

ಕನಕಪುರ: ಅಕ್ರಮವಾಗಿ ಗ್ರಾಸ್ ತುಂಬಿಸುತ್ತಿದ್ದ ಅಡ್ಡಗಳ ಮೇಲೆ ನಗರ ಪೋಲಿಸರು ದಾಳಿ ಮಾಡಿದ್ದು, 9 ಗ್ಯಾಸ್ ಸಿಲೆಂಡರ್ಗಳನ್ನು ವಶಕ್ಕೆ ಪಡೆದು,ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶನಿವಾರ ಸಂಜೆ ನಗರದ ಪೈಪ್ಲೈನ್ ರಸ್ತೆ, ಸಾಮ್ರಾಟ್ ಅಶೋಕ್ ನಗರದ ಉಮೇಶ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ವಾಣಿಜ್ಯ ಬಳಕೆಯ ಸಿಲೆಂಡರ್, 2 ಮನೆಬಳಕೆ ಸಿಲೆಂಡರ್ ಹಾಗೂ ರೀಫಿಲ್ಲಿಂಗ್ ಮಾಡುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಖಾಲಕ್ ನಗರದ ಮೂರನೇ ಅಡ್ಡರಸ್ತೆಯಲ್ಲಿ ಅಯೂಬ್ ಖಾನ್ ಎನ್ನುವವರ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದು, ದಾಳಿ ನಡೆಸಿದ ಪೊಲೀಸರು ರೀಫಿಲ್ಲಿಂಗ್ ಸಾಮಗ್ರಿಗಳು ಹಾಗೂ ಎರಡು ಚಿಕ್ಕ ಮತ್ತು ಎರಡು ದೊಡ್ಡ ಗಾತ್ರದ ಸಿಲೆಂಡರ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ನಿರೀಕ್ಷಕ ಮನೋಹರ್ ಹಾಗೂ ನಗರಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಅನಂತ್ರಾಮ್ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿದ್ದರು.