Kiss Cam: ಕೋಲ್ಡ್‌ಪ್ಲೇ ಸಂಗೀತ ಕಚೇರಿ ಕ್ಲಿಪ್ ವೈರಲ್​ ಆದ ಬೆನ್ನಲ್ಲೇ CEO ಆಂಡಿ ಬೈರನ್​ಗೆ ಕೊಕ್​​!

Untitled design (32)
Published on

Kiss Cam: ಕೋಲ್ಡ್​ ಪ್ಲೇ ಸಂಗೀತ ಕಚೇರಿಯಲ್ಲಿ ಅಸ್ತ್ರೋನೋಮರ್​ ಕಂಪನಿ ಸಿಇಒ ಆಂಡಿ ಬೈರನ್ ಹಾಗು ಸಹೋದ್ಯೋಗಿ ಭಾಗಿಯಾಗಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಭಾರೀ ವಿವಾದ ಮತ್ತು ಟೀಕೆ ಗುರಿಯಾಗಿದೆ. ಈ ಹಿನ್ನೆಲೆ ಸದ್ಯಕ್ಕೆ ಆಂಡಿ ಬೈರನ್ ಅವರನ್ನು ರಜೆ ಮೇಲೆ ಕಳುಹಿಸಿಕೊಡಲಾಗಿದ್ದು, ಮಧ್ಯಂತರ ಸಿಇಒ ನೇಮಕ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಪನಿ,“ಆಂಡಿ ಬೈರನ್ ಅವರನ್ನು ರಜೆಯ ಮೇಲೆ ಇರಿಸಲಾಗಿರುವುದರಿಂದ ಸಹ-ಸಂಸ್ಥಾಪಕ ಮತ್ತು ಮುಖ್ಯ ಅಧಿಕಾರಿ ಪೀಟ್ ಡಿಜಾಯ್ ಪ್ರಸ್ತುತ ಮಧ್ಯಂತರ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತವಾಗಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಹೇಳಿದೆ.

ವೈರಲ್​​ ಆದ ವಿಡಿಯೋದಲ್ಲಿ ಏನಿದೆ? ಫಾಕ್ಸ್‌ ಬರೋದ ಜಿಲೆಟ್ ಕ್ರೀಡಾಂಗಣದಲ್ಲಿ ಕೋಲ್ಡ್‌ಪ್ಲೇ ಪ್ರದರ್ಶನದ ವೇಳೆ ಅಸ್ಟ್ರೋನೋಮರ್​ ಸಿಇಒ ಆಂಡಿ ಬೈರನ್ ಕ್ರಿಸ್ಟಿನ್ ಕ್ಯಾಬಟ್ ಜತೆಗೆ ಆತ್ಮೀಯ ಕ್ಷಣವನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್​ ಆಗಿದೆ. ಕಾರ್ಯಕ್ರಮದ ವೇಳೆ ವಿಡಿಯೋ ರೆಕಾರ್ಡ್​ ಮಾಡುತ್ತಿರುವುದ ಅವರಿಬ್ಬರ ಅರಿವಿಗೆ ಬರಲಿಲ್ಲ. ಆದರೆ, ರೆಕಾರ್ಡ್​ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಖ ಮರೆಮಾಚಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಅವರ ಆಪ್ತ ಕ್ಷಣಗಳು ರೆಕಾರ್ಡ್​ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net