

| ಕೀರ್ತಿನಾರಾಯಣ ಸಿ. ಬೆಂಗಳೂರು
ಬಂದೋಬಸ್ತ್ಗೆ ನಿಯೋಜನೆಗೊಂಡಿರುವ ಪೊಲೀಸರಿನ್ನು ಪ್ರತಿ 2 ಗಂಟೆಗೊಮ್ಮೆ ಬಿಡುವು ಮಾಡಿಕೊಂಡು ನಿಂತಲ್ಲೇ ಡ್ರಿಲ್ ಮಾಡಬೇಕು! ಪೊಲೀಸ್ ಇಲಾಖೆ ಹೊರಡಿಸಿರುವ ಇಂಥದ್ದೊಂದು ಕಡ್ಡಾಯ ಆದೇಶ ಸಂಚಲನ ಮೂಡಿಸಿದೆ. ಪೊಲೀಸರ ಮಾನಸಿಕ, ದೈಹಿಕ ಚಟುವಟಿಕೆ ಉದ್ದೇಶದಿಂದ ಜಾರಿ ಮಾಡಿರುವ ಈ ನಿಯಮದ ವಿರುದ್ಧ ಸಿಬ್ಬಂದಿ ತಿರುಗಿಬಿದ್ದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜನರೆದುರು ಡ್ರಿಲ್ ಮಾಡಿದರೆ ನಗೆಪಾಟಲಿಗೀಡಾಗುತ್ತೇವೆಂದು ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಸಾರ್ಪಿ), ಇಂಡಿಯನ್ ರಿಸರ್ವ್ ಪೊಲೀಸ್ (ಐಆರ್ಬಿ) ಮತ್ತು ಕೆಎಸ್ಸಾರ್ಪಿ ತರಬೇತಿ ಶಾಲೆಗಳಿಂದ ಬಂದೋಬಸ್ತ್ ಕರ್ತವ್ಯಗಳಿಗೆ ನಗರ ಹಾಗೂ ಜಿಲ್ಲಾ ಘಟಕಗಳಿಗೆ ನಿಯೋಜನೆಗೊಳ್ಳುವ ತುಕಡಿ ಸಿಬ್ಬಂದಿಗೆ ಡ್ರಿಲ್ ಕಡ್ಡಾಯ. ಪ್ರತಿ ಎರಡು ಗಂಟೆಗೊಮ್ಮೆ ಕಡ್ಡಾಯವಾಗಿ 10 ನಿಮಿಷ ಲಘು ವ್ಯಾಯಾಮ ಮಾಡಿಸಬೇಕು ಎಂದು ಎಲ್ಲ ವಲಯಾಧಿಕಾರಿಗಳಿಗೆ ಪೊಲೀಸ್ ಇಲಾಖೆ ಮೇ 15ರಂದು ಆದೇಶ ಹೊರಡಿಸಿದೆ. ರಾಜ್ಯ ಸಶಸ್ತ್ರ ಮೀಸಲು ಪಡೆಯಲ್ಲಿ ಅಂದಾಜು 32 ಸಾವಿರ ಪೊಲೀಸರಿದ್ದಾರೆ.
1.ಅಧಿಕಾರಿ/ಸಿಬ್ಬಂದಿ ಮಾನಸಿಕ/ದೈಹಿಕ ಚಟುವಟಿಕೆಗೆ 2 ಗಂಟೆಗೊಮ್ಮೆ 10 ನಿಮಿಷ ಡ್ರಿಲ್
2. ಬಂದೋಬಸ್ತ್ಗೆ ತುಕಡಿಗಳು ನಿಯೋಜಿತ ಸ್ಥಳದಲ್ಲೇ ಲಘು ವ್ಯಾಯಾಮ ಮಾಡಬೇಕು
3. ಡ್ರಿಲ್ಗೆ ಅವಕಾಶವಿರುವ ಸ್ಥಳದಲ್ಲೇ ನಿಯೋಜಿಸಲು ಆಯಾ ಠಾಣಾಧಿಕಾರಿಗಳಿಗೆ ಸೂಚನೆ
4. ಮೇ 9ರಂದು ಕೆಎಸ್ಸಾರ್ಪಿ ಎಡಿಜಿಪಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ವನಿಸಿದಂತೆ ಜಾರಿ
1. ನಗರದ ಪ್ರಮುಖ ಸರ್ಕಲ್, ದೇವಸ್ಥಾನ, ಸೂಕ್ಷ್ಮ ಸ್ಥಳಗಳಲ್ಲಿ ಕರ್ತವ್ಯಕ್ಕೆ ತುಕಡಿ ನಿಯೋಜನೆ
2. ಹತ್ತಾರು ಸಿಬ್ಬಂದಿ ಇರುವ ಕಾರಣ ವ್ಯಾಯಾಮಕ್ಕೆ ನಿಗದಿತ ಸ್ಥಳ ಅಥವಾ ಮೈದಾನ ಬೇಕು
3. ಆಯಾ ವ್ಯಾಪ್ತಿಯ ಠಾಣಾಧಿಕಾರಿ ವ್ಯಾಯಾಮ ಮಾಡಲು ಹತ್ತಿರದಲ್ಲಿ ಸ್ಥಳ ಹುಡುಕುವುದು ಹೇಗೆ?
4. ಕರ್ತವ್ಯ ನಿರ್ವಹಣೆ ಬಿಟ್ಟು ಪ್ರತಿ 2 ಗಂಟೆಗೊಮ್ಮೆ ಮೈದಾನಕ್ಕೆ ಹೋಗಿ ಡ್ರಿಲ್ ಮಾಡುವುದು ಹೇಗೆ?
5. ಸಮವಸ್ತ್ರ ಧರಿಸಿರುವ ಸಿಬ್ಬಂದಿ, ಸಾರ್ವಜನಿಕರ ಎದುರು ವ್ಯಾಯಾಮ ಮಾಡುವುದು ಹೇಗೆ?
6. ಜನರೆದುರು ಹಾಸ್ಪಾಸ್ಪದ ಆಗುವುದರಿಂದ ಇನ್ನಷ್ಟ್ಟು ಮಾನಸಿಕ ಖಿನ್ನತೆ ಎದುರಾಗುವ ಆತಂಕ