More

    ಜಲಾಂತರ್ಗಾಮಿ ನೌಕೆ ನಾಪತ್ತೆ: ಕೆಲವೇ ಗಂಟೆಗಳಲ್ಲಿ ಆಮ್ಲಜನಕ ಖಾಲಿ, ಇನ್ನೂ ಸಿಗದ ಸುಳಿವು

    ಲಂಡನ್​: ಟೈಟಾನಿಕ್​ ಹಡಗಿನ ಅವಶೇಷಗಳನ್ನು ವೀಕ್ಷಿಸಲು ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿ ನಾಪತ್ತೆಯಾಗಿದ್ದ ಐವರು ಸಿಬ್ಬಂದಿಯ ರಕ್ಷಣಾ ಕಾರ್ಯ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಆದರೆ, ಕಹಿ ಸುದ್ದಿ ಏನೆಂದರೆ, ನೌಕೆಯಲ್ಲಿನ ಆಮ್ಲಜನಕ ಕೆಲವೇ ಗಂಟೆಗಳಿಗೆ ಮಾತ್ರ ಸೀಮಿತವಾಗಿದ್ದು, ಅನಿಶ್ಚಿತತೆ ಹಾಗೇ ಮುಂದುವರಿದಿದೆ.

    ಈಗಾಗಲೇ ರಕ್ಷಣಾ ತಂಡಗಳು ಹೆಚ್ಚಿನ ಹಡುಗಗಳು ಮತ್ತು ಸೇನಾ ವಿಮಾನಗಳೊಂದಿಗೆ ಕಾರ್ಯಾಚರಣೆಗೆ ವೇಗ ನೀಡಿವೆ. ನಿರಂತರ ಹುಡುಕಾಟದಲ್ಲಿವೆ. ಎರಡೂವರೆ ಮೈಲುಗಳಷ್ಟು ಆಳದ ನೀರಿನಲ್ಲಿ ಯುಎಸ್​ ಕನೆಕ್ಟಿಕಟ್‌ ರಾಜ್ಯದ ಎರಡು ಪಟ್ಟು ಗಾತ್ರದ ಪ್ರದೇಶವನ್ನು ರಕ್ಷಣಾ ಸಿಬ್ಬಂದಿ ಶೋಧಿಸುತ್ತಿದ್ದಾರೆ. ಜಲಾಂತರ್ಗಾಮಿ ನೌಕೆಯಲ್ಲಿರುವ ಐವರು ಮಂದಿಯನ್ನು ಕಾಪಾಡುವ ಭರವಸೆ ಈಗಲೂ ಉಳಿದಿದೆ. ಆದರೆ, ಇನ್ನು 4 ಗಂಟೆಗೆ ಆಗುವಷ್ಟು ಆಮ್ಲಜನಕ ಇರುವುದರಿಂದ ಆತಂಕವೂ ಹೆಚ್ಚಿದೆ.

    ಇದನ್ನೂ ಓದಿ: ಕೋಲಾರದಲ್ಲಿ ಸಾಲ ವಸೂಲಿಗೆ ಹೋದ ಬ್ಯಾಂಕ್​ ಸಿಬ್ಬಂದಿ ಬೈಕ್​ಗೆ ಬೆಂಕಿಯಿಟ್ಟ ಮಹಿಳೆಯರು

    ಇದರ ನಡುವೆ ಹೊಸ ಆರೋಪಗಳು ಸಹ ಹುಟ್ಟಿಕೊಂಡಿವೆ. ನಾಪತ್ತೆಯಾದ ಸಬ್‌ಮರ್ಸಿಬಲ್‌ನ ಅಭಿವೃದ್ಧಿಯ ಸಮಯದಲ್ಲಿ ಹಡಗಿನ ಸುರಕ್ಷತೆಯ ಬಗ್ಗೆ ಗಮನಾರ್ಹ ಎಚ್ಚರಿಕೆಗಳನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.

    ನಿನ್ನೆಯಷ್ಟೇ ನಾಪತ್ತೆಯಾಗಿರುವ ನೌಕೆಯಿಂದ ಪ್ರತಿ ಅರ್ಧಗಂಟೆಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ ರಕ್ಷಣಾ ತಂಡಗಳು ತಿಳಿಸಿದ್ದವು. ಯುಎಸ್​ಮತ್ತು ಕೆನಡಾದ ಕರಾವಳಿ ಪಡೆ ಮತ್ತು ಫ್ರಾನ್ಸ್​ನ ಸಂಶೋಧನಾ ಹಡಗುಗಳು ಕಾಣೆಯಾಗಿರುವ ಆರ್ಕಾ (ಸಾಗರದ ಡಾಲ್ಫಿನ್ ಕುಟುಂಬಕ್ಕೆ ಸೇರಿದ ಹಲ್ಲಿನ ತಿಮಿಂಗಿಲವಾಗಿದ್ದು, ಇದನ್ನು ಕಿಲ್ಲರ್​ ತಿಮಿಂಗಲ ಎಂದು ಕರೆಯಲಾಗುತ್ತದೆ) ಗಾತ್ರದ ಜಲಾಂತರ್ಗಾಮಿ ನೌಕೆಯ ಪತ್ತೆಗೆ ನಿರಂತರವಾಗಿ ಶ್ರಮಿಸುತ್ತಿವೆ. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ ಎಂದು ತಿಳಿಸಿದ್ದವು.

    ಕಳೆದ ಭಾನುವಾರ ಟೈಟಾನಿಕ್ ಪಳೆಯುಳಿಕೆ ವೀಕ್ಷಣೆಗೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಪ್ರಯಾಣ ಹೊರಟಿದ್ದ 21-ಅಡಿ ಉದ್ದದ (6.5 ಮೀಟರ್) ಜಲಾಂತರ್ಗಾಮಿ ನೌಕೆ ‘ಟೈಟಾನ್’ ಎಲ್ಲ ಸಂಪರ್ಕಗಳನ್ನು ಕಳೆದುಕೊಂಡಿದೆ. (ಏಜೆನ್ಸೀಸ್​)

    ಟೈಟಾನಿಕ್​ ಅವಶೇಷ ವೀಕ್ಷಿಸಲು ಹೋಗಿ ನಾಪತ್ತೆಯಾಗಿದ್ದ ಐವರು ಬದುಕಿರುವ ಸಾಧ್ಯತೆ: ಸಿಕ್ಕಿತು ಮಹತ್ವದ ಸುಳಿವು

    ಬಾಡಿಗೆದಾರರ ಕಿರುಕುಳ ಸಹಿಸದೆ ಪ್ರಾಣ ಬಿಟ್ಟ ಮನೆ ಒಡತಿ; ಮಗಳ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts