ದಕ್ಷಿಣ ಭಾರತದಲ್ಲಿ ಆ ರೀತಿಯ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ, ಇನ್ನೂ ಸಮಯ ಬೇಕಾಗುತ್ತದೆ: ನಟಿ ಖುಷ್ಬೂ ಸುಂದರ್

Khushbu Sundar
Published on

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಸುಂದರ್​ ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಕೊಂಚ ದೂರ ಉಳಿದಿದ್ದು, ಚಿತ್ರ ನಿರ್ಮಾಣ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಅವರ ನಿರ್ಮಾಣದ ಅರನ್​ಮನೈ-4 100 ಕೋಟಿ ಕ್ಲಬ್​ ಗಳಿಸಿದ್ದು, ಮೇಕಿಂಗ್​ ವಿಚಾರವಾಗಿ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಈ ವೇಳೆ ಮಾತನಾಡಿದ್ದ ಅವರು ಆ ರೀತಿಯ ಸಿನಿಮಾಗಳಿಗೆ ದಕ್ಷಿಣದಲ್ಲಿ ಬೇಡಿಕೆಯೇ ಇಲ್ಲ ಎಂದು ಹೇಳಿದ್ದಾರೆ.

ಅರನ್​ಮನೈ-4 ಚಿತ್ರ 100 ಕೋಟಿ ಕ್ಲಬ್​ ಸೇರಿದ ಬೆನ್ನಲ್ಲೇ ಚಿತ್ರತಂಡ ಸಕ್ಸಸ್​ ಪಾರ್ಟಿ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ನಟಿ ಖುಷ್ಬೂ ನನಗೂ ಡಾರ್ಲಿಂಗ್ಸ್​​, ಬದಾಯಿ ಹೋ, ಕ್ರ್ಯೂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಸೆ ಇದೆ. ಆದರೆ, ದಕ್ಷಿಣ ಭಾರತದಲ್ಲಿ ಆ ರೀತಿಯ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ದಕ್ಷಿಣದಲ್ಲಿ ಈ ರೀತಿಯ ಮಲ್ಟಿಪ್ಲೆಕ್ಸ್ ಆಡಿಯನ್ಸ್​ಗಳು ಹುಟ್ಟಿಕೊಂಡಿಲ್ಲ. ಬದಾಯಿ ಹೋ ಚಿತ್ರವನ್ನು ತಮಿಳಿಗೆ ರಿಮೇಕ್​ ಮಾಡಲಾಗಿತ್ತು. ಆದರೆ, ಚಿತ್ರ ಗೆದ್ದಿಲ್ಲ.

khushbu Sundar

ಇದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಸಿನಿಮಾಗಳನ್ನು ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೀರೋಗಳಿಂದ ಬಿಸ್ನೆಸ್ ಆಗುತ್ತದೆ ಎನ್ನುವ ಮನಸ್ಥಿತಿ ಇನ್ನೂ ಇದೆ. ಇದರ ಜೊತೆಗೆ ನಟಿಯರು ಕೂಡ ಪ್ರಮುಖ ಪಾತ್ರ ವಹಿಸಿ ಮಿರಾಕಲ್​​ಗಳನ್ನು ಮಾಡಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಮಹಿಳೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಬೇಕಾಗಿಲ್ಲ. ನನಗೂ ಕಮರ್ಷಿಯಲ್​ ಚಿತ್ರಗಳನ್ನು ನಿರ್ಮಿಸಬೇಕೆಂದ ಆಸೆ ಇದೆ. ಹಾಗೆಂದ ಮಾತ್ರಕ್ಕೆ ಸುಮ್ಮನೇ ಬಂಡವಾಳ ಹೂಡಲು ಸಾಧ್ಯವಿಲ್ಲ ಎಂದು ನಟಿ ಖುಷ್ಬೂ ಸುಂದರ್​ ಹೇಳಿದ್ದಾರೆ.

ದಿ ಬರ್ನಿಂಗ್​ ಟ್ರೇನ್​ ಚಿತ್ರದಲ್ಲಿ ನಟಿಸುವ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ಖುಷ್ಬೂ ಸುಂದರ್​  ಆ ಬಳಿಕ ಅವರು ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net