More

    ಪಾಕಿಸ್ತಾನದ ಬಳಿ ಅಣು ಬಾಂಬ್​ ಇದೆ, ಭಾರತ ಅವರನ್ನು ಗೌರವಿಸುವುದು ಸೂಕ್ತ: ಮಣಿಶಂಕರ್ ಅಯ್ಯರ್

    ನವದೆಹಲಿ: ಕಾಂಗ್ರೆಸ್​ ಪಕ್ಷಕ್ಕೂ ವಿವಾದಾತ್ಮಕ ಹೇಳಿಕೆಗಳಿಗು ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಚುನಾವಣೆ ಸಮಯದಲ್ಲಿ ಹಿರಿಯ ಕಾಂಗ್ರೆಸ್​ ನಾಯಕರು ನೀಡುವ ಹೇಳಿಕೆ ಪಕ್ಷಕ್ಕೆ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್​ ನಾಯಕ ಮಣಿಶಂಕರ್ ಅಯ್ಯರ್​ ನೀಡಿರುವ ಹೇಳಿಕೆ ಕಾಂಗ್ರೆಸ್​ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

    ಅಣು ಬಾಂಬ್​ ಹೊಂದಿರುವ ಪಾಕಿಸ್ತಾನವನ್ನು ಭಾರತ ಗೌರವಿಸಬೇಕೇ ಹೊರತು ತನ್ನ ಸೇನಾ ಬಲವನ್ನು ಹೆಚ್ಚಿಸಬಾರದು. ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಯಾವಾಗಲೂ ಹೇಳುತ್ತಿರುತ್ತದೆ, ಆದರೆ ಭಯೋತ್ಪಾದನೆ ಮಾತುಕತೆಯಿಂದ ಮಾತ್ರ ಕೊನೆಗೊಳ್ಳುತ್ತದೆ. ಭಾರತ ಸರ್ಕಾರ ಬಯಸಿದರೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬಹುದು, ಆದರೆ ನೆರೆಯ ದೇಶವನ್ನು ಗೌರವಿಸದಿದ್ದರೆ ಭಾರೀ ಬೆಲೆ ತೆರಬೇಕಾಗಬಹುದು ಎಂದು ಹೇಳಿದ್ದಾರೆ.

    ಕೆಲವು ಹುಚ್ಚರು ಲಾಹೋರ್​ನಲ್ಲಿ ಬಾಂಬ್​ ಸ್ಫೋಟಿಸಲು ಯೋಚಿಸಿದರೆ  ಪಾಕ್​ನವರಿಗೆ ಅಮೃತಸರವನ್ನು ತಲುಪಲು 8 ಸೆಕೆಂಡುಗಳಲ್ಲೂ ತೆಗೆದುಕೊಳ್ಳುವುದಿಲ್ಲ. ನಾವು ಅವರಿಗೆ ಗೌರವ ನೀಡದಿದ್ದರೆ ಅವರು ಭಾರತದ ವಿರುದ್ಧ ಅಣುಬಾಂಬ್ ಪ್ರಯೋಗಿಸಲು ಯೋಚಿಸುತ್ತಾರೆ. ನಾವು ಅವರನ್ನು ಗೌರವಿಸಿದರೆ ಅವರು ಶಾಂತಿಯಿಂದ ಇರುತ್ತಾರೆ, ಧಿಕ್ಕಿರಿಸಿದರೆ ಭಾರತದ ವಿರುದ್ಧ ಅಣುಬಾಂಬ್​ ದಾಳಿ ನಡೆಸುತ್ತಾರೆ. ದ್ವೇಷ ಸಾಧಿಸಿ ಅಥವಾ ಬಂದೂಕು ತೋರಿಸಿ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನವೂ ಸಾರ್ವಭೌಮ ರಾಷ್ಟ್ರ ಅದಕ್ಕೂ ಗೌರವವಿದೆ ಎಂದು ಹಿರಿಯ ಕಾಂಗ್ರೆಸ್​ ನಾಯಕ ಮಣಿಶಂಕರ್​ ಅಯ್ಯರ್​ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ನಾವು ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದೇವೆ; ಗೆಲುವಿನ ಬಳಿಕ ನಾಯಕ ಫಾಫ್​ ಡು ಪ್ಲೆಸಿಸ್​ ಹೀಗಂದಿದ್ಯಾಕೆ

    ಇತ್ತ ಮಣಿಶಂಕರ್ ಅಯ್ಯರ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಶೆಹಜಾದ್​ ಪೂನಾವಾಲಾ, ಪಾಕಿಸ್ತಾನದ ಮೇಲೆ ಕಾಂಗ್ರೆಸ್​ಗಿರುವ ಪ್ರೀತಿ ಎಂಥದ್ದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವಂತೆ ಪಾಕಿಸ್ತಾನಕ್ಕೆ ಮೊರೆ ಹೋದವರು, 26/11, ಪುಲ್ವಾಮಾ ಮತ್ತು ಪೂಂಚ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ಕ್ಲೀನ್​ ಚಿಟ್​ ನೀಡಿ ಭಯೋತ್ಪಾದಕರನ್ನು ಕಳುಹಿಸುವವರು ಗೌರವಾನ್ವಿತರು, ಆದರೆ ಭಾರತೀಯ ಸೇನೆಯನ್ನು ಅವಮಾನಿಸುವವರಿಗೆ ಜನ ಸರಿಯಾದ ಪಾಠ ಕಲಿಸಲಿದ್ದಾರೆ.ಕಳೆದ ಕೆಲ ದಿನಗಳಿಂದ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿ ಪಾಕಿಸ್ತಾನದ ನಾಯಕರು ಟ್ವೀಟ್​ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಇದು ಮಣೀಶಂಕರ್​ ಅಯ್ಯರ್ ಅವರ ಚಿಂತನೆಯಲ್ಲ. ಇದು ಸಂಪೂರ್ಣ ಕಾಂಗ್ರೆಸ್​ನ ಚಿಂತನೆ ಎಂದು ಕಿಡಿಕಾರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರವಿ ಕಿಶನ್, ಮಣಿಶಂಕರ್​ ಅಯ್ಯರ್​ ಅವರು ಎಲ್ಲಿಯಾದರು ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಆರ್ಥಿಕ ಸಂಕಷ್ಟದಿಂದ ನಲುಗಿ ಭಿಕ್ಷೆ ಬೇಡುತ್ತಿರುವ ದೇಶಕ್ಕೆ ಭಾರತ ಗೌರವವನ್ನು ನೀಡಬೇಕೆಂದು ಬಯಸುತ್ತಾರೆ. ಇದು ಕಾಂಗ್ರೆಸ್​ನ ಭಾರತವಲ್ಲ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭಾರತ ಶಕ್ತಿಶಾಲಿಯಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts