

ಬೆಂಗಳೂರು: ಕನ್ನಡ ಚಿತ್ರರಂಗದ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇದೇ ವಾರ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಈ ಕುರಿತಂತೆ ಚಿತ್ರದ ನಿರ್ಮಾಪಕ ಧನಂಜಯ್, ಕೆಆರ್ಜಿ ಸಂಸ್ಥೆಯ ವಿತರಕ ಕಾರ್ತಿಕ್ ಗೌಡ ಹಾಗೂ ಇಡೀ ಚಿತ್ರತಂಡ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದೆ.
"45 ದಿನಗಳ ಮುನ್ನವೇ ನಮಗೆ ಸಿನಿಮಾ ತೋರಿಸಿದ್ದರು. 'ಬಡವ ರಾಸ್ಕಲ್' ಕೂಡ ರಿಲೀಸ್ಗೂ ಮುನ್ನ ಎರಡು ಮೂರು ತಿಂಗಳು ಮೊದಲೇ ತೋರಿಸಿದ್ದರು. ಇದು ಎಲ್ಲರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿ ಮೂಡಿಬಂದಿದೆ" ಎಂದು ಕಾರ್ತಿಕ್ ಹೇಳಿದರು.
"ಮನರಂಜನೆ ಜತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡ್ತಿರುವ ಬೆಸ್ಟ್ ಸಿನಿಮಾ ಇದು. 175 ಥಿಯೇಟರ್ಗಳಲ್ಲಿ ಫಿಲಂ ರಿಲೀಸ್ ಆಗ್ತಿದೆ. ಸಿಎಂ ಟಗರು ಪಲ್ಯ ನೋಡಲು ಆಗಮಿಸಲಿದ್ದಾರೆ" ಎಂದರು.
"ಕೆಲವೊಂದು ಯಾಕೆ ಘಟಿಸುತ್ತದೆ. ಹೇಗೆ ಘಟಿಸುತ್ತದೆ ಗೊತ್ತಿಲ್ಲ. ಬಡವ ರಾಸ್ಕಲ್ ಪ್ರೊಡಕ್ಷನ್ ಮಾಡಿದ್ವಿ. ಹೆಡ್ ಬುಷ್ ಪ್ರೊಡಕ್ಷನ್ ಮಾಡಿದ್ವಿ. ಕಳೆದ ವರ್ಷ ನನ್ನ ಜನ್ಮದಿನದಲ್ಲಿ ಕಾರ್ತಿಕ್ ಜತೆ ಚರ್ಚೆ ಮಾಡುವಾಗ ಪ್ರೊಡಕ್ಷನ್ ಕಂಟಿನ್ಯೂ ಮಾಡಬೇಕು. ಒಳ್ಳೆ ಕಥೆ ನಿರ್ಮಾಣ ಮಾಡಬೇಕು ಎಂದಾಗ. ಆಗ ಪ್ರೇಕ್ಷಕರಿಗೆ ಪ್ರಾಮಿಸ್ ಮಾಡಿ. ಹೊಸಬರಿಗೆ ವರ್ಷಕ್ಕೆ ಒಂದು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು. ಅವತ್ತು ಅವರು ಹೇಳಿದಾಗ ನಿಜ ಅನಿಸಿತು. ಅದನ್ನು ನನ್ನ ಹುಟ್ಟುಹಬ್ಬದಲ್ಲಿ ಅನೌನ್ಸ್ ಮಾಡಿದೆ" ಎಂದು ನಟ ಧನಂಜಯ್ ಹೇಳಿದರು.
"ಸಿನಿಮಾಗೆ ಒಂದೊಳ್ಳೆ ಕಥೆಗೆ ಏನ್ ಬೇಕು ಅದೆಲ್ಲವನ್ನೂ 'ಟಗರು ಪಲ್ಯ'ಗೆ ಒದಗಿಸಿದ್ದೇವೆ. ಈ ಚಿತ್ರವನ್ನು ಯಾಕೆ ನೋಡಿಕ್ಕೆ ಬನ್ನಿ ಎಂದು ರಿಕ್ವೆಸ್ಟ್ ಮಾಡಿಕೊಳ್ತೀವಿ ಎಂದರೆ, ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡೆಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ. ನಮಗೆ ತುಂಬಾ ಕನೆಕ್ಟ್ ಆಗುವ ಸಬ್ಜೆಕ್ಟ್. ಅನ್ಯ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ. ಆ ರೀತಿ ಕಥೆಯಿದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು. ಯಾವುದೇ ಹಿನ್ನಲೆ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಎಂಬುದೇ ನಮ್ಮ ಹೆಮ್ಮೆ" ಎಂದರು.