

ಬೆಂಗಳೂರು: ಶೀಘ್ರವೇ ರಾಜ್ಯದ ಜನತೆಗೆ ಅನ್ನ ಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ(KH Muniyappa) ಹೇಳಿದ್ದಾರೆ.
"ಕೇಂದ್ರ ಸರ್ಕಾರ(Central Government) ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಆಹಾರ ಸಚಿವ, ದೇವರು ಆದಷ್ಟು ಬೇಗ ಇದಕ್ಕೆ ದಾರಿ ತೋರಿಸಲಿ ಅಂತ ನಾನು ಬೇಡಿಕೊಂಡಿದ್ದೇನೆ. ನಿನ್ನೆ ಪಿಯುಷ್ ಗೋಯಲ್ ಸಮಯ ಕೊಡುತ್ತೇವೆ ಎಂದು ಹೇಳಿ ನಮಗೆ ಸಮಯ ನೀಡಲಿಲ್ಲ! ಬಡವರ ಅಕ್ಕಿ ವಿಚಾರದಲ್ಲಿ ಆಟವಾಡುತ್ತಿದ್ದಾರೆ, ರಾಜಕೀಯ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಕೇಂದ್ರ ಸರ್ಕಾರ ಕೊಡಲ್ಲ ಎಂದು ಹೇಳಿದ್ದಕ್ಕೆ ನಮ್ಮದೇ ಆದ ಹೊಸದೊಂದು ವ್ಯವಸ್ಥೆಯನ್ನು ನಾವು ಮಾಡಿಕೊಂಡಿದ್ದೇವೆ. ಜುಲೈ 1 ರಂದು ಅಕ್ಕಿ ಕೊಡುವುದಕ್ಕೆ ನಮ್ಮ ಸರ್ಕಾರದಿಂದ ಆಗದಿರಬಹುದು. ಆದ್ರೆ, ಆಗಸ್ಟ್ 1ರ ಮುನ್ನವೇ ಅಕ್ಕಿ ಕೊಡುತ್ತೇವೆ. ನಮಗೆ ಪಂಜಾಬ್(Punjab), ಛತ್ತೀಸ್ಗಢ ರಾಜ್ಯಗಳು ಅಕ್ಕಿ ನೀಡಲು ಸಹಾಯ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ" ಎಂದು ಹೇಳಿದರು.
"ಪಂಜಾಬ್, ಛತ್ತೀಸ್ಗಢ ರಾಜ್ಯಗಳಿಂದ ಅಕ್ಕಿಯನ್ನು ಪಡೆಯಲು ತಗಲುವ ಟ್ರಾನ್ಸಪೋರ್ಟೇಷನ್ ಚಾರ್ಜ್ ಅಧಿಕವಾಗಲಿದೆ ಎಂಬುದನ್ನು ಅರಿತು ನಾವು ಬೇರೆ ವ್ಯವಸ್ಥೆ ಮಾಡಲು ಚಿಂತನೆ ನಡೆಸುತ್ತಿದ್ದೇವೆ" ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.