

Andy Byron : ಕೋಲ್ಡ್ ಪ್ಲೇ ಸಂಗೀತ ಕಚೇರಿಯಲ್ಲಿ ಅಸ್ತ್ರೋನೋಮರ್ ಕಂಪನಿ ಸಿಇಒ ಆಂಡಿ ಬೈರನ್ ಹಾಗು ಸಹೋದ್ಯೋಗಿ ಭಾಗಿಯಾಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೇಗನ್ ಕರ್ರಿಗನ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬೈರನ್ ಉಪನಾಮವನ್ನು ತೆಗೆದು ಹಾಕಿದ್ದಾರೆ. ಈ ವಿವಾದದ ಬಗ್ಗೆ ದಂಪತಿ ನೇರವಾಗಿ ಮಾತನಾಡದಿದ್ದರೂ ಪರೋಕ್ಷವಾಗಿ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ ಎಂದು ಸುದ್ದಿಯಾಗುತ್ತಿದೆ.
ಮೇಗನ್ ಕರ್ರಿಗನ್ ಅವರು ತಮ್ಮ ಫೇಸ್ಬುಕ್ ಖಾತೆಯಿಂದ ತನ್ನ ಪತಿಯ (ಬೈರನ್) ಉಪನಾಮವನ್ನು ತೆಗೆದುಹಾಕಿರುವುದು ಅನೇಕ ಚರ್ಚೆಗಳಿಗೆ ಆಹ್ವಾನ ನೀಡಿದಂತಿದೆ. ಇವರ ಮೌನವೇ ಇವರ ದಾಂಪತ್ಯದ ಬಗ್ಗೆ ತಿಳಿಸುತ್ತದೆ ಎಂದು @anuibi ಹೆಸರಿನ ಎಕ್ಸ್ ಬಳಕೆದಾರ ಬರೆದುಕೊಂಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: ಒಳ್ಳೆ ಕೆಲಸಕ್ಕೆ ಸುರ್ಜೇವಾಲ ಸಲಹೆ, ಸೂಚನೆ
ಫಾಕ್ಸ್ ಬರೋದ ಜಿಲೆಟ್ ಕ್ರೀಡಾಂಗಣದಲ್ಲಿ ಕೋಲ್ಡ್ಪ್ಲೇ ಪ್ರದರ್ಶನದ ವೇಳೆ ಅಸ್ಟ್ರೋನೋಮರ್ ಸಿಇಒ ಆಂಡಿ ಬೈರನ್ ಕ್ರಿಸ್ಟಿನ್ ಕ್ಯಾಬಟ್ ಜೊತೆಗೆ ಆತ್ಮೀಯ ಕ್ಷಣವನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ. ಕಾರ್ಯಕ್ರಮದ ವೇಳೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದ ಅವರಿಬ್ಬರ ಅರಿವಿಗೆ ಬರಲಿಲ್ಲ. ಆದರೆ, ರೆಕಾರ್ಡ್ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಖ ಮರೆಮಾಚಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಅವರ ಆಪ್ತ ಕ್ಷಣಗಳು ರೆಕಾರ್ಡ್ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೇಗನ್ ಮ್ಯಾಸಚೂಸೆಟ್ಸ್ನ ಗೌರವಾನ್ವಿತ ಶಿಕ್ಷಕಿ. ಅವರು ಬ್ಯಾಂಕ್ರಾಫ್ಟ್ ಶಾಲೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಎರಡು ಮಕ್ಕಳನ್ನು ಹೊಂದಿದ್ದಾರೆ.