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸುವರು. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ 150 ಪ್ರಮುಖರಿಗೆ ಮಾತ್ರ ಕಾರ್ಯಕ್ರಮಕ್ಕೆ ಪಾಸ್​ ನೀಡಲಾಗಿದೆ.

    ನಾನು ಆಮಂತ್ರಣ ನೀಡಿರುವವರನ್ನು ಹೊರತುಪಡಿಸಿ ಇನ್ಯಾರು ಇಲ್ಲಿಗೆ ಬರಬೇಡಿ. ಕಟ್ಟಡ ನಿರ್ವಹಣೆಯನ್ನು ಪೊಲೀಸರು ಹಾಗೂ ಸೇವಾದಳದವರಿಗೆ ವಹಿಸಿದ್ದು, ಅನಗತ್ಯವಾಗಿ ಬಂದು ತೊಂದರೆ ಅನುಭವಿಸುವುದು ಬೇಡ ಎಂದು ಡಿಕೆಶಿ ತಿಳಿಸಿದ್ದಾರೆ.

    ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, 7800 ಸ್ಥಳಗಳಿಂದ ಝೂಮ್​ ಕಾನ್ಫರೆನ್ಸ್​, 100ಕ್ಕೂ ಹೆಚ್ಚು ಫೇಸ್​ಬುಕ್​ ಖಾತೆಗಳಿಂದ ಲೈವ್​ ಇರಲಿದೆ. ಕಾರ್ಯಕ್ರಮ ವೀಸಲು 76763 66666ಕ್ಕೆ ಮಿಸ್ಡ್​ ಕಾಲ್​ ಕೊಟ್ಟು ಲೈವ್​ ನೋಡಬಹುದು.

    ಆಗರ್ಭ ಶ್ರೀಮಂತನ ಏಕೈಕ ಪುತ್ರನಿಂದ ಸನ್ಯಾಸ ದೀಕ್ಷೆ ಸ್ವೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts