More

  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸರ ವಶಕ್ಕೆ!

  ಚಿತ್ರದುರ್ಗ: ಪ್ರಜ್ವಲ್‌ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಇದೆ ಹೇಳಿದ್ದ ವಕೀಲ ದೇವೇರಾಜೇಗೌಡರನ್ನು ಹಿರಿಯೂರು ಬಳಿ ರಾತ್ರಿ ಎಂಟು ಗಂಟೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ, 12 ಮಾವೋವಾದಿಗಳ ಹತ್ಯೆ

  ಎಸ್ಐಟಿ ಅಧಿಕಾರಿಗಳ‌ ಮಾಹಿತಿ ಮೇರೆಗೆ ಚಿತ್ರದುರ್ಗ ಕಡೆಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೇವರಾಜೇಗೌಡ ಅವರನ್ನು ಹಿರಿಯೂರು ತಾಲ್ಲೂಕು ಐಮಂಗಲ ಠಾಣೆ ವ್ಯಾಪ್ರಿ ಗುಯಿಲಾಳು ಟೋಲ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಆರೋಪಿ ದೇವರಾಜೇಗೌಡ ಅವರನ್ನು ಎಸ್‌ಐಟಿಗೆ ಒಪ್ಪಿಸಲು ತಯಾರಿ ನಡೆಸಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಏ.1ರಂದು ಕೇಸ್‌ ದಾಖಲಾಗಿತ್ತು.

  ಹಿರಿಯೂರು ರೂರಲ್ ಸಿಪಿಐ ಕಾಳಿಕೃಷ್ಟ ಹಾಗೂ ಸಿಬ್ಬಂದಿ‌ ಕಾರ್ಯಚರಣೆಯಲ್ಲಿ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದಿರುವ ಹಿರಿಯೂರು ಪೊಲೀಸರು ಎಸ್​ಐಟಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲು ಬೆಂಗಳೂರಿಗೆ ಕರೆದೊಯ್ದಿರುವ ಸಾಧ್ಯತೆ ಇದೆ.

  SSLC ವಿದ್ಯಾರ್ಥಿನಿ ಮೀನಾ ರುಂಡ-ಮುಂಡ ಬೇರ್ಪಡಿಸಿದ ಆರೋಪಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts