ಸೋಲೋ ಪ್ಯಾರಾಗ್ಲೈಡಿಂಗ್; ದಾಖಲೆ ಬರೆದ ನಟ ಕಿರಣ್ ರಾಜ್!

Untitled design - 2023-10-26T174122.051
Published on

ಬೆಂಗಳೂರು: ಕಿರುತೆರೆ ಹಾಗೂ ಬೆಳ್ಳಿತೆರೆ ನಟ ಕಿರಣ್​ ರಾಜ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಹಿಂದೆ ತಮ್ಮ ಹೊಸ​ ಸಿನಿಮಾ 'ರಾನಿ' ಮೂಲಕ ನಿರ್ಮಿಸಿದ ದಾಖಲೆಯನ್ನು ಮುರಿದು ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ರೆಕಾರ್ಡ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ” ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಕಿರಣ್ ರಾಜ್ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಇದೀಗ ಸುದ್ದಿಯಾಗಿದ್ದಾರೆ.

ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ ಚಿತ್ರದ ಟೈಟಲ್ ಬಿಡುಗಡೆ ಮಾಡಿ ದಾಖಲೆ ಮಾಡಿದ್ದರು. ಈಗ ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ತರಬೇತಿ ಪಡೆದು 8000 ಅಡಿ ಏತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎನ್ನುವ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾಡಿರುವ ಅಷ್ಟೂ ಸಾಹಸ ತರಬೇತಿಗಳು ನನ್ನ ಮುಂದಿನ ಚಿತ್ರದ ತಯಾರಿ ಎನ್ನುತಿರುವ ನಟ ಕಿರಣ್ ರಾಜ್, ತಮ್ಮ ಮುಂದಿನ ಚಿತ್ರ ಯಾವುದು? ಎನ್ನುವ ಸುಳಿವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net